More

    ಬರ್ವಿುಂಗ್​ಹ್ಯಾಂ ಗೇಮ್ಸ್​ಗೆ ಭಾರತದ ಬಹಿಷ್ಕಾರವಿಲ್ಲ; ಬಾಯ್ಕಾಟ್​ ನಿರ್ಧಾರ ಹಿಂಪಡೆದ ಐಒಎ

    ನವದೆಹಲಿ: ಶೂಟಿಂಗ್ ಕ್ರೀಡೆಯನ್ನು 2022ರ ಬರ್ವಿುಂಗ್​ಹ್ಯಾಂ ಕಾಮನ್ವೆಲ್ತ್ ಗೇಮ್ಸ್​ನಿಂದ ಕೈಬಿಟ್ಟಿದ್ದ ವಿಚಾರಕ್ಕಾಗಿ ಗೇಮ್ಸ್​ಅನ್ನು ಬಾಯ್ಕಾಟ್ ಮಾಡುವ ನಿರ್ಧಾರ ಮಾಡಿದ್ದ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಈಗ ತನ್ನ ನಿರ್ಧಾರವನ್ನು ಹಿಂಪಡೆದಿದೆ. ಅದಲ್ಲದೆ, 2026 ಅಥವಾ 2030ರ ಕಾಮನ್ವೆಲ್ತ್ ಗೇಮ್ಸ್​ಗೆ ಬಿಡ್ ಸಲ್ಲಿಸುವ ನಿರ್ಧಾರವನ್ನೂ ಮಾಡಿದೆ.

    ಸೋಮವಾರ ನಡೆದ ಭಾರತೀಯ ಒಲಿಂಪಿಕ್ ಸಂಸ್ಥೆಯ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ. 2010ರಲ್ಲಿ ದೆಹಲಿಯಲ್ಲಿ ಗೇಮ್್ಸ ಆಯೋಜನೆ ಮಾಡಿದ್ದ ಭಾರತ, ಈಗ 2026 ಹಾಗೂ 2030ರ ಗೇಮ್ಸ್​ಗೆ ಬಿಡ್ ಮಾಡಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿಯನ್ನು ಕೇಳಲಿದೆ.

    ಕಾಮನ್ವೆಲ್ತ್ ಗೇಮ್ಸ್​  ಫೆಡರೇಷನ್ (ಸಿಜಿಎಫ್) ಅಧ್ಯಕ್ಷೆ ಡೇನ್ ಲೌಸಿ ಮಾರ್ಟಿನ್, ಭಾರತ ತಂಡ ಬರ್ವಿುಂಗ್​ಹ್ಯಾಂ ಗೇಮ್ಸ್​ನಲ್ಲಿ ಸ್ಪರ್ಧೆ ಮಾಡುವ ನಿರ್ಧಾರದಿಂದ ಸಂತಸವಾಗಿದೆ ಎಂದಿದ್ದಾರೆ. ಸಿಜಿಎಫ್ ಹಾಗೂ ಸಂಪೂರ್ಣ ಕಾಮನ್ವೆಲ್ತ್ ಕ್ರೀಡಾ ಚಳುವಳಿ, ಭಾರತದ ಈ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ಮಾರ್ಟಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವೆಂಬರ್​ನಲ್ಲಿ ಸಿಜಿಎಫ್ ನಿಯೋಗದ ಭಾರತದ ಭೇಟಿಯ ವೇಳೆ, ಕಾಮನ್ವೆಲ್ತ್ ಗೇಮ್್ಸ ಹಾಗೂ ಕಾಮನ್ವೆಲ್ತ್ ಕ್ರೀಡಾ ಚಳುವಳಿಯಲ್ಲಿ ಭಾರತದ ಕ್ರೀಡಾಪಟುಗಳು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ನಮಗೆ ಅನಿಸಿತ್ತು. ಈ ಭೇಟಿಯ ವೇಳೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್​ನೊಂದಿಗೆ ಸಿಜಿಎಫ್​ನ ಬಂಧ ಇನ್ನಷ್ಟು ಗಟ್ಟಿಯಾಗಿದೆ ಎಂದು ಹೇಳಿದ್ದಾರೆ. ಅದರೊಂದಿಗೆ ಭಾರತ 2026 ಅಥವಾ 2030ರ ಗೇಮ್ಸ್​ಗೆ ಬಿಡ್ ಸಲ್ಲಿಸುವ ನಿರ್ಧಾರ ಮಾಡಿದ್ದರಿಂದ ಮತ್ತಷ್ಟು ಸಂಭ್ರಮವಾಗಿದೆ ಎಂದಿದ್ದಾರೆ.

    ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್​ಷಿಪ್​ಗೆ ಒಪ್ಪಿಗೆ

    ಬರ್ವಿುಂಗ್​ಹ್ಯಾಂ ಗೇಮ್ಸ್​ನಲ್ಲಿ ಶೂಟಿಂಗ್ ಕ್ರೀಡೆಯನ್ನು ಕೈಬಿಟ್ಟ ಕಾರಣಕ್ಕಾಗಿ ಇದನ್ನು ಸರಿದೂಗಿಸುವ ಸಲುವಾಗಿ ಸಿಜಿಎಫ್, ಭಾರತಕ್ಕೆ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್​ಷಿಪ್ ಆತಿಥ್ಯದ ಭರವಸೆ ನೀಡಿತ್ತು. ರಾಷ್ಟ್ರೀಯ ರೈಫಲ್ ಸಂಸ್ಥೆ (ಎನ್​ಆರ್​ಎಐ) ಶಿಫಾರಸಿಗೆ ಐಒಎ ಒಪ್ಪಿಗೆ ನೀಡಿದೆ. ಬರ್ವಿುಂಗ್​ಹ್ಯಾಂ ಗೇಮ್್ಸ ಗೂ ಮುನ್ನ 2020ರ ಮಾರ್ಚ್​ನಲ್ಲಿ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್​ಷಿಪ್ ಭಾರತದಲ್ಲಿ ನಡೆಯಲಿದ್ದು, ಇದಕ್ಕೆ ಕಾಮನ್ವೆಲ್ತ್ ಗೇಮ್್ಸ ಪದಕದ ಮಾನ್ಯತೆ ಇರಲಿದೆ. ಐಒಎ ಈ ಶಿಫಾರಸನ್ನು ಸಿಜಿಎಫ್​ನ ವ್ಯವಸ್ಥಾಪಕ ಸಮಿತಿಯ ಮುಂದೆ ಇಡಲಿದ್ದು, ಇದಕ್ಕೆ ಒಪ್ಪಿಗೆ ಪಡೆದುಕೊಳ್ಳಬೇಕಿದೆ. -ಪಿಟಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts