ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss) 11ನೇ ಆವೃತ್ತಿಯ ಆರಂಭವಾಗಿ ಆರು ವಾರಗಳು ಕಳೆದಿದ್ದು, ಕಿರಿಕ್ನಿಂದಲೇ ಹೆಚ್ಚು ಸದ್ದು ಮಾಡಿದೆ. ಬಿಗ್ಬಾಸ್ (Bigg Boss) ಮನೆಯಿಂದ ಈಗಾಗಲೇ ಯಮುನಾ, ರಂಜಿತ್, ಜಗದೀಶ್, ಹಂಸಾ ಹಾಗೂ ಮಾನಸ ಎಲಿಮಿನೇಟ್ ಆಗಿದ್ದು, ಈ ವಾರವೂ ಕೂಡ ಎಲಿಮಿನೇಷನ್ (Elimination) ನಡೆಯಲಿದೆ. ಆದರೆ ಎಲಿಮಿನೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ಬಾಸ್ (Bigg Boss) ಟ್ವಿಸ್ಟ್ ಒಂದನ್ನು ನೀಡಿದ್ದಾರೆ.
ರಂಜಿತ್ ಹಾಗೂ ಜಗದೀಶ್ ಮನೆಯಿಂದ ನೇರವಾಗಿ ಎಲಿಮಿನೇಟ್ ಆದ ಬಳಿಕ ಗಾಯಕ ಹನುಮಂತು ವೈಲ್ಡ್ಕಾರ್ಡ್ ಸ್ಫರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ನಡೆದ ಟಾಸ್ಕ್ಗಳಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಹನುಮಂತು ಅವರು ಎರಡೆರಡು ಬಾರಿ ಕ್ಯಾಪ್ಟನ್ ಆಗಿದ್ದು, ಮನೆಯಲ್ಲಿರುವ ಇತರೆ ಸ್ಫರ್ಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ದಿನ ಕಳೆದಂತೆ ಹನುಮಂತು ಸ್ಟ್ರಾಂಗ್ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದ್ದು, ಇದರ ನಡುವೆಯೇ ಎಲಿಮಿನೇಷನ್ಗೆ ಸಂಬಂಧಿಸಿದಂತೆ ಬಿಗ್ಬಾಸ್ (Bigg Boss) ಒಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಬಿಗ್ಬಾಸ್ (Bigg Boss) ಶುರುವಾಗಿ ಐದನೇ ವಾರ ಅಂದರೆ ಲಾಸ್ಟ್ ವೀಕ್ ದೊಡ್ಮನೆಯಿಂದ ಮಾನಸ ಎಲಿಮಿನೇಟ್ ಆಗಿದ್ದರು. ಈ ವಾರ ಸ್ಫರ್ಧಿಗಳನ್ನು ನಾಮಿನೇಟ್ ಮಾಡಲಾಗಿತ್ತಾದರು ವೋಟಿಂಗ್ ಲೈನ್ಸ್ಅನ್ನು ತೆರೆದಿರಲಿಲ್ಲ. ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎಂದು ವರದಿಯಾಗಿದೆ. ಮುಂದಿನ ವಾರ ಮಿಡಲ್ ವೀಕ್ ಎಲಿಮಿನೇಷನ್ ಆ ನಂತರ ವಾರಾಂತ್ಯದ ಎಲಿಮಿನೇಷನ್ ಇರಲಿದೆ ಎಂದು ಹೇಳಲಾಗುತ್ತಿದೆ. ಎಲಿಮಿನೇಷನ್ ಕುರಿತು ಭಾನುವಾರದ (ನ.10) ಸಂಚಿಕೆ ನಂತರ ಸ್ಪಷ್ಟ ಚಿತ್ರಣ ಹರೊಬೀಳಲಿದೆ.
ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಪತಿಗೆ ಹೊಸ Scooter ಕೊಡಿಸಿದ ಮಹಿಳೆ
ನನ್ನ ಪ್ರಕಾರ ಮೆಗಾ ಹರಾಜಿನಲ್ಲಿ ಈತ RCB ಪಾಲಿಗೆ ದುಬಾರಿಯಾಗಬಹುದು; ABD ಹೇಳಿದ ಆಟಗಾರ ಯಾರು ಗೊತ್ತಾ?
700 ಕೋಟಿ ರೂ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ, ಇಲ್ಲಾಂದ್ರೆ ನೀವು…: ಪ್ರಧಾನಿ ಮೋದಿಗೆ CM Siddaramaiah ಸವಾಲು