ರಸ್ತೆಗುರುಳಿದ ಬೃಹತ್ ಮರಗಳು

ಸಿದ್ದಾಪುರ: ಭಾರಿ ಗಾಳಿ-ಮಳೆಯಿಂದ ತಾಲೂಕಿನ ಮಾವಿನಗುಂಡಿ ಸಮೀಪದ ಜೋಗಿಮಠದ ಹತ್ತಿರ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬುಧವಾರ ಬೆಳಗಿನಜಾವ ಗುಡ್ಡ ಕುಸಿದು, ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದು ಸಂಚಾರ ಅಸ್ಥವ್ಯಸ್ಥಗೊಂಡಿತ್ತು.

ತಾಲೂಕಿನಲ್ಲಿ ವಾರದಿಂದ ನಿರಂತರವಾಗಿ ಗಾಳಿ-ಮಳೆ ಹೆಚ್ಚಿದ ಪರಿಣಾಮ ಗುಡ್ಡ ಕುಸಿದಿದೆ.

ಸುದ್ದಿ ತಿಳಿದ ತಹಸೀಲ್ದಾರ್ ಪಟ್ಟರಾಜ ಗೌಡ, ಆರ್​ಎಫ್​ಒ ಲೋಕೇಶ ಪಾಠಣಕರ, ಹೊನ್ನಾವರ ಉಪವಿಭಾಗದ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

Leave a Reply

Your email address will not be published. Required fields are marked *