ಸಮಸ್ಯೆ ನಿವಾರಣೆಗೆ ಸ್ಪಂದಿಸದ ರಾಜಕಾರಣಿಗಳು

ಬೀದರ್: ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ 17 ದಿನಗಳಿಂದ ಡಿಸಿ ಕಚೇರಿ ಎದುರು ನಡೆದಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಶನಿವಾರ ಭೇಟಿ ನೀಡಿ ಬೆಂಬಲ ಸೂಚಿಸಿದರು.

ನ್ಯಾಯಸಮ್ಮತ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಸಂತ್ರಸ್ತರು ನಾಲ್ಕು ದಶಕಗಳಿಂದ ಹೋರಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಇವರ ಸಮಸ್ಯೆ ಗಂಭೀರ ಪರಿಗಣಿಸಿ ನಿವಾರಿಸುವಲ್ಲಿ ಜಿಲ್ಲೆಯ ಎಲ್ಲ ರಾಜಕಾರಣಿಗಳು ವಿಫಲರಾಗಿದ್ದಾರೆ. ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವ ವಿಷಯದಲ್ಲಿ ತಾಳಿರುವ ಧೋರಣೆ ಖಂಡನೀಯ ಎಂದರು.

ಜನಪ್ರತಿನಿಧಿಗಳು ಎನಿಸಿಕೊಂಡು ಜನರ ಸಮಸ್ಯೆಗೆ ಸ್ಪಂದಿಸದಿದ್ದರೆ ಹೇಗೆ? ಇಂಥ ಧೋರಣೆ ತಳೆದರೆ ನಮ್ಮ ಗೌರವಕ್ಕೆ ನಾವೇ ಧಕ್ಕೆ ತಂದುಕೊಂಡಂತೆ ಆಗುತ್ತದೆ. ರಾಜಕೀಯದಲ್ಲಿ ಯಾವುದೇ ಪದವಿ, ಸ್ಥಾನಮಾನ ಶಾಶ್ವತವಲ್ಲ. ನಾನು ರೈತನ ಮಗ. ಹೋರಾಟಗಾರ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವೆ. ಹೋರಾಟದಲ್ಲಿ ಭಾಗಿಯಾಗುವೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಇನ್ನಾದರೂ ಪಕ್ಷಭೇದ ಮರೆತು ಸಂತ್ರಸ್ತರ ನೆರವಿಗೆ ಬರಬೇಕಿದೆ. ಈ ವಿಷಯ ಸಿಎಂ ಗಮನಕ್ಕೆ ತಂದು ಸಚಿವ ಸಂಪುಟದಲ್ಲಿ ಚಚರ್ಿಸಲು ಒತ್ತಡ ಹೇರುವೆ. ಅಗತ್ಯಬಿದ್ದರೆ ಸಂತ್ರಸ್ತರ ಪರವಾಗಿ ವಿಧಾನಸೌಧ ಎದುರು ಧರಣಿ ಹೂಡಲು ಸಿದ್ಧ ಎಂದು ಘೋಷಿಸಿದರು.

ರೈತ ಸಂಘಟನೆ ರಾಜ್ಯ ಕಾರ್ಯದಶರ್ಿ ಕೋಂಡಿಬಾರಾವ ಪಾಂಡ್ರೆ, ಶಿವಕುಮಾರ ಸ್ವಾಮಿ, ಬಾಬುರಾವ ಹೊನ್ನಾ ಮಾತನಾಡಿದರು. ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್, ಕಾಯರ್ಾಧ್ಯಕ್ಷ ಜಿಲಾನಿ ಪಟೇಲ್, ಗೌರವಾಧ್ಯಕ್ಷ ಶಿವಶರಣಪ್ಪ ಪಾಟೀಲ್, ಪ್ರಮುಖರಾದ ನಾಗಶೆಟ್ಟೆಪ್ಪ ಹಚ್ಚಿ, ದತ್ತಾತ್ರಿರಾವ ಕುಲಕಣರ್ಿ, ವೀರಭದ್ರಪ್ಪ ಉಪ್ಪಿನ, ಜಾಕೀರ್ ಪಟೇಲ್, ಬಸವರಾಜ ಮೂಲಗೆ, ಸಂಗ್ರಾಮಪ್ಪ ಹಿಂದೊಡ್ಡಿ, ಸೂರ್ಯಕಾಂತ ಕುಲಕಣರ್ಿ, ಅಶೋಕ ಕುಲಕಣರ್ಿ, ವೀರಶೆಟ್ಟಿ ಪಾಟೀಲ್, ಅನೀಲಕುಮಾರ ಪಾಟೀಲ್, ಭೀಮರಾವ ಗುತ್ತಿ, ಮಲ್ಲಿಕಾಜರ್ುನ ಶೇರಿಕಾರ, ಬಾಬುರಾವ ಮಾಳೆಗಾಂವ, ಸುಭಾಷ ಪೊಲೀಸ್ ಪಾಟೀಲ್, ವೀರಶೆಟ್ಟಿ ಚನ್ನಶೆಟ್ಟಿ, ಮಲ್ಲಿಕಾಜರ್ುನ ಉದಗೀರೆ, ದಿಲೀಪ ಗುತ್ತಿ, ನಂದಕುಮಾರ ರಾಚಪ್ಪ, ಜಗನ್ನಾಥ ಚನ್ನಶೆಟ್ಟಿ, ಲೋಕೇಶ ಕನಶೆಟ್ಟಿ, ಅನೀಲ ಹಜ್ಜರಗಿ, ಚನ್ನಮಲ್ಲಪ್ಪ ಹಜ್ಜರಗಿ, ಶಾಂತಕುಮಾರ ಸ್ವಾಮಿ ಇತರರಿದ್ದರು.