ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ಪ್ರತಿಭಟನೆ

ಬೀದರ್: ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ರದ್ಧತಿಗೆ ಆಗ್ರಹಿಸಿ ಬೀದರ್ನಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾ ರಿ ಎನ್ಪಿಎಸ್ ನೌಕರರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ವೇಳೆ ನೂರಕ್ಕೂ ಅಧಿಕ ನೌಕರರು ರಕ್ತದಾನ ಮಾಡುವ ಮೂಲಕ ಪ್ರತಿಭಟನೆಗೂ ಸಾರ್ಥಕತೆ ತಂದುಕೊಟ್ಟರು.

ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ನೂರಾರು ನೌಕರರು, ನಂತರ ಅಲ್ಲಿಂದ ನೇರವಾಗಿ ಬ್ರಿಮ್ಸ್ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿದರು. ನೂರು ನೌಕರರು ತಲಾ 350 ಮಿಲಿಲೀಟರ್ ರಕ್ತದಾನ ಮಾಡಿ ಮಾನವೀಯತೆ ಮೆರೆದರು. ಈ ಮೂಲಕ ರಕ್ತ ಕೊಟ್ಟೇವು-ಪಿಂಚಣಿ ಬಿಡೇವು ಎಂಬ ತಮ್ಮ ಘೋಷವಾಕ್ಯಕ್ಕೆ ಮತ್ತಷ್ಟು ಬಲ ತುಂಬಿದರು.

2006ರ ಏಪ್ರಿಲ್ 1ರಿಂದ ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಇದು ಲಕ್ಷಾಂತರ ನೌಕರರನ್ನು ಸಮಸ್ಯೆಗೆ ತಳ್ಳಿದೆೆ. ನೌಕರರ ಭವಿಷ್ಯದ ಬಗ್ಗೆ ಆತಂಕ ನಿಮರ್ಿಸಿದೆ. ನೌಕರರ ಕುಟುಂಬಕ್ಕೆ ಹೈರಾಣಕ್ಕೆ ಹಾಕಿದ ಈ ಪದ್ಧತಿ ಕೂಡಲೇ ಕೈಬಿಟ್ಟು, ಮುಂಚೆ ಜಾರಿಯಲ್ಲಿ ಇದ್ದ ನಿಶ್ಚಿತ ಪಿಂಚಣಿ ಪದ್ಧತಿ (ಒಪಿಎಸ್) ಜಾರಿಗೆ ತರಬೇಕು. ಈ ಮೂಲಕ ನೌಕರರು ಮತ್ತವರ ಕುಟುಂಬದ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.

ಬೇಡಿಕೆ ಸಂಬಂಧ ಡಿಸಿ ಮುಖಾಂತರ ಸಿಎಂಗೆ ಮನವಿ ಪತ್ರ ರವಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಮಾಣಿಕರಾವ ಪವಾರ್, ಪ್ರಧಾನ ಕಾರ್ಯದರ್ಶೀ ಚಂದ್ರಕಾಂತ ತಳವಾಡೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ದೇವಿದಾಸ ಜೋಶಿ, ಪ್ರಮುಖರಾದ ಪ್ರಕಾಶ ಮಹಿಮಾಕರ, ಮುತ್ತಣ್ಣ ರಂಡಾಳ, ಸಂತೋಷ ಪಾಟೀಲ್, ಯೋಗೇಶ ಸ್ವಾಮಿ, ಸ್ಮೀತಾ ಜಿಂದೆ, ಸಂಜೀವ ರಾಠೋಡ, ಸಚ್ಚಿದಾನಂದ ರುಮ್ಮಾ ಇತರರಿದ್ದರು.

ನಂತರ ಬ್ರಿಮ್ಸ್ನಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಸಂಸದ ಭಗವಂತ ಖೂಬಾ ಚಾಲನೆ ನೀಡಿದರು. ಈ ವೇಳೆ ನೌಕರರು ಸಕರ್ಾರದ ಮೇಲೆ ಒತ್ತಡ ಹೇರಲು ಸಂಸದರ ಗಮನ ಸೆಳೆದು, ಮನವಿ ಪತ್ರ ಅಪರ್ಿಸಿದರು. ಜಿಪಂ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ್, ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಸಿ.ಎಸ್.ರಗಟೆ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ರಾಜೇಶ ಪಾರಾ ಇತರರಿದ್ದರು.