ಬೈಕ್ ರ‌್ಯಾಲಿ, ಸೈಕಲ್ ಜಾಗೃತಿ ಜಾಥಾ

ಮೂಡಲಗಿ: ಲೋಕಸಭಾ ಚುನಾವಣೆ ದಿನ ಮಕ್ಕಳು ತಮ್ಮ ಪಾಲಕರು ಅಮೂಲ್ಯ ಮತದಾನ ಮಾಡಲು ಶ್ರಮಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದ್ದಾರೆ.

ಕಲ್ಲೋಳ್ಳಿ ಹಾಗೂ ಮೂಡಲಗಿ ಪಟ್ಟಣಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿ ಹಾಗೂ ಸೈಕಲ್ ಮೂಲಕ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ, ಪಾಲಕರು ಚುನಾವಣೆ ಕರ್ತವ್ಯದಲ್ಲಿ ತೊಡಗುವಂತೆ ಮಕ್ಕಳು ಸಹ ಪ್ರೇರಣೆ ನೀಡಬೇಕು. ಮತದಾನದ ಕುರಿತು ಮಕ್ಕಳು ಕೂಡ ಮನೆಯಲ್ಲಿ ಪಾಲಕರ ಜತೆ ಚರ್ಚಿಸಬೇಕು ಎಂದರು.

ಪುರಸಭೆ, ಪಪಂ, ಶಿಕ್ಷಣ ಆಶ್ರಯದಲ್ಲಿ ಜಾಥಾ ಜರುಗಿತು. ಯೋಜನಾಧಿಕಾರಿ ಎಸ್.ಎಚ್.ದೇಸಾಯಿ, ಪುರಸಭೆ ಮುಖ್ಯಾಧಿಕಾರಿ ಗೋವಿಂದ ಪೂಜೇರಿ, ಪಪಂ ಮುಖ್ಯಾಧಿಕಾರಿ ಎಸ್.ಎಂ.ಬಬಲಾದಿ, ಪಿಡಿಒ ಹನುಮಂತ ತಾಳಿಕೋಟಿ, ಎಸ್.ಎಸ್.ರೊಡ್ಡನವರ, ಹನುಮಂತ ಬಸಳಿಗುಂದಿ, ಬಿಆರ್‌ಪಿ ಕೆ.ಎಲ್.ಮೀಶಿ, ಸಮುದಾಯ ಸಂಘಟನಾಧಿಕಾರಿ ಸಿ.ಬಿ.ಪಾಟೀಲ, ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ, ಸಿಆರ್‌ಪಿ ಜಿ.ಕೆ.ಉಪ್ಪಾರ, ಮುಖ್ಯೋಪಾಧ್ಯಾಯ ಟಿ.ಎಂ.ಬರನಟ್ಟಿ, ಸಿ.ಎಲ್.ಬಡಿಗೇರ, ಎಸ್.ಬಿ. ಗೋಸಬಾಳ ಹಾಗೂ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.