ಬೈಕ್-ಕಾರ್ ಡಿಕ್ಕಿ, ಒಬ್ಬ ಸಾವು

ಎಂ.ಕೆ.ಹುಬ್ಬಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4 ರಲ್ಲಿ ಬೈಕ್‌ಗೆ ಕಾರ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೈಲಹೊಂಗಲ ಪಟ್ಟಣದ ನಿವಾಸಿ ಮಲೀಕಸಾಬ ನದಾಫ್(35) ಮೃತ ವ್ಯಕ್ಯಿ. ಬೈಕ್ ಹಿಂಬದಿ ಸವಾರ ಬೇವಿನಕೊಪ್ಪ ಗ್ರಾಮದ ವೃದ್ಧ ಮಕ್ತುಮಸಾಬ ಗೋರೆಸಾಬ ನದಾಪ(60) ಕಾಲು ಮುರಿದು ಗಂಭೀರ ಗಾಯಗೊಂಡಿದ್ದು, ಬೆಳಗಾವಿ ಆಸ್ಪತ್ರೆಗೆ ಅಂಬುಲನ್ಸ್ ಮೂಲಕ ರವಾನಿಸಲಾಗಿದೆ.

ಹೆಣ್ಣು ನೋಡುವ ಕಾರ್ಯಕ್ಕೆ ಬಂದಿದ್ದ ಇವರು, ಮರಳಿ ಊರಿಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೆಳಗಾವಿ ಕಡೆ ತೆರಳುತ್ತಿದ್ದ ಕಾರ್ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕಿತ್ತೂರು ಪೊಲೀಸ ಠಾಣೆ ಪಿಎಸ್‌ಐ, ಸ್ಥಳೀಯ ಉಪಠಾಣೆ ಎಎಸ್‌ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.