ಬಿಗಿಲ್​ ಸಿನಿಮಾದ 400 ಸಿಬ್ಬಂದಿಗೆ ಬೆಲೆ ಬಾಳುವ ಉಡುಗೊರೆ ಕೊಟ್ಟ ಇಳಯದಳಪತಿ ವಿಜಯ್!

ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ವಿಜಯ್​ ಅವರು ತಮ್ಮ ಮುಂದಿನ ‘ಬಿಗಿಲ್​’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ಚಿತ್ರಕ್ಕಾಗಿ ಹಗಲು ಇರುಳೆನ್ನದೆ ಶೂಟಿಂಗ್​ನಲ್ಲಿ ಬೆವರು ಹರಿಸುತ್ತಿರುವ ಸಿಬ್ಬಂದಿಗಳಿಗೆ ನಟ ವಿಜಯ್​ ಬೆಲೆ ಬಾಳುವ ಉಡುಗೊರೆಯೊಂದನ್ನು ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಬಿಗಿಲ್​ ಚಿತ್ರಕ್ಕೆ ತಮ್ಮದೇ ಕೊಡುಗೆ ನೀಡುತ್ತಿರುವ 400 ಸಿಬ್ಬಂದಿಗೂ ವಿಜಯ್​ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆ ಸ್ವೀಕರಿಸಿದ ಹಲವರು ಸಾಮಾಜಿಕ ಜಾಲತಾಣದಲ್ಲಿ ವಿಜಯ್​ಗೆ ಧನ್ಯವಾದ ತಿಳಿಸಿದ್ದಾರೆ. ಚಿನ್ನದ ಉಂಗುರದ ಮೇಲೆ ಬಿಗಿಲ್​ ಎಂದು ಚಿತ್ರದ ಹೆಸರನ್ನು ಬರೆಯಲಾಗಿದೆ. ಈ ಸುದ್ದಿಯನ್ನು ಏಜಿಎಸ್​ ಎಂಟರ್ಟೈನ್​ಮೆಂಟ್ಸ್​ನ ಅರ್ಚನಾ ಕಲ್ಪತಿ ಅವರು ಟ್ವೀಟ್​ ಮಾಡುವ ಮೂಲಕ ಖಚಿತಪಡಿಸಿದ್ದಾರೆ.

ಬಿಗಿಲ್​ ಚಿತ್ರವನ್ನು ನಿರ್ದೇಶಕ ಅಟ್ಲಿ ಅವರು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ನಯನತಾರ ಮತ್ತು ಜಾಕಿ ಶ್ರಾಫ್​ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಿಗಿಲ್​ ಚಿತ್ರ ಸ್ಪೋರ್ಟ್ಸ್​ ಡ್ರಾಮ ಹಾಗೂ ಆ್ಯಕ್ಷನ್​ ಥ್ರಿಲ್ಲರ್​ ಚಿತ್ರವಾಗಿದ್ದು, ವಿಜಯ್​ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಚಿತ್ರೀಕರಣ 95 ರಷ್ಟು ಮುಗಿದಿರುವುದಾಗಿ ಅರ್ಚನಾ ಕಲ್ಪತಿ ಟ್ವಿಟರ್​ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *