ಹೊಳೆಹೊನ್ನೂರು: ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಮಲ್ಲಾಪುರದ ಬಳಿ ಶುಕ್ರವಾರ ಕ್ಯಾಂಟರ್‌ಗೆ ಬೈಕ್ ಡಿಕ್ಕಿಯಾಗಿ ಹೊನ್ನಾಳಿ ತಾಲೂಕು ಲಿಂಗಾಪುರದ ಯುವಕ ಭುವನ್(18) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪರಿಚಯಸ್ಥರೊಬ್ಬರನ್ನು ಅರಹತೊಳಲು ಕೈಮರಕ್ಕೆ ಬಸ್ ಹತ್ತಿಸಲು ಆನವೇರಿ ಮಾರ್ಗವಾಗಿ ಹೋಗುವಾಗ ಮಲ್ಲಾಪುರದ ಅಕ್ಕಿಮಟ್ಟಿ ಬಳಿ ರಸ್ತೆ ಬದಿ ಗೊಬ್ಬರ ಇಳಿಸುತ್ತಿದ್ದ ಕ್ಯಾಂಟರ್‌ಗೆ ಗುದ್ದಿದ್ದಾನೆ. ಅಪಘಾತದ ರಭಸಕ್ಕೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರನ ತಲೆಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದೆಡೆ ನಾಗಸಮುದ್ರ ಬಳಿ ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಹೊನ್ನಾಳಿ ತಾಲೂಕಿನ ಸೋಮಲಾಪುರದ ಯುವಕ ಸಾಗರ (25) ಮೃತಪಟ್ಟಿದ್ದಾನೆ. ಕಾರು ಹೊಳಲೂರು ಮಾರ್ಗವಾಗಿ ಶಿವಮೊಗ್ಗದ ಕಡೆ ಹೋಗುತ್ತಿತ್ತು. ಮೃತ ಸಾಗರ್ ಸನ್ಯಾಸಿ ಕೊಡಮಗ್ಗಿಯಲ್ಲಿ ಸಂಬಂಧಿಕರ ಮನೆಯಿಂದ ಊರಿಗೆ ವಾಪಸ್ ಹೋಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಅಪಘಾತದಲ್ಲಿ ಬೈಕ್ ಸವಾರರ ಸಾವು
You Might Also Like
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…
ಹಾಗಲಕಾಯಿಯಲ್ಲಿನ ಕಹಿ ತೆಗೆಯುವುದೇಗೆ ಎಂದು ಆಲೋಚಿಸುತ್ತಿದ್ದೀರಾ; ನಿಮಗಾಗಿ ಈ ಸಿಂಪಲ್ ಟ್ರಿಕ್ಸ್ | Health Tips
ಚಳಿಗಾಲದಲ್ಲಿ ಮಂಜಿನಿಂದಾಗಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ. ಇದರಿಂದ ಜನರು ಹಾಗಲಕಾಯಿಯ ರುಚಿ ನೋಡುವುದಿಲ್ಲ. ಏಕೆಂದರೆ…