21 C
Bengaluru
Thursday, January 23, 2020

ರಾಜ್ಯ ಸರ್ಕಾರದ ಆಡಳಿತದಲ್ಲಿನ್ನು ಬಿಗ್ ಡೇಟಾ ಹವಾ: ಕುಳಿತಲ್ಲೇ ಬೇರೆ ಊರಿನ ನೀರಿನ ವಾಲ್ವ್ ನಿಯಂತ್ರಿಸುವಷ್ಟು ಸಲೀಸು

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಬೆಂಗಳೂರು: ಮುಂದುವರಿದ ದೇಶಗಳಲ್ಲಿ ದತ್ತಾಂಶ ಆಧಾರಿತ ಆಡಳಿತ ಕಾರ್ಯ ನಿರ್ವಹಣೆ ಇರುವಂತೆ ರಾಜ್ಯ ಸರ್ಕಾರದಲ್ಲೂ ಅನುಷ್ಠಾನಕ್ಕೆ ತರುವ ಪ್ರಯತ್ನ ಆರಂಭವಾಗಿದ್ದು, ಮೊದಲಿಗೆ ನಗರಾಭಿವೃದ್ಧಿ, ಶಿಕ್ಷಣ, ಸಾರಿಗೆ ಇಲಾಖೆಯಲ್ಲಿ ಬಿಗ್ ಡೇಟಾ ಸಂಸ್ಕೃತಿ ಅಳವಡಿಸಿಕೊಳ್ಳಲಾಗುತ್ತದೆ.

ಸದ್ಯದ ಆಡಳಿಯಂತ್ರದಲ್ಲಿ ಯಾವುದೇ ದತ್ತಾಂಶ ಬೇಕೆಂದರೆ ಕೋರಿಕೆ ಸಲ್ಲಿಸಬೇಕು, ಆ ಕೋರಿಕೆ ಕಡತ ರೂಪ ಹೊಂದಿ ಟೇಬಲ್​ನಿಂದ ಟೇಬಲ್​ಗೆ ಸುತ್ತಾಡಿ ಸರ್ಕಾರಕ್ಕೆ ಪುನಃ ಸಿಗುವಾಗ ಚಿತ್ರಣವೇ ಬೇರೆ ಇರುತ್ತದೆ. ಜತೆಗೆ ಅದನ್ನೆಲ್ಲ ಕಂಪೈಲ್ ಮಾಡುವುದು ದೊಡ್ಡ ಸವಾಲಿನ ಕೆಲಸ. ಇದಕ್ಕೆ ಬ್ರೇಕ್ ಹಾಕಲು ದತ್ತಾಂಶ ನಿರ್ವಹಣೆಗೆ ಪ್ರತ್ಯೇಕ ಕೇಂದ್ರ ತೆರೆದು ಆಡಳಿತ ಸುಸೂತ್ರಗೊಳಿಸುವ ಬಿಗ್ ಡೇಟಾ ಅನುಷ್ಠಾನಕ್ಕೆ ಸಿದ್ಧತೆ ನಡೆಯುತ್ತಿದ್ದು, ಈ ಕಾರ್ಯ ಆರಂಭಿಕವಾಗಿ 3 ಇಲಾಖೆಯಲ್ಲಿ ಶುರುವಾಗುತ್ತಿದೆ.

ಶಿಕ್ಷಣ, ಸಾರಿಗೆ ಇಲಾಖೆಗೆ ಹೋಲಿಸಿದರೆ ನಗರಾಭಿವೃದ್ಧಿ ಇಲಾಖೆ ಈ ವಿಷಯದಲ್ಲಿ ಮುಂದೆ ಹೋಗಿದ್ದು, 270 ಸ್ಥಳೀಯ ಸಂಸ್ಥೆಯ ನಿಖರ ದತ್ತಾಂಶಗಳನ್ನು ರಿಯಲ್ ಟೈಮ್ಲ್ಲಿ ಸಂಗ್ರಹಿಸಿ, ನಿರ್ವಹಿಸಿ, ವಿಶ್ಲೇಷಿಸುವ ‘ಅಬರ್ನ್ ಅಬ್ಸರ್ವೇಟರಿ’ ಕೇಂದ್ರವನ್ನು ರಾಜಾಜಿನಗರದಲ್ಲಿ ಆರಂಭಿಸಲು ಪ್ರಸ್ತಾವನೆ ಸಿದ್ಧಪಡಿಸಿದೆ. ಬೆಂಗಳೂರು ನಗರಕ್ಕೆ ಇಂಟಿಗ್ರೇಟೆಡ್ ಕಮಾಂಡ್ ಸೆಂಟರ್ ಪ್ರಸ್ತಾವನೆ ಕೂಡ ಸಿದ್ಧವಾಗಿದ್ದು, ಹಣಕಾಸು ಇಲಾಖೆ ಬಳಿ ಕ್ರಮವಾಗಿ 35 ಹಾಗೂ 288 ಕೋಟಿ ರೂ. ಪ್ರಸ್ತಾವನೆ ಇದೆ.

ಬಿಗ್ ಡೇಟಾ ಅಂದ್ರೇನು?: ಬಿಗ್ ಡೇಟಾ ಬಳಕೆ ಕುರಿತು ಉದಾರಹಣೆಗೆ ವಿವರಿಸುವು ದಾದರೆ, ನಗರಾಭಿವೃದ್ಧಿ ಇಲಾಖೆಯು ನಗರ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ದತ್ತಾಂಶ ಆಧಾರಿತವಾಗಿಯೇ ಯೋಜನೆ ರೂಪಿಸಲಿದೆ. ಸಾರಿಗೆ ಇಲಾಖೆಯಲ್ಲಿರುವ ಪ್ರತಿ ರಸ್ತೆಯ ವಾಹನ ಸಂಚಾರ ದತ್ತಾಂಶ, ಸಂಚಾರ ದಟ್ಟಣೆ ಬಗೆಗಿನ ಸಂಚಾರಿ ಪೊಲೀಸರಲ್ಲಿರುವ ದತ್ತಾಂಶವನ್ನು ಪಡೆದು ಅದನ್ನು ವಿಶ್ಲೇಷಿಸಿ ಯಾವ ರಸ್ತೆ ಅಗಲೀಕರಣದ ಅಗತ್ಯವಿದೆ, ಹೊಸ ರಸ್ತೆ ಎಲ್ಲಾಗಬೇಕು, ಎಲ್ಲಿ ವಿಸ್ತರಿಸಬೇಕು, ಯಾವುದನ್ನು ದ್ವಿಪಥ ಮಾಡಿದರೆ ಸೂಕ್ತ, ಯಾವ ಪ್ರದೇಶ ಹೆಚ್ಚು ವಾಣಿಜ್ಯ ಕ್ಷೇತ್ರವಾಗಿ ಬದಲಾಗುತ್ತಿದೆ, ಜನ ವಸತಿ ಪ್ರದೇಶ ಎಲ್ಲಿದೆ? ಎಂದು ತಿಳಿದು, ಅದಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ನೋಂದಣಿ ಮುದ್ರಾಂಕ ಇಲಾಖೆಯಿಂದ ನಗರ ಯಾವ ವ್ಯಾಪ್ತಿಯಲ್ಲಿ ವಿಸ್ತರಣೆಯಾಗುತ್ತಿದೆ ಎಂಬುದನ್ನು ಕಂಡುಕೊಂಡು ಆ ಭಾಗದ ಮೂಲಸೌಕರ್ಯಕ್ಕೆ ಒತ್ತುಕೊಡಲು ಅವಕಾಶವಿರಲಿದೆ.

ಶಿಕ್ಷಕರ ಸಮಯ ಪಾಲನೆ, ಮಕ್ಕಳ ಹಾಜರಾತಿ, ಬಿಸಿಯೂಟ ನಿರ್ವಹಣೆ, ಶಾಲಾ ಶೈಕ್ಷಣಿಕ ಗುಣಮಟ್ಟ ಅಳೆಯಲು ಶಿಕ್ಷಣ ಇಲಾಖೆಯಲ್ಲಿ ಬಿಗ್ ಡೇಟಾ ಅಳವಡಿಸಲಾಗುತ್ತದೆ. ಈ ತಂತ್ರಜ್ಞಾನ ಟೂಲ್​ಗಳನ್ನು ಬಳಸಿಕೊಳ್ಳುವ ಮೂಲಕ ವೈಜ್ಞಾನಿಕ ವಿಶ್ಲೇಷಣೆಗಳನ್ನೇ ಸರ್ಕಾರ ಪಡೆದುಕೊಳ್ಳಲಿದೆ. ಮಾನವ ಹಸ್ತಕ್ಷೇಪ, ಶಿಫಾರಸುಗಳಿಗೆ ಆಸ್ಪದ ಇಲ್ಲದಂತೆ ನೈಜ ಚಿತ್ರಣ ಇಲಾಖೆಗೆ ಸಿಕ್ಕಿಬಿಡುತ್ತದೆ.

ತಂತ್ರಜ್ಞಾನ ಹೆಚ್ಚೆಚ್ಚು ಬಳಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಯಾವ ನಗರದ, ಯಾವ ವಾರ್ಡ್​ಗೆ ಎಷ್ಟು ದಿನಕ್ಕೊಮ್ಮೆ ಕುಡಿಯುವ ನೀರು ಬಿಡಲಾಗಿದೆ ಎಂದು ಬೆಂಗಳೂರಲ್ಲೇ ಕುಳಿತು ಅರಿಯಬಹುದು. ಒಂದು ಬೀದಿಯ ನೀರಿನ ವಾಲ್ವ್ ನಿಯಂತ್ರಿಸಲೂ ಅವಕಾಶ ಸಿಗಬಹುದು. ಅಷ್ಟರ ಮಟ್ಟಿಗೆ ಆಡಳಿತ ಸುಸೂತ್ರಗೊಳಿಸಲು ಬಿಗ್ ಡೇಟಾದಲ್ಲಿ ಅವಕಾಶವಿದೆ.

ಎಲ್ಲ ಇಲಾಖೆಗೂ ವಿಸ್ತರಣೆಯಾಗಲಿದೆ

ಕರ್ನಾಟಕ ಜ್ಞಾನ ಆಯೋಗವು ನಗರಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲಿ ಬಿಗ್ ಡೇಟಾವನ್ನು ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವಂತೆ ಮತ್ತು ಮೈಸೂರನ್ನು ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿತ್ತು. ಇದೀಗ ಮೊದಲು ನಗರಾಭಿವೃದ್ಧಿ, ಶಿಕ್ಷಣ, ಸಾರಿಗೆ ಇಲಾಖೆಯಲ್ಲಿ ಬಳಸಿಕೊಳ್ಳಲು ತಯಾರಿ ನಡೆದಿದೆ. ಮುಂದೆ ಪ್ರತಿ ಇಲಾಖೆಗೂ ವಿಸ್ತರಣೆಯಾಗಲಿದೆ. ಬಿಗ್ ಡೇಟಾ ಕಲ್ಪನೆ ಮತ್ತು ಸಹಕಾರಕ್ಕಾಗಿ ಐಐಐಟಿ, ಐಐಎಂನಂಥ ಸಂಸ್ಥೆಗಳು ಕೈ ಜೋಡಿಸಲು ಮಾತುಕತೆಯೂ ನಡೆದಿದೆ.

ನಗರಾಭಿವೃದ್ಧಿ ಇಲಾಖೆಯಲ್ಲಿ ಬಿಗ್ ಡೇಟಾ ಬಳಕೆ ಸಂಬಂಧ ಒಂದಷ್ಟು ಪ್ರಾಥಮಿಕ ಹಂತದ ಕೆಲಸಗಳು ನಡೆದಿವೆ. ಮೊದಲಿಗೆ ಒಂದು ಅರ್ಬನ್ ಅಬ್ಸರ್ವೇಟರಿ ಆರಂಭಿಸುತ್ತಿ ದ್ದೇವೆ. ಹಂತಹಂತವಾಗಿ ಅದರ ಬಳಕೆ ವಿಸ್ತಾರವಾಗಲಿದೆ.

| ಅಂಜುಂ ಪರ್ವೆಜ್ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...