ಕಾಂತಬಾರೆ-ಬೂದಬಾರೆಯರಿಗೆ ತೊಟ್ಟಿಲು ಕಟ್ಟಿದ್ದ ತಾಕೊಡೆ ಮರ ಬುಡ ಸಹಿತ ಧರೆಗುರುಳಿದೆ

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ ಮೂಲ್ಕಿ ತಾಲೂಕು ಕೊಲ್ಲೂರಿನ ಶ್ರೀ ಕಾಂತಬಾರೆ-ಬೂದಬಾರೆ ಜನ್ಮ ಕ್ಷೇತ್ರದ ತಾಕೊಡೆ ಮರ ಶುಕ್ರವಾರ ಮಧ್ಯಾಹ್ನ ಬುಡಸಹಿತ ಉರುಳಿ ಬೀಳುವುದರೊಂದಿಗೆ ಇತಿಹಾಸದ ಜೀವಂತ ಸಾಕ್ಷಿಯೊಂದು ಅಂತ್ಯ ಕಂಡಂತಾಗಿದೆ. ಸುಮಾರು 800ರಿಂದ 1000 ವರ್ಷಗಳ ಹಿನ್ನೆಲೆ ಈ ತಾಕೊಡೆ ಮರಕ್ಕೆ ಇತ್ತು ಎಂದು ಅಧ್ಯಯನಗಳಿಂದ ದೃಢವಾಗಿದೆ.ಮೂಲ್ಕಿ ಸಾವಂತ ಅರಸರ ದಳವಾಯಿಗಳಾಗಿದ್ದ ಅವಳಿ ವೀರರಾದ ಕಾಂತಬಾರೆ-ಬೂದಬಾರೆಯರು ಹುಟ್ಟಿದ್ದು ಇದೇ ತಾಕೊಡೆ ಮರದಡಿಯಲ್ಲಿ ಮತ್ತು ಆಗ ತಾನೆ ಹುಟ್ಟಿದ ಅವಳಿ ಮಕ್ಕಳನ್ನು ನೇಲೆ(ಬಟ್ಟೆಯ ತೊಟ್ಟಿಲು) ಹಾಕಿ ತೂಗಿದ್ದು ಇದೇ … Continue reading ಕಾಂತಬಾರೆ-ಬೂದಬಾರೆಯರಿಗೆ ತೊಟ್ಟಿಲು ಕಟ್ಟಿದ್ದ ತಾಕೊಡೆ ಮರ ಬುಡ ಸಹಿತ ಧರೆಗುರುಳಿದೆ