ಬಿಗ್​ಬಾಸ್​ ರನ್ನರ್​ ಅಪ್​ ನವೀನ್​ ಸಜ್ಜುಗೆ ಕಿಚ್ಚನ ಬಹುಮಾನ: ಅದ್ಭುತ ಅನುಭವ ಸಿಕ್ಕಿದೆ ಎಂದ ಸುದೀಪ್​

ಬೆಂಗಳೂರು: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ -6 ನಿನ್ನೆ ಮುಕ್ತಾಯಗೊಂಡಿದ್ದು ಬಿಗ್​ಬಾಸ್​ನ ಮುಖ್ಯ ಕೇಂದ್ರಬಿಂದು ಎಂದೇ ಹೆಗ್ಗಳಿಕೆಗೆ ಪಾತ್ರರಾಗಿರುವ ನಟ ಸುದೀಪ್​ ಬಿಗ್​ಬಾಸ್​ ಸೀಸನ್​ 6 ಕುರಿತು ಟ್ವೀಟ್​ ಮಾಡಿದ್ದಾರೆ.

ಬಿಗ್​ಬಾಸ್​ನ ಮತ್ತೊಂದು ವೈಭವಯುತ ಸೀಸನ್​ ಮುಕ್ತಾಯವಾಗಿದೆ. ಈ ಪ್ರಯಾಣದಲ್ಲಿ ನಮ್ಮ ಜತೆಯಾಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಈ ಸೀಸನ್​ ಸರಾಗವಾಗಿ ನಡೆಯುವಲ್ಲಿ ಹಲವರ ಪರಿಶ್ರಮವಿದ್ದು ಅವರಿಗೆಲ್ಲ ಆಭಾರಿಯಾಗಿರುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಈ ಬಾರಿ ಬೇಗನೇ ಸೀಸನ್​ ಮುಗಿದುಹೋಯಿತು ಎಂಬಂತೆ ಭಾವವಾಗುತ್ತಿದೆ. ನನ್ನ ಪಾಲಿಗೆ ಅದ್ಭುತ ಅನುಭವಗಳು ಸಿಕ್ಕಿವೆ. ಉತ್ತಮ ಸಮಯ ಕಳೆದಿದ್ದೇನೆ. ಬಿಗ್​ಬಾಸ್​ ಮುಂದಿನ ಸೀಸನ್​ ಬರುವವರೆಗೂ ಈ ನನ್ನ ತಂಡವನ್ನು ಮಿಸ್​ ಮಾಡಿಕೊಳ್ಳುತ್ತೇನೆ.ಎಲ್ಲ ಸ್ಪರ್ಧಿಗಳಿಗೂ ಶುಭಕೋರುತ್ತೇನೆ ಎಂದಿದ್ದಾರೆ.

ನವೀನ್​ ಸಜ್ಜುಗೆ ಕಿಚ್ಚನ ಬಹುಮಾನ

ಬಿಗ್​ಬಾಸ್​ ವಿನ್ನರ್​ಗೆ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ನೀಡಲಾಗುತ್ತದೆ. ಈ ಬಾರಿ ಮಾಡರ್ನ್​ ಕೃಷಿಕ ಶಶಿಕುಮಾರ್​ ಗೆದ್ದು ಹಣ, ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೇ ರನ್ನರ್​ಅಪ್​ ಆದ ಗಾಯಕ ನವೀನ್​ ಸಜ್ಜುಗೆ ಕಿಚ್ಚ ಸುದೀಪ್​ ತಮ್ಮ ಕಡೆಯಿಂದ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ನವೀನ್​ ತಮಗೆ ಹಣ ಬಂದರೆ ಸ್ಟುಡಿಯೋ ಕಟ್ಟಿಕೊಳ್ಳುವುದಾಗಿ ತಿಳಿಸಿದ್ದರು. ಅದರಂತೆ ನಿನ್ನೆ ಫಿನಾಲೆಯ ಕೊನೆಯಲ್ಲಿ ಸುದೀಪ್​, ಸ್ಟುಡಿಯೋ ಕಟ್ಟಲು ತಾವು ಹಣ ನೀಡುವುದಾಗಿ ಹೇಳಿದರು.

One Reply to “ಬಿಗ್​ಬಾಸ್​ ರನ್ನರ್​ ಅಪ್​ ನವೀನ್​ ಸಜ್ಜುಗೆ ಕಿಚ್ಚನ ಬಹುಮಾನ: ಅದ್ಭುತ ಅನುಭವ ಸಿಕ್ಕಿದೆ ಎಂದ ಸುದೀಪ್​”

Comments are closed.