ಬೈಲಹೊಂಗಲ ಪಟ್ಟಣದಲ್ಲಿ ಸಂಭ್ರಮಾಚರಣೆ

ಬೈಲಹೊಂಗಲ: ಭಾರತೀಯ ವಾಯುಸೈನಿಕರು ವೈಮಾನಿಕ ದಾಳಿ ಮಾಡಿ ಪಾಕಿಸ್ತಾನ ಉಗ್ರರನ್ನು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಪಟ್ಟಣ ಗೊಂಬಿಗುಡಿಯ ಬಳಿ ಸಾರ್ವಜನಿಕರು ಸಂಭ್ರಮಾಚರಿಸಿದರು.

ಬೈಲಹೊಂಗಲ ಪುರಸಭೆ ಸದಸ್ಯ ಗುರು ಮೆಟಗುಡ್ಡ, ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಹಾಗೂ ಪುರಸಭೆ ಮಾಜಿ ಸದಸ್ಯ ಮಹೇಶ ಹರಕುಣಿ ಮಾತನಾಡಿ, ಭಾರತದ ಬೆಳವಣಿಗೆಯನ್ನು ಸಹಿಸದೆ ಕುತಂತ್ರ ಬುದ್ಧ ಹೊಂದಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಳಿಸಲು ಇನ್ನಷ್ಟು ದಾಳಿ ಆಗಬೇಕು. ವಾಯು ಸೇನಾ ದಾಳಿಯ ಶ್ರೇಯಸ್ಸು ಹುತಾತ್ಮ ಯೋಧರಿಗೆ ಸಲ್ಲಬೇಕು. ನಮ್ಮ ಯೋಧರ ರಕ್ತ ಹರಿಯದೇ ಪ್ರತ್ಯುತ್ತರ ನೀಡಿದ ನೆಚ್ಚಿನ ಪ್ರಧಾನಿ ನರೇಂದ್ರ ಮೊದಿ ಮತ್ತೊಮ್ಮೆ ದೇಶದ ಪ್ರಧಾನಿಗಳಾಗಬೇಕು ಎಂದರು. ಇದಕ್ಕೂ ಮುನ್ನ ನವಯುವ ಮಿತ್ರ ಸಂಘದ ಸದಸ್ಯರು ಪಟಾಕಿ ಸಿಡಿಸಿ ಸಿಹಿ ಹಂಚಿದರು. ಸುಧೀರ ಮಾಳೋದಯ, ಏಣಗಿಮಠ, ರಾಘವೇಂದ್ರ ಶೀಗಿಹಳ್ಳಿ, ಜಗದೀಶ ಲೋಕಾಪುರ ಇತರರು ಇದ್ದರು.