ದ್ವಿಚಕ್ರ ವಾಹನಕ್ಕೆ ಬೆಂಕಿ

ಬೆಳಗಾವಿ: ನಗರದ ಕಾಮತ್ ಗಲ್ಲಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಸೋಮವಾರ ಮಧ್ಯರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಯಾವುದೆ ದೂರು ದಾಖಲಾಗಿಲ್ಲ. ಸ್ನೇಹಿತರ ಮಧ್ಯೆ ಗಲಾಟೆಯಿಂದ ಹೀಗಾಗಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಪರಿಶೀಲಿಸಲಾಗುವುದು ಎಂದು ಮಾರ್ಕೆಟ್ ಠಾಣೆ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.