ನ.16ಕ್ಕೆ ರಾಷ್ಟ್ರೀಯ ಪತ್ರಿಕಾ ದಿನಾಚರಣೆ

 ಬೀದರ್: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ನವೆಂಬರ್ 16ರಂದು ಬೀದರ್ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ನಗರದಲ್ಲಿ ಮಂಗಳವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಎಂ. ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ಪತ್ರಿಕಾ ದಿನಾಚರಣೆ ನಡೆಸಲು ತೀರ್ಮಾನಿಸಲಾಯಿತು.

ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದಿರುವ ಹೆಸರಾಂತ ಪತ್ರಕರ್ತ ಪಿ.ಸಾಯಿನಾಥ ಮುಖ್ಯ ಭಾಷಣಕಾರ ಹಾಗೂ ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರಿಗೆ ಆಹ್ವಾನಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ, ಗಣಿ ಸಚಿವ ರಾಜಶೇಖರ ಪಾಟೀಲ್ ಸೇರಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಆಮಂತ್ರಿಸಲು ನಿರ್ಧರಿಸಲಾಯಿತು.

ಅಕಾಡೆಮಿ ಸದಸ್ಯರೂ ಆದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಮಾತನಾಡಿ, ಮೈಸೂರಿನಲ್ಲಿ ರಾಷ್ಟ್ರೀಯ ಪತ್ರಿಕಾ ದಿನ ಆಚರಿಸಬೇಕೆಂದು ಸಾಕಷ್ಟು ಸದಸ್ಯರು ಪಟ್ಟು ಹಿಡಿದಿದ್ದರು. ಆದರೆ ಬೀದರ್ನಲ್ಲಿ ಆಯೋಜಿಸಬೇಕು ಎಂಬ ಬೇಡಿಕೆಗೆ ಅಕಾಡೆಮಿ ಮನ್ನಣೆ ನೀಡಿದೆ ಎಂದರು.

ಮುಖ್ಯ ಕಾರ್ಯಕ್ರಮದ ನಂತರ ಪಿ.ಸಾಯಿನಾಥ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ. ಹೈದರಾಬಾದ್ ಕನರ್ಾಟಕದ 6 ಜಿಲ್ಲೆ ಪತ್ರಕರ್ತರು ಹಾಗೂ ಕಲಬುರಗಿ, ರಾಯಚೂರು, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಸದೆ ಎರಡು ದಿನಗಳಾದರೂ ನಡೆಸಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿ ಬಂತು. ಕಾರ್ಯಕ್ರಮದ ಮುನ್ನ ದಿನ ಜಿಲ್ಲೆ ಪತ್ರಕರ್ತರಿಗಾಗಿ ವಿಚಾರ ಗೋಷ್ಠಿ ಆಯೋಜಿಸುವುದು ಸೂಕ್ತ ಎಂದು ಪತ್ರಕರ್ತ ಅಪ್ಪಾರಾವ ಸೌದಿ ಸಲಹೆ ನೀಡಿದರು.

ಪತ್ರಕರ್ತ ಗುರುರಾಜ ಕುಲಕಣರ್ಿ ಮಾತನಾಡಿ, ನ್ಯಾಯಾಂಗ ವರದಿಗಾರಿಕೆ ಮೇಲೆ ಸಂವಾದ ನಡೆಸಬೇಕು. ಅಪರಾಧ-ನ್ಯಾಯಾಲಯ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶಾಸನಸಭೆಯ ವರದಿಗಾರಿಕೆ, ಪತ್ರಿಕಾ ಭಾಷೆ ವಿಷಯಗಳನ್ನು ಆರಿಸಿಕೊಳ್ಳಬೇಕು ಎಂದು ಹೇಳಿದರು.

ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿ, ಬಾಬು ವಾಲಿ, ಪತ್ರಕರ್ತರಾದ ಶಶಿಕುಮಾರ ಪಾಟೀಲ್, ಅಶೋಕಕುಮಾರ ಕರಂಜಿ, ಮಾಳಪ್ಪ ಅಡಸಾರೆ, ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದರ್ೇಶಕ ಗವಿಸಿದ್ದಪ್ಪ ಹೊಸಮನಿ ಇತರರಿದ್ದರು.