ಕಾರಂಜಾ ನೀರು ಖಾಲಿ ಮಾಡಿ ಪ್ರತಿಭಟನೆ!

ಬೀದರ್: ವೈಜ್ಞಾನಿಕ ಪರಿಹಾರ ಸೇರಿ ವಿವಿಧ ಬೇಡಿಕೆ ಮಂಡಿಸಿ ಕಳೆದ 43 ದಿನಗಳಿಂದ ಇಲ್ಲಿನ ಡಿಸಿ ಕಚೇರಿ ಎದುರು ಸರದಿ ನಿರಶನ ನಡೆಸುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ, ಇದೀಗ ತನ್ನ ಹೋರಾಟಕ್ಕೆ ತೀವ್ರ ಸ್ವರೂಪ ನೀಡಲು ನಿರ್ಧರಿಸಿದೆ. ಹೆದ್ದಾರಿ ತಡೆ, ಜೈಲ್ ಭರೋ, ಕಾರಂಜಾ ಜಲಾಶಯದ ನೀರು ಖಾಲಿ ಮಾಡುವುದು ಸೇರಿ ವಿವಿಧ ಹಂತದ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ, ಕಾಯರ್ಾಧ್ಯಕ್ಷ ಜಿಲಾನಿ ಪಟೇಲ್, ಪ್ರಧಾನ ಕಾರ್ಯದರ್ಶಿ ನಾಗಶೆಟ್ಟೆಪ್ಪ ಹಚ್ಚಿ, ಜಂಟಿ ಕಾರ್ಯದಶರ್ಿ ದತ್ತಾತ್ರೇಯರಾವ ಕುಲಕಣರ್ಿ, ಸಲಹೆಗಾರ ವೀರಭದ್ರಪ್ಪ ಉಪ್ಪಿನ್ ಇತರರು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿ 43 ದಿನ ಕಳೆದರೂ ಸಕರ್ಾರ, ಜನಪ್ರತಿನಿಧಿಗಳು ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ಮುಂದಿನ ಅನಾಹುತಗಳಿಗೆ ಸಕರ್ಾರವೇ ಹೊಣೆ ಎಂದು ಎಚ್ಚರಿಸಿದರು.

ಕಾರಂಜಾ ಜಲಾಶಯದಲ್ಲಿ ಬೀದರ್ ದಕ್ಷಿಣ ವಿಭಾಗದ 14, ಹುಮನಾಬಾದ್ ತಾಲೂಕಿನ 8 ಮತ್ತು ಭಾಲ್ಕಿ ತಾಲೂಕಿನ 6 ಹಳ್ಳಿಗಳ 16 ಸಾವಿರ ಎಕರೆ ಭೂಮಿ ಮುಳುಗಡೆಯಾಗಿದೆ. 5 ಸಾವಿರ ರೈತ ಕುಟುಂಬಗಳು ಜೀವನಾಧಾರ ಕಳೆದುಕೊಂಡಿದ್ದಾರೆ. ಭೂಸ್ವಾಧಿನ ಮಾಡಿಕೊಂಡ ಸರ್ಕಾರ ಎಲ್ಲ ಸಂತ್ರಸ್ತರಿಗೆ ಸಮಾನ ಹಾಗೂ ವೈಜ್ಞಾನಿಕ ಪರಿಹಾರ ನೀಡಿಲ್ಲ. ಬಹುತೇಕರಿಗೆ ಎಕರೆಗೆ ಮೂರ್ನಾಲ್ಕು ಸಾವಿರ ಪರಿಹಾರ ನೀಡಿ ಘೋರ ಅನ್ಯಾಯ ಮಾಡಲಾಗಿದೆ. ನ್ಯಾಯಸಮ್ಮತ ಪರಿಹಾರಕ್ಕಾಗಿ ನಾಲ್ಕು ದಶಕಗಳಿಂದ ಹೋರಾಡುತ್ತಿದ್ದರೂ ಸರ್ಕಾರ ಗಮನಹರಿಸಿಲ್ಲ. ಇದು ರೈತರ ಬಗ್ಗೆ ಸರ್ಕಾ ರ ಹಾಗೂ ಜನಪ್ರತಿನಿಧಿಗಳಿಗೆ ಎಂಥ ಕಾಳಜಿ ಇದೆ ಎಂಬುದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.
ಎಕರೆಗೆ 20 ಲಕ್ಷ ರೂ.ಪರಿಹಾರ ಒದಗಿಸಬೇಕು. ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡಬೇಕು. ವೈದ್ಯಕೀಯ ಖಚರ್ು ಸಕರ್ಾರ ಭರಿಸಲು ಸ್ಮಾಟರ್್ ಹೆಲ್ತ್ಕಾರ್ಡ ನೀಡಬೇಕು. ಸಂತ್ರಸ್ತರಿಗೆ ಗೃಹೋಪಯೋಗಿ ವಿದ್ಯುತ್ ಉಚಿತ ನೀಡಬೇಕು. ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳಿವೆ ಎಂದರು. ಜಾಕೀರ್ ಪಟೇಲ್, ಬಸವರಾಜ ಮೂಲಗೆ ಇತರರಿದ್ದರು.