ಜನರ ಸೇವೆಗೆ ಅಣಿಯಾಗುತ್ತಿದ್ದ ಅಂತಿಮ ವರ್ಷದ MBBS​ ವಿದ್ಯಾರ್ಥಿನಿ ದುರಂತ ಸಾವು

ಪೆರಿಂಥಲಮನ್ನ: ಕೇರಳದ ಮಲ್ಲಪುರಂ ಜಿಲ್ಲೆಯ ಪೆರಿಂಥಲಮನ್ನದಲ್ಲಿರುವ ಎಂಇಎಸ್​ ಅಕಾಡೆಮಿ ಆಫ್​ ಮೆಡಿಕಲ್​ ಸೈನ್ಸ್​ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್​ ವಿದ್ಯಾರ್ಥಿನಿ ಭೀಕರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾಳೆ. ಈ ವರ್ಷ ಎಂಬಿಬಿಎಸ್​ ಮುಗಿಸಿ ಜನರ ಸೇವೆ ಸಜ್ಜಾಗುವ ಆಸೆಯಲ್ಲಿದ್ದ ವಿದ್ಯಾರ್ಥಿನಿ ಅಕಾಲಿಕ ಮರಣ ಹೊಂದಿದ್ದಾಳೆ. ಮೃತಳನ್ನು ಅಲ್ಫೋನ್ಸಾ (22) ಎಂದು ಗುರುತಿಸಲಾಗಿದೆ. ಸೋಮವಾರ ಬೆಳಗ್ಗೆ 6.50ರ ಸುಮಾರಿಗೆ ಥಿರುಕಾಡ್​ನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಬೈಕ್​ ಅಪಘಾತದಲ್ಲಿ ಮೃತಪಟ್ಟಳು. ಆಕೆಯ ಜತೆಯಿದ್ದ ತ್ರಿಸ್ಸೂರ್​ ಮೂಲದ ಸಹಪ್ರಯಾಣಿಕ ಅಶ್ವಿನ್​ (22) … Continue reading ಜನರ ಸೇವೆಗೆ ಅಣಿಯಾಗುತ್ತಿದ್ದ ಅಂತಿಮ ವರ್ಷದ MBBS​ ವಿದ್ಯಾರ್ಥಿನಿ ದುರಂತ ಸಾವು