ಹರಪನಹಳ್ಳಿ: ತಾಲೂಕಿನ ಅನಂತನಹಳ್ಳಿ ಸಮೀಪ ಬೈಕ್-ಟ್ಯ್ರಾಕ್ಟರ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ತಾಲೂಕಿನ ಅನಂತನಹಳ್ಳಿಯ ಗಜೇಂದ್ರ (18) ಹಾಗೂ ಕಿರಣ (19) ಮೃತರು.
ಟ್ಯ್ರಾಕ್ಟರ್ ಚಾಲಕ ಧಿಡೀರ್ ಬ್ರೇಕ್ ಹಾಕಿದ್ದರಿಂದ ಬೈಕ್ ಸವಾರನ ನಿಯಂತ್ರಣ ತಪ್ಪಿ ಟ್ರ್ಯಾಕ್ಟ್ ಹಿಂಬದಿಗೆ ಗುದ್ದಿದ್ದರಿಂದ ಮೃತಪಟ್ಟಿದ್ದಾರೆ. ಇಬ್ಬರ ಎದೆ, ತಲೆಗೆ ಬಲವಾದ ಪೆಟ್ಟಾಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ ಟ್ರ್ಯಾಕ್ಟರ್ ಹಾಗೂ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.