ಪಶು ವಿವಿ 10ನೇ ಘಟಿಕೋತ್ಸವ ನಾಳೆ

 ಬೀದರ್: ತಾಲೂಕಿನ ಕಮಠಾಣಾ ಹತ್ತಿರದ ನಂದಿನಗರದಲ್ಲಿರುವ ಕನರ್ಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಶುಕ್ರವಾರ ನಡೆಯಲಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಘಟಿಕೋತ್ಸವ ಭಾಷಣ ಮಾಡಲಿರುವುದು ಈ ಸಲದ ಸಮಾರಂಭಕ್ಕೆ ಹೆಚ್ಚಿನ ಮೆರಗು, ಮಹತ್ವ ತಂದುಕೊಟ್ಟಿದೆ. ಹೀಗಾಗಿ ಕಾರ್ಯಕ್ರಮ ಅದ್ದೂರಿ ಜತೆಗೆ ಸ್ಮರಣೀಯವಾಗಿ ನಡೆಸಲು ವಿವಿ ಟೀಮ್ ಭರ್ಜರಿ ಸಿದ್ಧತೆ ನಡೆಸಿದೆ.

ಶುಕ್ರವಾರ ಬೆಳಗ್ಗೆ 11ಕ್ಕೆ ವಿವಿ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವಿವಿ ಕುಲಾಧಿಪತಿಗಳಾದ ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸುವರು. ಪಶು ಸಂಗೋಪನೆ ಸಚಿವ ವೆಂಕಟರಾವ ನಾಡಗೌಡ, ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಪಾಲ್ಗೊಳ್ಳುವರು ಎಂದು ವಿವಿ ಕುಲಪತಿ ಪ್ರೊ. ಎಚ್.ಡಿ. ನಾರಾಯಣಸ್ವಾಮಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ವಿಜ್ಞಾನಗಳಲ್ಲಿ 309 ಸ್ನಾತಕ ಪದವಿ, 109 ಸ್ನಾತಕೋತ್ತರ ಪದವಿ ಹಾಗೂ 29 ಡಾಕ್ಟರೇಟ್ ಸೇರಿ ಒಟ್ಟು 447 ವಿದ್ಯಾಥರ್ಿಗಳಿಗೆ ಪದವಿ ಪ್ರದಾನ ನಡೆಯಲಿದೆ. ಈ ಪೈಕಿ 159 ಪದವೀಧರರು ಘಟಿಕೋತ್ಸವದ ವೇಳೆ ಖುದ್ದು ಹಾಜರಿದ್ದು, ಪದವಿ ಸ್ವೀಕರಿಸಲಿದ್ದಾರೆ. ವಿವಿಧ ಅತ್ಯುತ್ತಮ ಶೈಕ್ಷಣಿಕ ಸಾಧನೆಗೈದ ಪ್ರತಿಭಾನ್ವಿತ 34 ಪದವಿಧರರಿಗೆ 66 ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ ಎಂದರು.

ಅಥಣಿ ಹಾಗೂ ಪುತ್ತೂರಿನಲ್ಲಿ ಹೊಸ ಪಶುವೈದ್ಯಕೀಯ ಕಾಲೇಜು ಆರಂಭಿಸುವ ಕೆಲಸ ನಡೆದಿದೆ. ಬರುವ ಶೈಕ್ಷಣಿಕ ವರ್ಷದಿಂದ ಅಥಣಿ ಕಾಲೇಜು ಶುರುವಾಗುವ ಸಾಧ್ಯತೆಗಳಿವೆ. ಮಂಗಳೂರು ಮೀನುಗಾರಿಕೆ ಕಾಲೇಜಿನಿಂದ ಅಭಿವೃದ್ಧಿಪಡಿಸಿದ ಅಮೂರ್ ತಳಿಯ ಮೀನಿಗೆ ಎಲ್ಲೆಡೆ ವ್ಯಾಪಕ ಬೇಡಿಕೆ ಬಂದಿದೆ. ಕೋಳಿ ಮೊಟ್ಟೆಯಿಂದ ಹಾವು ಕಡಿತಕ್ಕೆ ಲಸಿಕೆ ನೀಡುವ ಸಂಶೋಧನೆ ಬೆಂಗಳೂರಿನ ಸಂಸ್ಥೆಯಲ್ಲಿ ನಡೆದಿದೆ. ಯಶಸ್ಸು ಸಿಗುವ ಆಶಾಭಾವ ಹೊಂದಲಾಗಿದೆ. ಪ್ರಸಕ್ತ ಸಾಲಿಗೆ ಸಕರ್ಾರ ಯೋಜನಾ ಅನುದಾನದಲ್ಲಿ ವಿವಿಯ ವಿವಿಧ ಚಟುವಟಿಕೆಗಳಿಗೆ 40 ಕೋಟಿ ರೂ. ಒದಗಿಸಿದೆ ಎಂದರು.

ವಿವಿ ಕುಲಸಚಿವ ಡಾ. ಶಿವಶಂಕರ ಉಸ್ತುಗರ್ೆ, ವಿಸ್ತರಣಾ ನಿದರ್ೇಶಕ ಡಾ. ಉಮಾಕಾಂತ ಬಿರಾದಾರ, ಸಂಶೋಧನಾ ನಿದರ್ೇಶಕ ಡಾ. ಬಿ.ವಿ.ಶಿವಪ್ರಕಾಶ ಇದ್ದರು.