More

  ಇಂಥವರೂ ಇದ್ದಾರೆ: ಲಾಕ್​ಡೌನ್​ ಸಂತ್ರಸ್ತರ ನೆರವಿಗಾಗಿ ಚಿನ್ನ ಮಾರಿದ ದಂಪತಿ!

  ಪಾಟ್ನಾ: ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವವರು ಲಕ್ಷಾಂತರ ಮಂದಿ. ಅವರ ನೆರವಿಗೆ ರಾಜ್ಯ ಸರ್ಕಾರಗಳು ನಿಂತಿದ್ದರೂ, ಎಷ್ಟೋ ಕಡೆಗಳಲ್ಲಿ ಯಾವ್ಯುದ್ಯಾವುದೋ ಕಾರಣಗಳಿಂದ ಅರ್ಹರಿಂದ ನೆರವು ಲಭಿಸುತ್ತಿಲ್ಲ ಎನ್ನುವುದೂ ಸತ್ಯವೇ.

  ಅದೇ ಇನ್ನೊಂದೆಡೆ ಸಂತ್ರಸ್ತರಿಗಾಗಿ ಹಲವಾರು ದಾನಿಗಳು ತಮ್ಮದೇ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ತಮ್ಮಲ್ಲಿರುವ ಆಹಾರ, ಹಣವನ್ನು ಬೇರೆಯವರಿಗೆ ನೀಡುವ ದಾನಿಗಳು ಕಾಣಸಿಗುತ್ತಾರೆ. ಆದರೆ ಸಾಲ ಸೋಲ ಮಾಡಿ ಸಹಾಯ ಮಾಡುವವರನ್ನು, ತಮ್ಮಲ್ಲಿ ಕೊಡಲು ಏನೂ ಇಲ್ಲದಿದ್ದರೂ ಬೇರೆಯವರಿಗೆ ನೆರವಾಗುವ ನಿಟ್ಟಿನಲ್ಲಿ ಕಷ್ಟಪಡುವವರೂ ಇದ್ದಾರೆ ಎನ್ನುವುದೇ ಸಂತೋಷದ ಸಂಗತಿ.

  ಇದನ್ನೂ ಓದಿ: ಸೋಂಕಿತರ ಮೇಲೆ ಪಾಕ್​ ಗೂಢಚರ ಸಂಸ್ಥೆ ಕಣ್ಣು! ಶುರುವಾಯ್ತು ಹೀಗೊಂದು ಪ್ರಯೋಗ

  ಅಂಥದ್ದೇ ಒಬ್ಬ ಯುವಕ ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರದ ಧೀರಜ್ ರಾಯ್ ಹಾಗೂ ಮನೀಶಾ ಕುಮಾರಿ ದಂಪತಿ. ಈ ದಂಪತಿ ಮಾಡಿರುವ ಸೇವೆಯಿಂದ ಇದೀಗ ದೇಶದ ಗಮನ ಸೆಳೆದಿದ್ದಾರೆ.

  ಅಷ್ಟಕ್ಕೂ ಇವರು ಮಾಡಿರುವ ಕಾರ್ಯ ಎಂದರೆ, ಲಾಕ್​ಡೌನ್​ ಸಂಕಷ್ಟದಲ್ಲಿ ಇರುವವರ ಸೇವೆಗಾಗಿ ತಮ್ಮ ಬಳಿ ಹಣ ಇಲ್ಲದಾಗ ಚಿನ್ನದ ಆಭರಣಗಳನ್ನು ಮಾರಿ ನೆರವಾಗಿದ್ದಾರೆ.

  ಈ ಕಥೆ ಶುರುವಾಗುವುದು ಮಾರ್ಚ್ 24ರಿಂದ. ಪುಟ್ಟ ಮಗುವೊಂದು ಹಸಿವಿನಿಂದ ಕುಳಿತಿರುವುದು ಧೀರಜ್​ ಕಂಡು ಏನಾದರೂ ಸಹಾಯ ಮಾಡುವ ಮನಸ್ಸಾಯಿತು. ಮಗುವಿಗೆ ಆಹಾರ ವ್ಯವಸ್ಥೆ ಮಾಡಿದರು. ಈ ರೀತಿ ಅದೆಷ್ಟು ಬಡವರು ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಈಡಾಗಿರಬಹುದು ಎಂದು ಅಂದುಕೊಂಡು, ಅವರ ಸೇವೆ ಮಾಡುವ ಮನಸ್ಸು ಮಾಡಿದರು.

  ಇದನ್ನೂ ಓದಿ: ಕರೊನಾದ ಮತ್ತೊಂದು ತಲೆನೋವು: ಲಕ್ಷಣಗಳೇ ಇಲ್ಲದ ಶೇ.28 ಮಂದಿಗೆ ಸೋಂಕು!

  ಅಲ್ಲಿಂದ ತಾವು ಸಂಪಾದಿಸಿದ್ದನ್ನೆಲ್ಲಾ ಸೇವೆಯಲ್ಲಿ ತೊಡಗಿಸಿಕೊಂಡರು. ಬ್ಯಾಂಕ್​ನಲ್ಲಿ ಕೂಡಿಟ್ಟ ಎರಡೂವರೆ ಲಕ್ಷ ರೂಪಾಯಿ ಖರ್ಚಾಯಿತು. ಆದರೆ ಸಂತ್ರಸ್ತರ ಸಂಖ್ಯೆ ಮಾತ್ರ ಹೆಚ್ಚಿಗೆ ಇತ್ತು. ಏನು ಮಾಡಬೇಕೆಂದು ಧೀರಜ್​ಗೆ ತೋರದಾಗ ಮುಂದೆ ಬಂದದ್ದು ಅವರ ಹೆಂಡತಿ ಮನೀಶಾ. “ಬಡವರು ಹಸಿವಿನಿಂದ ಮಲಗಿದ್ದರೆನಾವು ಚಿನ್ನದ ಆಭರಣ ಧರಿಸಿ ಓದಾಡಿದರೆ ಅದು ನಮಗೆ ಶೋಭೆಯಲ್ಲ. ನಾವು ಮನುಷ್ಯರಾಗಿರುವುದು ವ್ಯರ್ಥ. ಎಂದ ನನ್ನ ಹೆಂಡತಿ ಚಿನ್ನವನ್ನು ಮಾರಲು ಸೂಚಿಸಿದಳು ಎನ್ನುತ್ತಾರೆ ಧೀರಜ್​.

  “ನಾನು ಮಾನವೀಯ ಸೇವೆಗಳ ಮೂಲಕ ದೇವರನ್ನು ನೋಡಲು ಪ್ರಯತ್ನಿಸುತ್ತಿದ್ದೇನೆ; ಏಕೆಂದರೆ ದೇವರು ಸ್ವರ್ಗದಲ್ಲಿ ಅಥವಾ ದೇವಾಲಯದಲ್ಲಿದ್ದ. ಈ ಎಲ್ಲಾ ಬಡ ಜನರಲ್ಲಿದ್ದಾನೆ. ನಿರ್ಗತಿಕರಿಗೆ ಸೇವೆ ನೀಡುವುದು ರಾಷ್ಟ್ರವನ್ನು ಪ್ರೀತಿಸುವ ಸೇವೆಯಾಗಿದೆ. ಸಾಮಾಜಿಕ ಸೇವೆಗಳ ಸಲುವಾಗಿ ಕ್ರೀಡಾ ಕೋಟಾದಡಿಯಲ್ಲಿ ನನಗೆ ನೀಡಲಾಗಿದ್ದ ರೈಲ್ವೆಯ ಕೆಲಸವನ್ನು ತ್ಯಜಿಸಿದ್ದೇನೆ ಮತ್ತು ಅಂದಿನಿಂದ ಮೋಟಾರು ಬೈಕಿನಲ್ಲಿ ಸುತ್ತಲಿನ ಪ್ರದೇಶದಲ್ಲಿ ಔಷಧಿಗಳು , ತರಕಾರಿಗಳು ಮತ್ತು ಆಹಾರ ಪದಾರ್ಥಗಳನ್ನಿಟ್ಟು ತಿರುಗುತ್ತಿದ್ದೇನೆ. ಈ 70 ದಿನಗಳಲ್ಲಿ, 250 ಹಳ್ಳಿಗಳ ಬಡ ಕುಟುಂಬಗಳಿಗೆ ಸೇವೆ ಸಲ್ಲಿಸಿದ್ದೇನೆ. ನಾನು ಅವರ ಮನೆಗಳಿಗೆ ತರಕಾರಿಗಳು, ಆಹಾರ ಪದಾರ್ಥಗಳನ್ನು ನೀಡುತ್ತೇನೆ. ಎನ್ನುತ್ತಾರೆ ಧೀರಜ್​.

  ಅಂದಹಾಗೆ ಈ ದಂಪತಿ ಇದಾಗಲೇ, 8 ಲಕ್ಷಕ್ಕಿಂತ ಹೆಚ್ಚಿನ ಆಹಾರ ಮತ್ತು ಔಷಧಿಗಳು, ಮಾಸ್ಕ್ ಗಳು, ಸ್ಯಾನಿಟೈಜರ್‌ಗಳನ್ನು ವಿತರಿಸಿದ್ದಾರೆ. “ನಮ್ಮ ಮೇಲೆ 3 ಲಕ್ಷ ರೂ.ಗಿಂತ ಹೆಚ್ಚಿನ ಸಾಲವಿದೆ. ಆದರೆ ಸೇವೆ ನನಗೆ ಸಂತೋಷ ನೀಡುತ್ತಿದೆ’ ಎನ್ನುತ್ತಾರೆ ಈ ದಂಪತಿ. (ಏಜೆನ್ಸೀಸ್​)

  ತಳವಾರ, ಪರಿವಾರ, ಸಿದ್ಧಿ ಜನಾಂಗ ಎಸ್​ಟಿಗೆ: ಅಧಿಸೂಚನೆ ಪ್ರಕಟ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts