ಐನಾಪುರ: ಐನಾಪುರ-ಕೃಷ್ಣಾಕಿತ್ತೂರ ರಸ್ತೆ ಮಾರ್ಗದಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ
ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಮುರತ್ಯೆಪ್ಪ ದುಂಡಪ್ಪ ಬಿರಾದಾರ (34) ಮೃತ ವ್ಯಕ್ತಿ.
ಮೃತನು ಐನಾಪುರದಿಂದ ಕೃಷ್ಣಾಕಿತ್ತೂರಗೆ ಹೋಗುವಾಗ ಎದುರಿಗೆ ಬಂದ ವರ್ಧಮಾನ ಉಪಾಧ್ಯ ಎಂಬುವರು ಬೈಕ್ ಮೇಲೆ ಬರುವಾಗ ಈ ಅಪಘಾತ ಸಂಭವಿಸಿದೆ. ವರ್ಧಮಾನ ಉಪಾಧ್ಯ ಅವರ ಸ್ಥಿತಿ ಗಂಭೀರವಾಗಿದೆ. ಅದೇ ಗ್ರಾಮದ ಮಲ್ಲಿಕಾರ್ಜುನ ಬಾಬು ಗಡೆಣ್ಣವರ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.