ಫಲ ನೀಡಲಿಲ್ಲ ಸಚಿವರ ಭರವಸೆ

ಬೀದರ್: ಇಲ್ಲಿನ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರಂಜಾ ಸಂತ್ರಸ್ತರೊಂದಿಗೆ ಬುಧವಾರ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಚಚರ್ಿಸಿದರು. ಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ಸಮಾಲೋಚನೆ ನಡೆಸಿದರು. ಆದರೆ ಧರಣಿ ಕೈಬಿಡುವ ಸಚಿವರ ಮನವಿಗೆ ಸಂತ್ರಸ್ತರು ಒಪ್ಪಲಿಲ್ಲ. ಹೀಗಾಗಿ ಕಳೆದ ದಿ.9ರಿಂದ ಶುರುವಾಗಿರುವ ಧರಣಿ ಮುಂದುವರಿದಿದೆ.

ಸಂತ್ರಸ್ತರ ಅಹವಾಲು ಆಲಿಸಿ ಮಾತನಾಡಿದ ಅವರು, ರಾಜ್ಯ ಸಕರ್ಾರ ನಿಮ್ಮ ಜತೆಗಿದೆ. ಬೇಡಿಕೆಗಳಿಗೆ ಸಂಬಂಧಿಸಿದಂತೆ ಏನಾದರೂ ಕಾನೂನಾತ್ಮಕ ತೊಡಕುಗಳಿದ್ದರೆ ಅದನ್ನು ಸರಿಪಡಿಸಲಾಗುವುದು. 15 ದಿನಗಳೊಳಗೆ ಸಭೆ ನಡೆಸಿ ಈ ಬಗ್ಗೆ ಚಚರ್ಿಸಲಾಗವುದು. ನಿಮ್ಮ ಧ್ವನಿಯನ್ನು ಸಕರ್ಾರದ ಹತ್ತಿರ ತೆಗೆದುಕೊಂಡು ಹೋಗುವೆ. ಸಂಬಂಧಿಸಿದ ಸಚಿವರೊಂದಿಗೆ ಈ ಬಗ್ಗೆ ಚಚರ್ಿಸುವೆ ಎಂದರು. ಒಂದಿಷ್ಟು ಸಮಯ ಕೊಡಿ, ಧರಣಿ ಬಿಡಿ ಎಂದರು. ಆದರೆ ಸಂತ್ರಸ್ತರು ಇದಕ್ಕೆ ಸಮ್ಮತಿಸಿಲ್ಲ. ಸಕರ್ಾರದಿಂದ ಸ್ಪಷ್ಟ ಆದೇಶ ಬರುವವವರೆಗೆ ಧರಣಿ ಮುಂದುವರಿಸುತ್ತೇವೆ ಎಂದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಖಾಶೆಂಪುರ, ಸಂತ್ರಸ್ತರಿಗೆ ಹೆಚ್ಚುವರಿ ಪರಿಹಾರ ನೀಡುವ ಸಂಬಂಧ ಶೀಘ್ರ ಜಲಸಂಪನ್ಮೂಲ ಸಚಿವರ ಜತೆಗೆ ಚಚರ್ಿಸಲಾಗುವುದು. ಪರಿಹಾರ ನೀಡಿಕೆ ಸಂಬಂಧ ಕೆಲ ತಾಂತ್ರಿಕ ತೊಂದರೆಗಳಿವೆ. ಅವನ್ನೆಲ್ಲ ನಿವಾರಿಸಿ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಎಕರೆಗೆ ಮೂರ್ನಾಲ್ಕು ಸಾವಿರ ರೂ. ಮಾತ್ರ ಪರಿಹಾರ ಸಿಕ್ಕಿದೆ. ಕೋಟರ್್ಗೆ ಹೋಗಿ ಆದೇಶ ತಂದವರಿಗೆ ಎಕರೆಗೆ 80 ಸಾವಿರದವರೆಗೆ ಸಕರ್ಾರದಿಂದ ಪರಿಹಾರ ಸಿಕ್ಕಿದೆ. ಆದರೆ ಹೆಚ್ಚಿನ ಸಂತ್ರಸ್ತರು ಕೋಟರ್್ಗೆ ಹೋಗಿಲ್ಲ. ಹೆಚ್ಚಿನ ಪರಿಹಾರವೂ ಸಿಕ್ಕಿಲ್ಲ. ಎಲ್ಲ ಸಂತ್ರಸ್ತರಿಗೆ ಸೂಕ್ತ ಪರಿಹಾರ ಸಿಗಬೇಕಾದರೆ ತಾಂತ್ರಿಕ ಮತ್ತು ಕಾನೂನಾತ್ಮಕ ತೊಂದರೆ ನಿವಾರಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆದಿವೆ ಎಂದರು. ಸಂತ್ರಸ್ತರ ಸಮಸ್ಯೆ ನಿವಾರಿಸುವುದು ನನ್ನ ಆದ್ಯತೆಯಲ್ಲಿ ಸೇರಿದೆ ಎಂದು ಸ್ಪಷ್ಟಪಡಿಸಿದರು.

ಕಾರಂಜಾ ಯೋಜನೆಯಲ್ಲಿ ಮುಳುಗಡೆಯಾಗಿರುವ ಭೂಮಿಗೆ ಎಕರೆಗೆ 20 ಲಕ್ಷ ರೂ. ಪರಿಹಾರ ನೀಡುವುದು ಸೇರಿ ವಿವಿಧ 10 ಬೇಡಿಕೆ ಮಂಡಿಸಿ ಮುಳುಗಡೆ ಸಂತ್ರಸ್ತ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ. ಕಳೆದ ಎರಡು ದಿನಗಳಿಂದ ಮಳೆ, ಚಳಿ ಜಾಸ್ತಿಯಾಗಿದ್ದರಿಂದ ರಶನನಿರತವರ ಆರೋಗ್ಯ ಸ್ಥಿತಿ ಬಿಗಡಾಯಿಸುವಂತೆ ಮಾಡುತ್ತಿದೆ.