25.8 C
Bangalore
Friday, December 13, 2019

ಮೌನತಪಸ್ವಿಗಳ ಶತಮಾನೋತ್ಸವ

Latest News

ನಾಡಿನ ಹಿತ ಕಾಪಾಡುವಲ್ಲಿ ಮಠಗಳು ಶ್ರಮಿಸುತ್ತಿವೆ

ಶಹಾಪುರ: ಅನಾದಿ ಕಾಲದಿಂದಲೂ ನಾಡಿನ ಹಿತ ಕಾಪಾಡುವಲ್ಲಿ ಮಠಮಾನ್ಯಗಳು ಸಾಕಷ್ಟು ಶ್ರಮಿಸುತ್ತಿವೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ಶುಕ್ರವಾರ ನಗರದ ಕುಂಬಾರಗೇರಿ...

ಕಾಲುವೆ ಒಡೆದು ರೈತರ ಜಮೀನಿನಲ್ಲಿ ನೀರು !

ಯಾದಗಿರಿ: ಸನ್ನತಿ ಏತ ನೀರಾವರಿ ಯೋಜನೆಯಡಿ ಕೆಬಿಜೆಎನ್ಎಲ್ನಿಂದ ನಿಮರ್ಿಸಲಾಗಿದ್ದ ಕಾಲುವೆ ಒಡೆದು ರೈತರ ಜಮೀನಿನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಘಟನೆ ತಾಲೂಕಿನ...

ಜಟಿಲತೆ ಪ್ರಶ್ನೆಗಳಲ್ಲಿಲ್ಲ, ವಿದ್ಯಾರ್ಥಿಗಳ ಮನದಲ್ಲಿದೆ

ತಾಳಿಕೋಟೆ: ಪರೀಕ್ಷೆ ಎಂಬುದು ಕಬ್ಬಿಣದ ಕಡಲೆಯಲ್ಲ. ಅದು ವಿದ್ಯಾರ್ಥಿಗಳಲ್ಲಿರುವ ಕೌಶಲ ಹಾಗೂ ಪ್ರತಿಭೆ ಹೊರಹಾಕಲಿರುವ ಸಾಧನ ಎಂದು ಬೆಂಗಳೂರಿನ ಶೈಕ್ಷಣಿಕ ತಜ್ಞ ಹಾಗೂ...

ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ

ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಅಗಸ್ತ್ಯ ಅಂತಾರಾಷ್ಟೀಯ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ...

ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ಪ್ರತಿಭಟನೆ

ಇಂಡಿ: ಪೌರತ್ವ ತಿದ್ದುಪಡಿ ಮಸೂದೆ ಖಂಡಿಸಿ ಜಮೀತತಲ್ಮಾ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ನೇತೃತ್ವದಲ್ಲಿ ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ...

|ಪ್ರಶಾಂತ ರಿಪ್ಪನ್​ಪೇಟೆ

‘ಮಾತು ಬೆಳ್ಳಿ, ಮೌನ ಬಂಗಾರ’ ಎಂಬ ನಾಣ್ಣುಡಿಯಂತೆ; ದೇವರ ಅರ್ಚಿಸುವುದಕ್ಕೆ ಮಂತ್ರ, ಶ್ಲೋಕ, ಪ್ರಾರ್ಥನೆ, ಗಾಯನ ಹೀಗೆ ಸಾಕಷ್ಟು ವಿಧಾನಗಳಿದ್ದರೂ ನಮ್ಮ ಹರಕೆಯನ್ನು ಸಲ್ಲಿಸಲು ಅಂತಿಮವಾಗಿ ಮೌನಕ್ಕೆ ಶರಣಾಗಲೇಬೇಕು. ಅಂತಹ ಮೌನ ತಪಸ್ಸಿನಿಂದ ಅಧ್ಯಾತ್ಮದ ಅನುಭೂತಿಯನ್ನು ಸಾಧಿಸಿದ ಮಹಾನ್ ಶಿವಯೋಗಿ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು.

ಬಾಗಲಕೋಟೆ ತಾಲೂಕಿನ ಬಿಲ್​ಕೆರೂರು ಶ್ರೀ ಬಿಲ್ವಾಶ್ರಮ ಹಿರೇಮಠದ ಪಟ್ಟಾಧ್ಯಕ್ಷರಾಗಿದ್ದ ಶ್ರೀ ಷ.ಬ್ರ. ರುದ್ರಮುನಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮೌನತಪಸ್ವಿಗಳಾಗಿ ಈ ಭಾಗದ ಭಕ್ತರ ಪಾಲಿಗೆ ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದರು. ಉಜ್ಜಯಿನಿ ಪೀಠದ ಶಾಖಾ ಪುತ್ರವರ್ಗ ಪರಂಪರೆಗೆ ಸೇರಿದ್ದ ಬಿಲ್​ಕೆರೂರು ಹಿರೇಮಠದಲ್ಲಿ 1909ರಲ್ಲಿ ಜನಿಸಿದ ಶ್ರೀಗಳು ಬೆಳೆದಿದ್ದು ಆಧ್ಯಾತ್ಮಿಕ ಪರಿಸರದಲ್ಲಿ.

ಉಜ್ಜಯಿನಿ ಲಿಂಗೈಕ್ಯ ಜಗದ್ಗುರು, ವಿಭೂತಿಪುರುಷ ಶ್ರೀ ಸಿದ್ಧಲಿಂಗ ಭಗವತ್ಪಾದರ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದ ರುದ್ರಮುನಿ ಸ್ವಾಮಿಗಳು ದಿನಕಳೆದಂತೆ ಅಧ್ಯಾತ್ಮದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದರು. ಹತ್ತನೆಯ ವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಾಧ್ಯಕ್ಷರಾಗಿ ನೇಮಕಗೊಂಡ ನಂತರ ಗ್ರಾಮದ ನಡುವೆ ಇದ್ದ ಮಠವನ್ನು ತೊರೆದು ಊರ ಹೊರಗಿನ ಅಡವಿಯಲ್ಲಿ ಕುಳಿತು ನಿರಂತರ ಅನುಷ್ಠಾನಗೈಯತೊಡಗಿದರು. ಸುಮಾರು ಹನ್ನೆರಡು ವರ್ಷಗಳ ಕಾಲ ಸಂಪೂರ್ಣ ಮೌನ ತಪಸ್ಸನ್ನು ಆಚರಿಸಿದ ಶ್ರೀಗಳು ಧಾರ್ವಿುಕವಾಗಿ ಶಕ್ತಿ ಸಂಪಾದಿಸಿಕೊಂಡರು. ನಂತರ ಶ್ರೀಗಳು ತಪಸ್ಸು ಆಚರಿಸಿದ ಸ್ಥಳ ಪ್ರಸಿದ್ಧವಾಯಿತು. ಮುಂದೆ ನಡೆದದ್ದೆಲ್ಲ ಇತಿಹಾಸ.

ಲೌಕಿಕ ಪ್ರಪಂಚದ ಯಾವುದೇ ವಿಷಯಗಳಿಗೂ ಅಂಟಿಕೊಂಡಿರದ ಶ್ರೀಗಳು ಭಕ್ತರಿಂದ ಬಂದ ಕಾಣಿಕೆಯ ಹಣವನ್ನು ಭಕ್ತರ ಅನುಕೂಲಕ್ಕಾಗಿ ವಿನಿಯೋಗಿಸಿದರು. ಇಂದು ಬಿಲ್​ಕೆರೂರು ಹಿರೇಮಠವು ಶೈಕ್ಷಣಿಕ ಸಾಧನೆಯಲ್ಲಿ ಉನ್ನತ ಸ್ಥಾನವನ್ನು ಹೊಂದಿರುವುದರ ಹಿಂದಿನ ಪ್ರೇರಕ ಶಕ್ತಿ ಶ್ರೀ ರುದ್ರಮುನಿ ಸ್ವಾಮಿಗಳು. ಸುಮಾರು ಆರು ದಶಕಗಳ ಕಾಲ ಶ್ರೀಮಠದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ಶ್ರೀಗಳು 1982ರಲ್ಲಿ ಲಿಂಗೈಕ್ಯರಾದರು.

ಶತಮಾನೋತ್ಸವ ಸಮಾರಂಭ: ಬಿಲ್​ಕೆರೂರಿನ ಬಿಲ್ವಾಶ್ರಮ ಹಿರೇಮಠದ ಭಕ್ತರು ಶ್ರೀ ರುದ್ರಮುನಿಸ್ವಾಮಿಗಳ ಶತಮಾನೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಹಮ್ಮಿಕೊಂಡಿದ್ದಾರೆ. ಶ್ರೀಗಳು ಜನಿಸಿ 110 ವರ್ಷಗಳಾಗಿದ್ದು, ಅವರ ನೂತನ ಗದ್ದುಗೆ ನಿರ್ವಣಗೊಂಡ ನಂತರವೇ ಶತಮಾನೋತ್ಸವ ಆಚರಿಸಬೇಕೆಂದು ಪ್ರಸ್ತುತ ಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಂಕಲ್ಪ ಮಾಡಿದ್ದರು. ಅವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮೇ 15ರಂದು ಶತಮಾನೋತ್ಸವಕ್ಕೆ ಚಾಲನೆ ದೊರೆತಿದ್ದು, 17ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇಂದು (16) ಶ್ರೀ ರುದ್ರಮುನಿ ಸ್ವಾಮಿಗಳ ಗದ್ದುಗೆ ಒಳಗೊಂಡಿರುವ ನೂತನ ಮಠದ ಲೋಕಾರ್ಪಣೆ ಜರುಗಲಿದೆ. ಹಾಗೆಯೇ ಪಂಚಪೀಠದ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀಶೈಲ, ಶ್ರೀ ಕಾಶೀ ಜಗದ್ಗುರುಗಳ ಅಡ್ಡಪಲ್ಲಕ್ಕಿಯೊಂದಿಗೆ ಪುರಪ್ರವೇಶ ಮತ್ತು ಸಂಜೆ ಬೃಹತ್ ಭಾವೈಕ್ಯತಾ ಧರ್ಮಸಮಾವೇಶ ಏರ್ಪಡಿಸಲಾಗಿದೆ. 17ರಂದು ಶತಮಾನೋತ್ಸವ ಸಮಾರಂಭ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

ಕಾರಣಾಗಮ ಅಮೃತಬಿಂದು ಬಿಡುಗಡೆ: ವಿಜಯವಾಣಿ ದಿನಪತ್ರಿಕೆಯಲ್ಲಿ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ಶಿವಾಗಮಗಳ ಶ್ಲೋಕಗಳಿಗೆ ವ್ಯಾಖ್ಯಾನವನ್ನು ಬರೆಯುತ್ತಿದ್ದಾರೆ.

‘ಅಮೃತಬಿಂದು’ ಎಂಬ ಶೀರ್ಷಿಕೆಯಡಿ ಪ್ರತಿನಿತ್ಯ ಪ್ರಕಟವಾಗುವ ವ್ಯಾಖ್ಯಾನಸಹಿತ ಶ್ಲೋಕಗಳನ್ನು ‘ಕಾರಣಾಗಮ ಅಮೃತಬಿಂದು’ ಎಂಬ ಹೆಸರಿನಲ್ಲೇ ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ.

ಜ್ಞಾನಪ್ರಸಾರದ ಈ ಅಮೂಲ್ಯ ಕೈಂಕರ್ಯಕ್ಕೆ ಕೈಜೋಡಿಸಿರುವ ಬಿಲ್​ಕೆರೂರ ಬಿಲ್ವಾಶ್ರಮ ಹಿರೇಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಅಮೃತಬಿಂದು ಪುಸ್ತಕದ ಪ್ರಕಟಣೆಯ ಸೇವೆಯನ್ನು ವಹಿಸಿಕೊಂಡಿದ್ದಾರೆ. ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಪ್ರಕಾಶನದ ವತಿಯಿಂದ ಪ್ರಕಟವಾಗುತ್ತಿರುವ ಈ ಪುಸ್ತಕವು ಇಂದು (16) ಬಿಲ್​ಕೆರೂರು ಮಠದಲ್ಲಿ ನಡೆಯುವ ಸಮಾರಂಭದಲ್ಲಿ ಬಿಡುಗಡೆಯಾಗಲಿದೆ. ಕಾಮಿಕಾದಿ ವಾತುಲಾಂತದವರೆಗಿನ 28 ಆಗಮಗಳಲ್ಲಿ ಒಂದಾದ ಕಾರಣಾಗಮದ 194 ಆಯ್ದ ಶ್ಲೋಕಗಳು ಮತ್ತು ಅವುಗಳ ಅರ್ಥ, ವಿವರವಾದ ವ್ಯಾಖ್ಯಾನ ಈ ಪುಸ್ತಕದಲ್ಲಿದೆ. ಶಿವ-ಪಾರ್ವತಿಯರ ಸಂವಾದರೂಪದಂತಿರುವ ಕಾರಣಾಗಮವು ಶಿವ-ಜೀವರ ಸಾಮರಸ್ಯ ರೂಪವಾದ ಅಮೃತತ್ವವನ್ನು ಪಡೆಯುವ ಉತ್ಕೃ್ಟ ಮಾರ್ಗವನ್ನೇ ಬೋಧಿಸಿದೆ. ಅದರಿಂದಾಗಿ ಈ ಶ್ಲೋಕಗಳು ಅಮೃತದ ಹನಿಗಳೇ ಆಗಿದ್ದು, ಕೃತಿಯ ಹೆಸರು ಸಾರ್ಥಕವಾಗಿದೆ.

(ಪ್ರತಿಕ್ರಿಯಿಸಿ: [email protected], [email protected])

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....