ಮಸೂದ್​​​​​​​​ ಅಜರ್​​ನನ್ನು ಜಾಗತಿಕ ಉಗ್ರ ಎಂದು ಘೋಷಿಸಿರುವುದು ಭಾರತಕ್ಕೆ ಬಹು ದೊಡ್ಡ ಜಯ : ಮೋದಿ

ಜೈಪುರ: ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಎಂದು ಇಂದು ವಿಶ್ವಸಂಸ್ಥೆ ಘೋಷಿಸಿದೆ. ಇದು ಭಾರತ ದೊಡ್ಡ ಜಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಇಲ್ಲಿನ ಲೋಕಸಭಾ ಚುನಾವಣೆ ರ್ಯಾಲಿಯಲ್ಲಿ ಮಾತನಾಡಿದ ಅವರು ವಿಶ್ವ ಸಂಸ್ಥೆ ಇಂದು ಉಗ್ರ ಮಸೂದ್​​ ಅಜರ್​​ ಅವರನ್ನು ಪ್ರಮುಖ ಉಗ್ರ ಪಟ್ಟಿಗೆ ಸೇರಿಸಿರುವುದು ರಾಷ್ಟ್ರಕ್ಕೆ ಬಹುದೊಡ್ಡ ಜಯವಾಗಿದೆ. ಭಯೋತ್ಪಾದನೆಯ ನಾಶಕ್ಕೆ ಸರ್ಕಾರದ ಇಟ್ಟಿರುವ ಮೊದಲ ಹೆಜ್ಜೆ ಇದಾಗಿದೆ.

ಭಾರತಕ್ಕೆ ಯಾರಿಂದಲಾದರೂ ಅಪಾಯ ಒದಗಿದರೆ, ನಾವು ಅವರ ಮನೆಗೆ ನುಗ್ಗಿ ಅವರನ್ನು ಹೊಡೆಯತ್ತೀವಿ. ಅವರು ನಮ್ಮ ಮೇಲೆ ಗುಂಡನ್ನು ಹಾರಿಸಿದರೆ, ನಾವು ಅವರ ಮೇಲೆ ಬಾಂಬ್​​ ಹಾಕಿ ಅವರನ್ನು ಭಯ ಪಡಿಸುತ್ತೇವೆ ಎಂದು ಮೋದಿ ಉಗ್ರರ ವಿರುದ್ಧ ಕಿಡಿಕಾಡಿದ್ದಾರೆ.

ನಾವು ಭಯೋತ್ಪಾನೆ ಮತ್ತು ಉಗ್ರರನ್ನು ನಿರ್ಲಕ್ಷಿಸುವುದಿಲ್ಲ. ಮುಂದೆ ಏನು ಆಗುತ್ತದೆ ಎಂದು ಕಾದು ನೋಡಿ ಎಂದು ಮೋದಿ ಬಹಿರಂಗವಾಗಿ ಉಗ್ರರಿಗೆ ಸವಾಲೊಡ್ಡಿದ್ದಾರೆ.

10 ವರ್ಷಗಳ ಹಿಂದೆಯೆ ಉಗ್ರರ ಪಟ್ಟಿಗೆ ಮಸೂದ್​​ ಹೆಸರನ್ನು ಸೇರಿಸಬೇಕು ಎಂದು ವಿಶ್ವ ಸಂಸ್ಥೆಗೆ ಒತ್ತಾಯ ಮಾಡಿತ್ತು. ತಾಂತ್ರಿಕ ಕಾರಣ ನೀಡಿದ ಚೀನಾ ವಿಟೋ ಅಧಿಕಾರದ ಮೂಲಕ ಅಡ್ಡಗಾಲು ಹಾಕಿತು. ಇದರಿಂದ ಅಸಮಾಧಾನಗೊಂಡ ಅಮೆರಿಕ ಪರ್ಯಾಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಮಸೂದ್ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಭಾರತ ವಿಶ್ವಸಂಸ್ಥೆಯಲ್ಲಿ ಮಾಡಿದ ಪ್ರಯತ್ನಕ್ಕೆ ಚೀನಾ ನಾಲ್ಕು ಬಾರಿ ತಡೆ ಹಾಕಿತ್ತು. (ದಿಗ್ವಿಜಯ ನ್ಯೂಸ್​)