ಮಾಲ್ಡೀವ್ಸ್ ಹಿನ್ನೀರಲ್ಲಿ ಕತ್ರಿನಾ!

katrina

ಬಾರ್ ಬಾರ್ ದೇಖೋ… ಚಿತ್ರದ ಬಳಿಕ ಅಲ್ಲಿ ಇಲ್ಲಿ ಎಂದು ಓಡಾಡಿಕೊಂಡಿರುವ ಬಾಲಿವುಡ್ನ ಬೇಡಿಕೆಯ ನಟಿಯರಲ್ಲಿ ಒಬ್ಬರಾದ ಕತ್ರಿನಾ ಕೈಫ್ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಮಾದಕ ಉಡುಪಿನಲ್ಲಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿಕೊಂಡಿದ್ದಾರೆ.

ಮಾಲ್ಡೀವ್ಸ್ ಹಿನ್ನೀರು ಪ್ರದೇಶಕ್ಕೆ ಭೇಟಿ ನೀಡಿದಾಗಿನ ಛಾಯಾಚಿತ್ರ ಇದಾಗಿದೆ. ವಿಶೇಷ ಏನೆಂದರೆ ಕತ್ರಿನಾ ಸ್ವಿಮ್ೂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೆಂದೂ ಈ ಪರಿಯ ಡ್ರಸ್ನಲ್ಲಿ ಕಾಣಿಸಿಕೊಂಡಿದ್ದಿಲ್ಲ ಎನ್ನುವಂತೆ ಈಜುಡುಗೆಯಲ್ಲಿ ಪೋಸ್ ನೀಡಿರುವ ಫೋಟೊವನ್ನೇ ಪೋಸ್ಟ್ ಮಾಡಿರುವ ಕಾರಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಡ್ಡೆ ಹುಡುಗರ ಹೃದಯವನ್ನು ತಮ್ಮ ಮಾದಕ ನೋಟ, ಉಡುಗೆ, ನಡಿಗೆ, ಉಡುಪುಗಳಿಂದಲೇ ಕದಿಯುವ ತಾರೆಯರ ಸಾಲಿನಲ್ಲಿ ಕತ್ರಿನಾ ಸೇರ್ಪಡೆ ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ಈ ಪರಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಕ್ಕೆ ಇತ್ತೀಚೆಗಷ್ಟೇ ಪ್ರವೇಶಿಸಿರುವ ಕತ್ರಿನಾ ಕೈಫ್ ಇಂತದ್ದೊಂದು ಹಾಟ್ ಹಾಟ್ ಬಿಕಿನಿ ಉಡುಪಿನಲ್ಲಿರುವ ಫೋಟೊ ಪೋಸ್ಟ್ ಮಾಡಿರುವುದು ಬೆರಳೆಣಿಕೆಯಷ್ಟು ಬಾರಿ ಮಾತ್ರ ಎನ್ನುವುದು ಅವರ ಅಭಿಮಾನಿಗಳ ಮಾತುಕತೆ.

ಫ್ಯಾಶನ್ ಟ್ರೆಂಡ್ಗಳ ಬಗ್ಗೆ ವಿಶೇಷವಾದ ಲೇಖನ, ಛಾಯಾಚಿತ್ರಗಳನ್ನು ಪ್ರಕಟಿಸುವ ಜನಪ್ರಿಯ ಮ್ಯಾಗಝಿನ್ ‘ಹಾರ್ಪರ್ ಬಜಾರ್’ ಬ್ರೖೆಬ್ ಇಂಡಿಯಾ ಶೂಟ್ಗಾಗಿ 3 ವಿಮಾನಗಳನ್ನು ಬದಲಾಯಿಸಿ 12 ಗಂಟೆಗಳಲ್ಲಿ ಮಾಲ್ಡೀವ್ಸ್ ತಲುಪಿದ್ದಾಗಿ ಕತ್ರಿನಾ ಈ ಪೋಸ್ಟ್ ಜತೆ ಬರೆದುಕೊಂಡಿದ್ದಾರೆ.

– ಏಜೆನ್ಸೀಸ್

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *