ಬರ್ಗರ್​ಗಾಗಿ ರೆಸ್ಟೋರೆಂಟ್​ ಎದುರು ಸರದಿ ಸಾಲಿನಲ್ಲಿ ನಿಂತ ಬಿಲ್​ ಗೇಟ್ಸ್​!

ನ್ಯೂಯಾರ್ಕ್​: ಬಿಲ್​ ಗೇಟ್ಸ್​ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಂಥ ಶ್ರೀಮಂತ ವ್ಯಕ್ತಿ ಬರ್ಗರ್​ಗಾಗಿ ಅಂಗಡಿ ಮುಂದೆ ಸರದಿ ಸಾಲಿನಲ್ಲಿ ನಿಂತ ಫೋಟೋ ವೈರಲ್​ ಆಗಿದ್ದು, ಅದನ್ನು ನೋಡಿದವರೆಲ್ಲ ಆಶ್ಚರ್ಯದಿಂದ ಹುಬ್ಬೇರಿಸಿದ್ದಾರೆ.

ಬಿಲ್​ ಗೇಟ್ಸ್​ ಅವರಿಗೆ ಬರ್ಗರ್​ ಎಂದರೆ ತುಂಬ ಪ್ರೀತಿ. ಬರ್ಗರ್​ ಕೊಳ್ಳುವುದಕ್ಕೋಸ್ಕರ ವಾಷಿಂಗ್ಟನ್​ ಸಿಯಾಟಲ್​ನಲ್ಲಿರುವ ಡಿಕ್ಸ್​ ಡ್ರೈವ್​ ಇನ್​ ಫಾಸ್ಟ್​ಫುಡ್​ ರೆಸ್ಟೋರೆಂಟ್​ಗೆ ತೆರಳಿದ ಬಿಲ್​ಗೇಟ್ಸ್​ ಅಲ್ಲಿ ಉಳಿದ ಗ್ರಾಹಕರೊಂದಿಗೆ ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಕೆಂಪು ಸ್ವೆಟರ್​ , ಬೂದು ಬಣ್ಣದ ಪ್ಯಾಂಟ್​ ಧರಿಸಿ, ಪ್ಯಾಂಟ್​ನ ಜೇಬಿನಲ್ಲಿ ಕೈ ಹಾಕಿಕೊಂಡು ಬರ್ಗರ್​ಗಾಗಿ ಕಾಯುತ್ತಿದ್ದು ಫೋಟೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಫೋಟೋಕ್ಕೆ 15,000 ಲೈಕ್ಸ್​ ಬಂದಿದ್ದು, 12,000 ಶೇರ್​ ಆಗಿದೆ. ಟೀಕೆ, ಹೊಗಳಿಕೆಯುಕ್ತ ಕಾಮೆಂಟ್​ಗಳೂ ಬಂದಿವೆ.

ಡಿಕ್ಸ್​ ಡ್ರೈವ್​ನಲ್ಲಿ ಅಗ್ಗದ ಬೆಲೆಗೆ ಬರ್ಗರ್​ ದೊರೆಯುತ್ತದೆ. ಬಿಲ್​ ಗೇಟ್ಸ್​ ಒಟ್ಟು 7.68 ಡಾಲರ್​ ನೀಡಿ ತಮ್ಮ ಬರ್ಗರ್​ ಪಡೆದಿದ್ದಾರೆ.