ಮಾತು ಎಲ್ಲರ ಮನಸ್ಸು ಅರಳಿಸುವಂತಿರಲಿ

ವಿಜಯವಾಣಿ ಸುದ್ದಿಜಾಲ ಹುಮನಾಬಾದ್
ಬಸವಾದಿ ಶರಣರು ನುಡಿದಂತೆ ನಡೆ ಎಂದಿದ್ದಾರೆ. ನಮ್ಮ ಮಾತುಗಳು ಮನಸ್ಸು ಅರಳಿಸುವಂತಿರಬೇಕು ಎಂದು ಬೀದರ್ ಬಸವ ಸೇವಾ ಪ್ರತಿಷ್ಠಾನದ ಪೂಜ್ಯ ಅಕ್ಕ ಅನ್ನಪೂರ್ಣ ನುಡಿದರು.

ಪಟ್ಟಣದಲ್ಲಿ ಬಸವ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ 192ನೇ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಬಸವಾದಿ ಶರಣರು ಮಾನವನ ಏಳಿಗೆಗೆ ನೀಡಿರುವ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ನಿವೃತ್ತ ಮುಖ್ಯಗುರು ಮಹಾದೇವಯ್ಯ ಕಲ್ಯಾಣಮಠ ಅಧ್ಯಕ್ಷತೆ ವಹಿಸಿದ್ದರು. ಬಸವಕಲ್ಯಾಣ ಅನುಭವ ಮಂಟಪದ ಶ್ರೀ ಸಂಗಮೇಶ್ವರ ದೇವರು, ಬೀದರ್ ಸಿದ್ಧಾರ್ಥ ಪದವಿ ಕಾಲೇಜಿನ ಉಪನ್ಯಾಸಕ ಜಗದೇವಪ್ಪ ಚೆಕ್ಕಿ ಉದ್ಘಾಟಿಸಿ ಮಾತನಾಡಿದರು.

ಬಸವರಾಜ ರುದ್ರವಾಡಿ, ಮಡಿವಾಳಯ್ಯ ಸ್ವಾಮಿ, ಮಲ್ಲಿಕಾರ್ಜುನ ರಟಕಲೆ, ಡಾ.ಎಸ್.ಆರ್. ಮಠಪತಿ, ಅಶೋಕ ತುಪ್ಪದ, ಸಿದ್ದುಕುಮಾರ ಗಿರಿಮಲ್ಲ, ಶೋಭಾ ಅವರಾದೆ, ಕರುಣಾ ಸಲಗರ ಇತರರಿದ್ದರು. ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರಿ ಸ್ವಾಗತಿಸಿದರು. ಬಾಬುರಾವ ಪಾಟೀಲ್ ವಂದಿಸಿದರು. ಮಲ್ಲಿಕಾರ್ಜುನ ಸಂಗಮಕರ್ ನಿರೂಪಣೆ ಮಾಡಿದರು.

ಕೈಗಾರಿಕಾ ಇಲಾಖೆ ಉಪನಿದರ್ೇಶಕ ರಮೇಶ ಮಠಪತಿ 2019ರ ಬಸವ ದಿನದಶರ್ಿಕೆ ಬಿಡುಗಡೆಗೊಳಿಸಿದರು. ಮೊಳಕೇರಾ ಗ್ರಾಮದ ಮೋಳಿಗೆ ಮಹಾದೇವಿ ಭಜನಾ ಮಂಡಳಿ ವಚನ ಭಜನೆ ನಡೆಸಿಕೊಟ್ಟಿತು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನಾ ಅವರನ್ನು ಸನ್ಮಾನಿಸಲಾಯಿತು.