ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪಿಸಿ

ಬೀದರ್: ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಅಥವಾ ಮಂಡಳಿ ರಚಿಸಲು ಆಗ್ರಹಿಸಿ ಕ್ರಿಶ್ಚಿಯನ್ ಹಕ್ಕುಗಳ ಸಮಿತಿಯು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.

ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಪ್ರಮುಖರು, ವಿವಿಧ ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ, ಮಂಡಳಿಗಳಿವೆ. ಆದರೆ ಕ್ರೈಸ್ತ ಸಮಾಜಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ರೈಸ್ತ ಸಮುದಾಯದವರಿಗೆ ಅಲ್ಪಸಂಖ್ಯಾತ ಎಂಬ ಹಣೆಪಟ್ಟಿ ಮಾತ್ರ ಇದೆ. ಆದರೆ ಸೌಲಭ್ಯಗಳಿಲ್ಲ. ಪ್ರತ್ಯೇಕ ನಿಗಮ, ಮಂಡಳಿ ಸ್ಥಾಪಿಸುವಂತೆ ಹೋರಾಟದ ಮೂಲಕ ಸಕರ್ಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಮ್ಮಿಶ್ರ ಸಕರ್ಾರ ಈ ದಿಸೆಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕ್ರಿಶ್ಚಿಯನ್ ಸಮಿತಿ ರಾಜ್ಯಾಧ್ಯಕ್ಷ ಅನಿಲ ಎಂ.ಜಾಧವ್, ಜಿಲ್ಲಾಧ್ಯಕ್ಷ ಜಗನ್ನಾಥ ಕೌಠಾ, ಪ್ರಮುಖರಾದ ಅಮರ ಭಾಂಗೆ, ಸೈಮನ್ ಚಿಲ್ಲಗರ್ಿ, ಪ್ರದೀಪಕುಮಾರ ಮಾಳಗೆ, ಯೋಹಾನ್ ಡಿಸೋಜಾ, ಅಶೋಕ ವಗ್ಗೆ, ಅನಿಲ ನಿಡೋದಾ, ಜಾನ್ ವಮರ್ಾ, ಅಕ್ಷಯ ನಾವದಗೇರಿ, ಅನಿಲ ಭವಾನಿ ಇತರರಿದ್ದರು.

ಕ್ರೈಸ್ತ ಸಮಾಜ ಸಾಕಷ್ಟು ಹಿಂದುಳಿದಿದ್ದು, ಸವರ್ಾಂಗೀಣ ವಿಕಾಸಕ್ಕಾಗಿ ಸಕರ್ಾರ ಯೋಜನೆ ರೂಪಿಸಬೇಕಿದೆ. ಪ್ರತ್ಯೇಕ ನಿಗಮ ಸ್ಥಾಪಿಸಿ ವಿಶೇಷ ಅನುದಾನ ಒದಗಿಸಿ ನ್ಯಾಯ ಒದಗಿಸಿಕೊಡಬೇಕೆಂಬ ಬೇಡಿಕೆ ಸಂಬಂಧ ಸಿಎಂಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

 

Leave a Reply

Your email address will not be published. Required fields are marked *