ಬೈಕ್ ಕಳ್ಳನ ಬಂಧನ

ಇಳಕಲ್ಲ (ಗ್ರಾ): ನಗರದ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಸಿಪಿಐ ಜೆ. ಕರುಣೇಶಗೌಡ ತಿಳಿಸಿದ್ದಾರೆ. ಲಿಂಗಸಗೂರು ತಾಲೂಕಿನ ರೋಡಲಬಂಡಾ ಗ್ರಾಮದ ಮಲ್ಲೇಶಕುಮಾರ ನಾನಪ್ಪ ಪವಾರ (21) ಬಂಧಿತ ಆರೋಪಿ. ಬಂಧಿತನಿಂದ ನಾಲ್ಕು ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಳಕಲ್ಲ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.