ಚಿಕ್ಕಬಳ್ಳಾಪುರ: ಅಪರಿಚಿತ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರನ ಕಾಲು ತುಂಡಾಗಿದ್ದು ರಸ್ತೆಯಲ್ಲಿ ಗಂಟೆಗಟ್ಟಲೇ ರಕ್ತದ ಮಡುವಿನ ಬಿದ್ದ ಒದ್ದಾಡಿದ ದೃಶ್ಯವು ನೋಡುಗರ ಮನಕಲುಕಿತು.

ಅಪಘಾತದಲ್ಲಿ ಕಾಲು ತುಂಡಾಗಿ ಗಾಯಗೊಂಡ ವ್ಯಕ್ತಿಯನ್ನು ನೆರೆಯ ಅಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮುಲಕಲ ಚೆರುವುಗ್ರಾಮದ ಮಹೇಶ್ (30 ವರ್ಷ) ಎಂದು ಗುರುತಿಸಲಾಗಿದೆ. ಚಿಂತಾಮಣಿ& ಬೆಂಗಳೂರು ರಸ್ತೆಯ ನಾಯಿಂದ್ರಹಳ್ಳಿ ಗೇಟ್ ಬಳಿ ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಅಪರಚಿತ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು ಸವಾರನ ಒಂದು ಕಾಲು ಅರ್ಧ ತುಂಡಾಗಿದೆ. ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಒದ್ದಾಡಿದ್ದು ಸ್ಥಳಿಯರು ನೀರು ಕುಡಿಸಿ, ಗಾಳಿ ಬೀಸಿ ಧೈರ್ಯ ತುಂಬಿದ್ದಾರೆ.
ಇನ್ನು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಕೈವಾರ ಹೊರ ಠಾಣೆಯ ಪೊಲೀಸರು ಕರೆ ಮಾಡಿದರೂ ಚಿಂತಾಮಣಿ ತಾಲೂಕಿನ ಯಾವುದೇ ಆಂಬ್ಯುಲೆನ್ಸ್ ಸಿಗಲಿಲ್ಲ. ಕೊನೆಗೆ ಕೋಲಾರ ತಾಲೂಕಿನ ಕ್ಯಾಲನೂರಿನಿಂದ ಆಂಬುಲೆನ್ಸ್ ತರಿಸಿ, ಗಾಯಾಳುವನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಅಪಘಾತ ಎಸಗಿದ ಕಾರು ಪತ್ತೆಗೆ ಬಲೆ ಬೀಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.