ಬಿಹಾರ ಚುನಾವಣೆ: ಮಹಾಮೈತ್ರಿಯ ಪ್ರಣಾಳಿಕೆ ಬಿಡುಗಡೆ ಮಾಡಿದ್ರು ತೇಜಸ್ವಿ ಯಾದವ್​

blank

ಪಟನಾ: ಬಿಹಾರ ವಿಧಾನಸಭಾ ಚುನಾವಣಾ ಕಾವು ದಿನೇದಿನೆ ಹೆಚ್ಚಾಗುತ್ತಿದ್ದು, ಆರ್​ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಹಾಮೈತ್ರಿಯು ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಹಾರದಲ್ಲಿ ಮೈತ್ರಿಯ ನಾಯಕ ಆರ್​ಜೆಡಿಯ ತೇಜಸ್ವಿ ಯಾದವ್ ಪ್ರಣಾಳಿಕೆ ಲೋಕಾರ್ಪಣೆ ಮಾಡಿದ್ರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಣ್​ದೀಪ್​ ಸಿಂಗ್ ಸುರ್ಜೇವಾಲಾ, ಶಕ್ತಿಸಿನ್ಹ್ ಗೋಹಿಲ್ ಮತ್ತು ಇತರೆ ನಾಯಕರು ಹಾಜರಿದ್ದರು.

ಬಿಹಾರದಲ್ಲಿನ 10 ಲಕ್ಷ ಯುವಜನರಿಗೆ ಉದ್ಯೋಗ ಒದಗಿಸುವ ಭರವಸೆಯೂ ಸೇರಿ ಕೆಲವು ಅಂಶಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪ್ರಮುಖ ಅಂಶವೂ ಇದಾಗಿದೆ. ಇತರೆ ಅಂಶಗಳ ಪೈಕಿ ಕೃಷಿ ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವುದು, ಪರೀಕ್ಷಾ ಶುಲ್ಕ ಮನ್ನಾ, ವಿದ್ಯುತ್ ಉತ್ಪಾದನೆ ಹೆಚ್ಚಿಸುವುದು ಮುಂತಾದವುಗಳು ಪ್ರಮುಖವಾದವು.

ಇದನ್ನೂ ಓದಿ: PHOTOS| ಮೈಸೂರು ದಸರಾ 2020ರ ಉದ್ಘಾಟನಾ ಸಮಾರಂಭದ ಚಿತ್ರಣ

ವಿಧಾನಸಭೆ ಚುನಾವಣೆ ಇಲ್ಲಿ ಮೂರು ಹಂತದಲ್ಲಿ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಅಕ್ಟೋಬರ್ 28, ಎರಡನೇ ಹಂತ ನವೆಂಬರ್ 3, ಮೂರನೇ ಹಂತ ನವೆಂಬರ್ 7 ರಂದು ನಡೆಯಲಿದೆ. (ಏಜೆನ್ಸೀಸ್)

10 ರೂಪಾಯಿ ಕೊಟ್ರೆ ಸಾಕು, ಲುಂಗಿ, ಧೋತಿ, ಸೀರೆ ಕೊಡುತ್ತೆ ಜಾರ್ಖಂಡ್ ಸರ್ಕಾರ!

Share This Article

ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker

Pressure Cooker : ಪ್ರೆಶರ್​ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…