ಬೆಂಗಳೂರು: ಬಿಗ್ಬಾಸ್ ಸೀಸನ್ 8 ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದರೆ ಇದೀಗ ಬಿಗ್ಬಾಸ್ ಸ್ಪರ್ಧಾಳುಗಳಿಗೆಲ್ಲ ಒಂದು ಶಾಕ್ ನೀಡಿದ್ದಾರೆ. ಇದ್ದಕ್ಕಿದ್ದಂತೆ ಮನೆಯ ಎಲ್ಲ ಸಾಮಾಗ್ರಿಯನ್ನು ಹಿಂಪಡೆದು, ಸ್ಪರ್ಧಾಳುಗಳಿಗೆ ಏನೂ ಇಲ್ಲದಂತೆ ಮಾಡಿಬಿಟ್ಟಿದ್ದಾರೆ.
ಹೌದು! ಈ ವಾರ ಬಿಗ್ಬಾಸ್ನಲ್ಲಿ ಹೊಸ ರೀತಿಯ ಟಾಸ್ಕ್ ನೀಡಲಾಗಿದೆ. ಮನೆಯ ಸೋಫಾದಿಂದ ಹಿಡಿದು, ಅಡುಗೆ ಮನೆಯ ಸಾಮಾಗ್ರಿಯವರೆಗೆ ಎಲ್ಲವನ್ನೂ ಬಿಗ್ಬಾಸ್ ವಾಪಾಸು ಪಡೆದಿದ್ದಾರೆ. ಈ ಎಲ್ಲ ಸಾಮಾಗ್ರಿಗಳನ್ನು ಸ್ಪರ್ಧಾಳುಗಳಲ್ಲಿ ವಿವಿಧ ಟಾಸ್ಕ್ಗಳಲ್ಲಿ ಗೆದ್ದು ಪಡೆದುಕೊಳ್ಳಬೇಕು ಎಂದು ಘೋಷಿಸಿದ್ದಾರೆ. ಯಾವ ಟಾಸ್ಕ್ನಲ್ಲಿ ಸೋಲುತ್ತಾರೋ ಆ ಟಾಸ್ಕ್ಗೆ ನಿಗದಿ ಮಾಡಲಾಗಿದ್ದ ಸಾಮಾಗ್ರಿಯನ್ನು ವಾರ ಪೂರ್ತಿ ಉಪಯೋಗಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಬಿಗ್ಬಾಸ್ನ ಈ ನಿರ್ಧಾರಕ್ಕೆ ಸ್ಪರ್ಧಾಳುಗಳು ದಂಗಾಗಿದ್ದಾರೆ. ಮಾಡು ಇಲ್ಲವೇ ಮಡಿ ಎನ್ನುವ ಹಂತದಲ್ಲಿ ತಾವಿದ್ದು ಗೆಲ್ಲಲೇ ಬೇಕಾದ ಪರಿಸ್ಥಿತಿ ಬಂದೊದಗಿದೆ ಎನ್ನುವ ಚಿಂತೆಗೆ ಬಿದ್ದಿದ್ದಾರೆ. ಯಾವ ರೀತಿಯ ಟಾಸ್ಕ್ಗಳನ್ನು ಬಿಗ್ ಬಾಸ್ ಕೊಡುತ್ತಾರೆ? ಯಾವುದರಲ್ಲಿ ಮನೆ ಮಂದಿ ವಿನ್ ಆಗುತ್ತಾರೆ? ಏನನ್ನು ಕಳೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)
ರಾತ್ರಿಯೆಲ್ಲ ನರಳಾಡಿ ಆಸ್ಪತ್ರೆಯಲ್ಲೇ ನೇಣಿಗೆ ಕೊರಳೊಡ್ಡಿದ ಕರೊನಾ ಸೋಂಕಿತ
Biggboss takes everything back from home