ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ಗ್ರಹಣ

ಸ.ದಾ. ಜೋಶಿ ಬೀದರ್

ಇಲ್ಲಿ ನಿಮರ್ಿಸಲು ಉದ್ದೇಶಿಸಿರುವ ಬಹು ನಿರೀಕ್ಷಿತ ಜಿಲ್ಲಾ ಸಕರ್ಾರಿ ಕಚೇರಿಗಳ ಸಂಕೀರ್ಣ ಕಟ್ಟಡಕ್ಕೆ ಅಕ್ಷರಶಃ ಗ್ರಹಣ ಹಿಡಿದಿದೆ. ಸಕರ್ಾರ ಬದಲಾದರೂ ಕಟ್ಟಡ ಕೆಲಸ ಆರಂಭವಾಗಿಲ್ಲ. ಹಿಂದಿನ ಸಕರ್ಾರದ ಮೂರು ವರ್ಷದಲ್ಲಿ ಜಿಲ್ಲಾ ಸಂಕೀರ್ಣವನ್ನು ಬರೀ ಚಚರ್ೆಯಲ್ಲಿ ಕಟ್ಟಲಾಗಿದೆ ! ಸಂಕೀರ್ಣ ಕಟ್ಟಡ ಎಲ್ಲಿ ಕಟ್ಟಬೇಕೆಂಬ ಬಗ್ಗೆ ಕಳೆದ ವರ್ಷ ಜಾಗ ಅಂತಿಮಗೊಳಿಸಿ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ಮಾಡಿಸಿದ್ದೇ ದೊಡ್ಡ ಸಾಧನೆ ಎಂಬಂತಾಗಿದೆ.
ಕೆಲ ವರ್ಷಗಳಿಂದ ಜಿಲ್ಲಾ ಕಚೇರಿಗಳ ಸಂಕೀರ್ಣ ವಿಷಯ ಸಾಕಷ್ಟು ಚಚರ್ೆಯಲ್ಲಿದೆ. ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಆಗಾಗ್ಗೆ ಪರ-ವಿರೋಧಕ್ಕೆ ಅನುವು ಮಾಡಿಕೊಟ್ಟು ವಿವಾದಕ್ಕೂ ಕಾರಣವಾಗಿತ್ತು. ವ್ಯಾಪಕ ಚಚರ್ೆ ನಡುವೆಯೂ ಈ ಕಟ್ಟಡ ನಿಮರ್ಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದಕ್ಕಾಗಿ 50 ಕೋಟಿ ಅನುದಾನ ಲಭ್ಯವಿದ್ದರೂ ಕಾಮಗಾರಿ ಆರಂಭ ಪ್ರಕ್ರಿಯೆ ನಡೆದಿಲ್ಲ. ಸಕರ್ಾರ ಮತ್ತು ಆಡಳಿತದ ಈ ವ್ಯವಸ್ಥೆ ಬಗ್ಗೆ ಜನತೆ ಪ್ರಶ್ನಿಸುವಂತಾಗಿದೆ.
ಮೊದಲು ಚಿಕ್ಪೇಟ ಹತ್ತಿರ ಸಂಕೀರ್ಣ ನಿಮರ್ಿಸುವ ನಿಧರ್ಾರ ಕೈಗೊಳ್ಳಲಾಯಿತು. ನಂತರ ಆ ಜಾಗ ಕೈಬಿಟ್ಟು ಬೆನಕನಳ್ಳಿ ರಸ್ತೆಯ ಮಾಮನಕೇರಿ ಶಿವಾರದಲ್ಲಿ ಮಾಡಲು ಸಿದ್ಧತೆ ನಡೆದವು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಕಾರಣ, ಈಗಿರುವ ಜಿಲ್ಲಾಧಿಕಾರಿ ಕಚೇರಿ ಮತ್ತು ಸುತ್ತಮುತ್ತಲಿನ ವಿವಿಧ ಇಲಾಖೆಗಳ ಜಾಗ ಪಡೆದು ಸಂಕೀರ್ಣ ನಿಮರ್ಿಸಲು ಕಳೆದ ವರ್ಷ ನಿಧರ್ಾರ ಕೈಗೊಳ್ಳಲಾಯಿತು. ಇದರಂತೆ 2017ರ ಆಗಸ್ಟ್ 13ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಕಾಮಗಾರಿ ಶಂಕುಸ್ಥಾಪನೆ ಸಹ ನೆರವೇರಿತು. ವಿಚಿತ್ರವೆಂದರೆ ಇದಾಗಿ 10 ತಿಂಗಳಾದರೂ ಒಂದೇ ಕಲ್ಲು ಬಿದ್ದಿಲ್ಲ. ಕಟ್ಟಡ ನಿಮರ್ಾಣ ಯಾವಾಗ? ಏನೋ ಎಂಬ ಗೊಂದಲ ಮೂಡಿದೆ.
ಡಿಸಿ ಕಚೇರಿ ಜತೆಗೆ ಪಕ್ಕದಲ್ಲಿರುವ ನಗರಸಭೆ ಕಚೇರಿ, ಎದುರಿನ ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆ ಜಾಗ ಸೇರಿಸಿ ಬೃಹತ್ ಜಿಲ್ಲಾ ಕಚೇರಿಗಳ ಸಂಕೀರ್ಣ ನಿಮರ್ಿಸಲು ಉದ್ದೇಶಿಸಲಾಗಿತ್ತು. ಆದರೆ ಈ ನಿರ್ಣಯ ಕೈಗೊಂಡು 10 ತಿಂಗಳಾದರೂ ವಿವಿಧ ಇಲಾಖೆಗಳಿಂದ ಜಾಗವನ್ನು ತನ್ನ ಸುಪದರ್ಿಗೆ ಪಡೆದು ಕೆಲಸ ಆರಂಭಿಸುವುದು ಸಾಧ್ಯವಾಗಿಲ್ಲ. ಮೂರ್ನಾಲ್ಕು ತಿಂಗಳು ಚುನಾವಣೆ ಗುಂಗಿನಲ್ಲಿ ಎಲ್ಲರೂ ಈ ವಿಷಯ ಮರೆತಂತಾಗಿದೆ. ಇದೀಗ ರಾಜ್ಯದಲ್ಲಿ ಹೊಸ ಸಕರ್ಾರ ಬಂದಿದೆ. ಈ ಸಕರ್ಾರದಲ್ಲಾದರೂ ಕೆಲಸ ಆರಂಭವಾಗುವುದೇ ಕಾದು ನೋಡಬೇಕು.

ಸದ್ಯದ ಡಿಸಿ ಕಚೇರಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕಚೇರಿ ಸಂಕೀರ್ಣ ನಿಮರ್ಿಸಲು ನಿರ್ಧರಿಸಲಾಗಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಿದ್ದು, ಕಾರಣಾಂತರಕ್ಕೆ ಇನ್ನೂ ಕೆಲಸ ಶುರುವಾಗಿಲ್ಲ. ಇತರೆ ಇಲಾಖೆಗಳ ಜಾಗ ಹಸ್ತಾಂತರ ಸೇರಿ ಏನೇ ಸಣ್ಣಪುಟ್ಟ ಸಮಸ್ಯೆ, ಗೊಂದಲಗಳಿದ್ದರೂ ಪರಿಹರಿಸಿಕೊಂಡು ಬೇಗ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ ಕೆಲಸ ಆರಂಭಿಸಲಾಗುವುದು.
| ರಹೀಮ್ ಖಾನ್, ಸ್ಥಳೀಯ ಶಾಸಕ

Leave a Reply

Your email address will not be published. Required fields are marked *