ಲೋಕ ಸಮರಕ್ಕೆ ಜಿಲ್ಲಾಡಳಿತ ತಯಾರಿ

ವಿಜಯವಾಣಿ ಸುದ್ದಿಜಾಲ ಬೀದರ್
ಏಪ್ರಿಲ್ 23ರಂದು ನಡೆಯಲಿರುವ ಬೀದರ್ ಕ್ಷೇತ್ರ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಭರಪೂರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆ ನ್ಯಾಯಸಮ್ಮತ, ಪಾರದರ್ಶಕ ನಡೆಸಲು ಎಲ್ಲ ರೀತಿಯಿಂದಲೂ ಆಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ತಿಳಿಸಿದ್ದಾರೆ.

ಬೀದರ್ ಕ್ಷೇತ್ರದ ವ್ಯಾಪ್ತಿಯಲ್ಲಿ ಜಿಲ್ಲೆಯ 6 ಮತ್ತು ಕಲಬುರಗಿಯ ಆಳಂದ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಒಟ್ಟು 1999ಮತಗಟ್ಟೆ ಸ್ಥಾಪಿಸಲಾಗುತ್ತ್ತಿದೆ. ಇದಕ್ಕೆ ಬೇಕಾಗುವ ಅಗತ್ಯ ಸಿಬ್ಬಂದಿ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ. 17.51 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಮಾರ್ಚ್​ 28 ರಂದು ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ನಾಮಪತ್ರಗಳ ಪರಿಶೀಲನೆ ಏಪ್ರಿಲ್ 5ಕ್ಕೆ, ಉಮೇದುವಾರಿಕೆ ವಾಪಸು ಪಡೆಯಲು ಏ. 8 ಕೊನೆಯ ದಿನವಿದೆ. ಏಪ್ರಿಲ್ 23ರಂದು ಮತದಾನ ನಡೆದರೆ, ಮೇ 23ಕ್ಕೆ ಮತ ಎಣಿಕೆ ಜರುಗಲಿದೆ. ಚುನಾವಣೆ ಘೋಷಣೆಯೊಂದಿಗೆ ನೀತಿ ಸಂಹಿತೆ ಜಾರಿ ಬಂದಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಇದರ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮತದಾರರ ಪಟ್ಟಿ ಕರಾರುವಕ್ಕಾಗಿ ಸಿದ್ಧಪಡಿಸಲಾಗಿದೆ. ಭಾವಚಿತ್ರ ಇರುವ ಮತದಾರರ ಪಟ್ಟಿಯನ್ನೇ ಉಪಯೋಗಿಸಲಾಗುತ್ತಿದೆ. ಮತದಾನ ವೇಳೆ ಅಂಗವಿಕಲರಿಗೆ ವಿಶೇಷ ಸೌಲಭ್ಯ ಒದಗಿಸುತ್ತಿದ್ದು, ಎಲ್ಲ ಮತಗಟ್ಟೆಗಳು ನೆಲ ಮಹಡಿಯಲ್ಲಿ ಇರಲಿವೆ. ಅಂಗವಿಕಲರ ಅನುಕೂಲಕ್ಕಾಗಿ ವ್ಹೀಲ್ ಚೇರ್ನೊಂದಿಗೆ ಗಟ್ಟಿಮುಟ್ಟಾದ ರ್ಯಾಂಪ್ ವ್ಯವಸ್ಥೆ ಇರಲಿದೆ. ಸಂಜ್ಞೆ ಮೂಲಕ ಅಥರ್ೈಸುವರಿಗೆ ಒದಗಿಸುವಿಕೆ ಮತ್ತು ಮನೆಯಿಂದ ಮತಗಟ್ಟೆಗೆ ಹಾಗೂ ಮತಗಟ್ಟೆಯಿಂದ ಮನೆಗೆ ಸಾರಿಗೆ ವ್ಯವಸ್ಥೆ ಸೇರಿ ಇತರೆ ಸೌಲಭ್ಯ ಒದಗಿಸುವಂತೆ ಆಯೋಗ ನಿದರ್ೇಶನ ನೀಡಿದೆ ಎಂದರು.

ಪ್ರಸಕ್ತ ಅಭ್ಯಥರ್ಿಗಳು ಹೊಸದಾಗಿ ತಿದ್ದುಪಡಿಯಾದ ಫಾರಂ 26ನ್ನು ಮಾತ್ರ ಅಫಿಡವಿಟ್ ಸಲ್ಲಿಸಲು ಬಳಸಬೇಕು. ಸಕರ್ಾರದ ಹೊಸ ತಿದ್ದುಪಡಿಯಂತೆ ಈ ಫಾರಂ ಬಳಸಲು ಚುನಾವಣಾ ಆಯೋಗ ಆದೇಶಿಸಿದೆ. ಈ ಫಾರಂ ಸಿಇಒ ಕನರ್ಾಟಕ ಅವರ ವೆಬ್ಸೈಟ್ನಲ್ಲೂ ಲಭ್ಯವಿದೆ. ಅಭ್ಯಥರ್ಿಗಳು ತಿದ್ದುಪಡಿ ಮಾಡಿದ ಫಾರಂ 26ನ್ನೇ ಬಳಸಿ ತಮ್ಮ ಅಫಿಡವಿಟ್ ಸಲ್ಲಿಸಬೇಕಾಗುತ್ತದೆ ಎಂದು ಡಾ. ಮಹಾದೇವ ಹೇಳಿದರು.
ಎಸ್ಪಿ ಟಿ. ಶ್ರೀಧರ್, ಜಿಪಂ ಸಿಇಒ ಮಹಾಂತೇಶ ಬೀಳಗಿ, ಅಪರ ಡಿಸಿ ರುದ್ರೇಶ ಗಾಳಿ, ಹೆಚ್ಚುವರಿ ಎಸ್ಪಿ ಶಿವಕುಮಾರ ಪಾಟೀಲ್ ಇದ್ದರು.