Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಡಾ.ಚನ್ನಣ್ಣ ಸ್ಥಾನಕ್ಕೆ ಡಾ.ಕ್ಷೀರಸಾಗರ ನಿಯೋಜನೆ

Wednesday, 27.06.2018, 11:04 PM       No Comments

ಬೀದರ್: ಅವ್ಯವಸ್ಥೆ ಜತೆಗೆ ಅವ್ಯವಹಾರದ ಗೂಡಾಗಿರುವ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಯಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆ ನಡೆಯುತ್ತಿದೆ. ಇಲ್ಲಿನ ಅವ್ಯವಸ್ಥೆ ಜತೆಗೆ ಅಕ್ರಮ ಆರೋಪಗಳಲ್ಲೂ ಸಿಲುಕಿರುವ ಬ್ರಿಮ್ಸ್ ನಿದರ್ೇಶಕ ಡಾ.ಚನ್ನಣ್ಣ ಅವರನ್ನು ದಿಢೀರ್ ಹುದ್ದೆಯಿಂದ ತೆರವುಗೊಳಿಸಿರುವುದು ಮತ್ತಷ್ಟು ಸಂಚಲನಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಬ್ರಿಮ್ಸ್ ಹಾಗೂ ಬೋಧಕ ಆಸ್ಪತ್ರೆಯತ್ತ ಚಿತ್ತ ಹರಿಸಿ ಜನಹಿತದಿಂದ ವ್ಯವಸ್ಥೆ ಸುಧಾರಣೆಗೆ ಕಠಿಣ ಕ್ರಮಕ್ಕೆ ಮುಂದಾದ ನಂತರ ಈ ಎಲ್ಲ ಬೆಳವಣಿಗೆ ನಡೆಯುತ್ತಿರುವುದು ಮಹತ್ವದ ಸಂಗತಿ. ವಾರದ ಹಿಂದೆಯೇ ಸಕರ್ಾರ ಬ್ರಿಮ್ಸ್ ವೈದ್ಯಕೀಯ ಅಧೀಕ್ಷಕರಾಗಿ ಡಾ.ಸಿ.ಎಸ್. ರಗಟೆ ಅವರನ್ನು ನೇಮಿಸಿತ್ತು. ಇದೀಗ ನಿದರ್ೇಶಕರನ್ನೇ ರಿಮೂವ್ ಆ್ಯಂಡ್ ರಿಪ್ಲೇಸ್ (ಇವರಿಗೆ ತೆಗೆದು ಬೇರೆಯವರಿಗೆ ನಿಯೋಜಿಸಲು) ಆದೇಶ ಹೊರಡಿಸಿರುವುದು ಗಮನಾರ್ಹ ಎನಿಸಿದೆ.

ವಿಜಯವಾಣಿಗೆ ಲಭ್ಯ ಮಾಹಿತಿ ಪ್ರಕಾರ, ಸಕರ್ಾರದ ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದಶರ್ಿ ಈ ಆದೇಶ ಹೊರಡಿಸಿ ನಿದರ್ೇಶಕ ಸ್ಥಾನದಿಂದ ತುತರ್ಾಗಿ ಜಾಗ ಖಾಲಿ ಮಾಡಲು ಡಾ.ಚನ್ನಣ್ಣ ಅವರಿಗೆ ಸೂಚಿಸಿದ್ದಾರೆ. ತೆರವಾಗುವ ಈ ಜಾಗದ ಪ್ರಭಾರವನ್ನು ಬ್ರಿಮ್ಸ್ ಅಂಗರಚನಾಶಾಸ್ತ್ರ (ಅನಾಟಮಿ) ವಿಭಾಗದ ಮುಖ್ಯಸ್ಥ ಡಾ.ಕ್ಷೀರಸಾಗರ ಅವರಿಗೆ ವಹಿಸಿಕೊಳ್ಳಲು ತಿಳಿಸಲಾಗಿದೆ. ಹೀಗಾಗಿ ಗುರುವಾರ ಬೆಳಗ್ಗೆ ಡಾ.ಕ್ಷೀರಸಾಗರ ಅವರು ಬ್ರಿಮ್ಸ್ ಪ್ರಭಾರಿ ನಿದರ್ೇಶಕರಾಗಿ ಕಾರ್ಯಭಾರ ವಹಿಸಿಕೊಳ್ಳಲಿದ್ದಾರೆ.

ಹೊರಗುತ್ತಿಗೆ ನೇಮಕ, ಪೀಠೋಪಕರಣ-ಯಂತ್ರೋಪಕರಣ, ಔಷಧ ಖರೀದಿಯಲ್ಲಿ ಬ್ರಿಮ್ಸ್ನಲ್ಲಿ ಭಾರಿ ಅವ್ಯವಹಾರ ನಡೆದಿದೆ. ಸಕರ್ಾರದ ಪಾರದರ್ಶಕ ಕಾಯ್ದೆ, ಟೆಂಡರ್ ನಿಯಮ ಮತ್ತು ಸಂಸ್ಥೆ ಬೈಲಾ ಉಲ್ಲಂಘಿಸಲಾಗಿದೆ ಎಂಬ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದರನ್ವಯ ಎಸಿಬಿ ಅಪರ ಪೊಲೀಸ್ ಮಹಾ ನಿದರ್ೇಶಕ ಅಲೋಕ್ ಮೋಹನ್ ಅವರು ವೈದ್ಯಕೀಯ ಇಲಾಖೆ ಸಕರ್ಾರದ ಪ್ರಧಾನ ಕಾರ್ಯದಶರ್ಿಗೆ ಪತ್ರ ಬರೆದು, ಅಕ್ರಮಕ್ಕೆ ಸಂಬಂಧಿಸಿದಂತೆ ಬ್ರಿಮ್ಸ್ ನಿದರ್ೇಶಕ ಡಾ.ಚನ್ನಣ್ಣ, ಮುಖ್ಯ ಆಡಳಿತಧಿಕಾರಿ ಡಾ.ಆನಂದಸಾಗರ ರೆಡ್ಡಿ ಸೇರಿ 10 ಅಧಿಕಾರಿ, ಸಿಬ್ಬಂದಿ ಮೇಲೆ ಎಫ್ಐಆರ್ ದಾಖಲಿಸಲು ಪೂವರ್ಾನುಮತಿ ಕೋರಿದ್ದಾರೆ. ಇದೆಲ್ಲದರ ನಡುವೆಯೇ ನಿದರ್ೇಶಕರಿಗೆ ಕೊಕ್ ನೀಡಲಾಗಿದೆ

Leave a Reply

Your email address will not be published. Required fields are marked *

Back To Top