Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಕೋಲ್ಹಾಪುರಕ್ಕೆ ಹೊರಟ ಹೊಸ ರೈಲು

Thursday, 14.06.2018, 8:01 PM       No Comments

ಬೀದರ್: ಇಲ್ಲಿಂದ ಮಹಾರಾಷ್ಟ್ರದ ಸುಕ್ಷೇತ್ರ ಕೋಲ್ಹಾಪುರಕ್ಕೆ ನೇರ ಸಂಪರ್ಕ ಕಲ್ಪಿಸುವ ಬೀದರ್-ಕೋಲ್ಹಾಪುರ ಹೊಸ ರೈಲು ಸಂಚಾರ ಸೇವೆಗೆ ಗುರುವಾರ ಚಾಲನೆ ದೊರೆತಿದೆ. ವಾಯಾ ಪಂಢರಪುರ ಮೂಲಕ ಈ ರೈಲು ಕೋಲ್ಹಾಪುರಗೆ ತೆರಳಲಿರುವುದರಿಂದ ಈ ಭಾಗದ ಜನರಿಗೆ ಎರಡು ಪುಣ್ಯಕ್ಷೇತ್ರಗಳ ದರ್ಶನಕ್ಕೆ ಮತ್ತಷ್ಟು ಸರಳ ಸಂಪರ್ಕ ವ್ಯವಸ್ಥೆ ಸಿಕ್ಕಂತಾಗಿದೆ.

ನಗರದ ರೈಲ್ವೆ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ ಹೊಸ ರೈಲಿಗೆ ಹಸಿರು ನಿಶಾನೆ ತೋರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೈಲು ಸೇವೆಯಿಂದ ಪಂಢರಪುರದ ಶ್ರೀ ಪಾಡುರಂಗ ಹಾಗೂ ಕೋಲ್ಹಾಪುರದ ಮಾತಾ ಮಹಾಲಕ್ಷ್ಮೀ ಭಕ್ತರಿಗೆ ಬಹಳಷ್ಟು ಅನುಕೂಲವಾಗಿದೆ. ಸದ್ಯ ವಾರಕ್ಕೊಮ್ಮೆ ಸಂಚರಿಸುವ ಈ ರೈಲು ಸೇವೆ ಆದಷ್ಟು ಬೇಗ ನಿತ್ಯ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಬೀದರ್ ಜನತೆಗೆ ಅನುಕೂಲ ಕಲ್ಪಿಸಲು ನಾಲ್ಕು ವರ್ಷಗಳಲ್ಲಿ 12 ರೈಲು ಸೇವೆ ಆರಂಭಿಸಲಾಗಿದೆ. ಮೂರು ತಿಂಗಳಲ್ಲಿ ನಾಗರಿಕ ವಿಮಾನಯಾನ ಸೇವೆಯೂ ಆರಂಭಗೊಳಿಸುವ ಪ್ರಯತ್ನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಕರ್ಾರ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯವೇ ಬರೆದಿದೆ ಎಂದರು.

ಪಂಢರಪುರ ವಿಠಲ್ ರುಕ್ಮಿಣಿ ಮಂದಿರದ ಸಹ-ಅಧ್ಯಕ್ಷ ಶ್ರೀ ಘನಿನಾಥ ಮಹಾರಾಜ್ ಔಸೇಕರ್, ಔಸಾದ ಶ್ರೀ ನಾಥ ಸಂಸ್ಥಾನದ ಪೀಠಾಧೀಶ ಗುರುಬಾಬಾ ಮಹಾರಾಜ ಔಸೇಕರ್, ವಿಶ್ವ ವಾರಕಾರಿ ಸೇನಾ ಅಧ್ಯಕ್ಷ ಶ್ರೀ ಏಕನಾಥ ಮಹಾರಾಜ ಹಂಡೇಜಿ, ಎಂಎಲ್ಸಿ ರಘುನಾಥರಾವ ಮಲ್ಕಾಪುರೆ, ದಕ್ಷಿಣ ಮಧ್ಯ ರೈಲ್ವೆ ವಿಭಾಗೀಯ ಸಹಾಯಕ ವ್ಯವಸ್ಥಾಪಕ ಶೈಲೇಂದ್ರಸಿಂಗ್, ಮಾಜಿ ಶಾಸಕ ಸುಭಾಷ ಕಲ್ಲೂರ್, ಬಾಬು ವಾಲಿ, ಈಶ್ವರಸಿಂಗ್ ಠಾಕೂರ್, ಉಪೇಂದ್ರ ದೇಶಪಾಂಡೆ, ಜಯಕುಮಾರ ಕಾಂಗೆ ಇತರರಿದ್ದರು.

ಬಾಕ್ಸ್

ವಾರಕ್ಕೊಂದು ಬಾರಿ ಸಂಚಾರ ಅಲ್ಪ ದರದಲ್ಲಿ ಸುಖ ಪ್ರಯಾಣ

ವಾರಕ್ಕೊಮ್ಮೆ ಈ ರೈಲು ಸೇವೆ ಇದೆ. ಬೀದರ್-ಪಂಢರಪುರಕ್ಕೆ ಜನರಲ್ ಬೋಗಿ 120 ರೂ, ಸ್ಲೀಪರ್ ಕಂಪಾಟರ್್ಮೆಂಟ್ 225 ರೂ, ಎಸಿ 2 ಟೈರ್ 865 ರೂ, ಥಡರ್್ ಎಸಿ 605 ರೂ. ಪ್ರಯಾಣ ದರವಿದೆ. ಬೀದರ್-ಕೋಲ್ಹಾಪುರ ಜನರಲ್ ಬೋಗಿ 160 ರೂ., ಸ್ಲೀಪರ್ ಕಂಪಾಟರ್್ಮೆಂಟ್ 310 ರೂ., ಎಸಿ 2 ಟೈರ್ 1210 ರೂ. ಮತ್ತು ಥಡರ್್ ಎಸಿ 845 ರೂ. ಪ್ರಯಾಣ ದರವಿದೆ ಎಂದು  ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬೀದರ್ನಿಂದ ಪ್ರತಿ ಗುರುವಾರ ಮತ್ತು ಕೋಲ್ಹಾಪುರದಿಂದ ಪ್ರತಿ ಬುಧವಾರ ರೈಲು ಸೇವೆ ಲಭ್ಯವಿದೆ. ಬರುವ ದಿನಗಳಲ್ಲಿ ಪ್ರತಿನಿತ್ಯ ಸಂಚರಿಸಲಿದೆ. ಟ್ರೇನ್ ಸಂಖ್ಯೆ-11416 ಕೊಲ್ಹಾಪುರದಿಂದ ರಾತ್ರಿ 11.25ಕ್ಕೆ ಹೊರಟು, ಮರುದಿನ ಬೆಳಗ್ಗೆ 10.15ಕ್ಕೆ ಬೀದರ್ಗೆ ಬರುತ್ತದೆ. ಟ್ರೇನ್ ಸಂಖ್ಯೆ-11417 ಬೀದರ್ನಿಂದ ಬೆಳಗ್ಗೆ 11.45ಕ್ಕೆ ಹೊರಟು ತಡರಾತ್ರಿ 12.35ಕ್ಕೆ ಕೊಲ್ಹಾಪುರಕ್ಕೆ ತಲುಪಲಿದೆ. ಭಾಲ್ಕಿ, ಉದಗೀರ್, ಲಾತೂರ್, ಉಸ್ಮಾನಾಬಾದ್, ಖುರುದ್ವಾಡಿ, ಪಂಢರಪುರ, ಮೀರಜ್ ಮಾರ್ಗವಾಗಿ ಕೋಲ್ಹಾಪುರಕ್ಕೆ ತೆರಳಲಿದೆ ಎಂದು ವಿವರಿಸಿದ್ದಾರೆ.

Leave a Reply

Your email address will not be published. Required fields are marked *

Back To Top