ಸರ್ವರ ಹಿತದ ಸಾಹಿತ್ಯ ರಚಿಸಿ

ವಿಜಯವಾಣಿ ಸುದ್ದಿಜಾಲ ಬೀದರ್
ಮನಸ್ಸಿಗೆ ಬಂದದ್ದೆನೆಲ್ಲ ಬರೆದು ನಾನೂ ಸಾಹಿತಿ ಎಂದು ಬಿಂಬಿಸಿಕೊಳ್ಳುತ್ತಿರುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನಿಕಟಪೂರ್ವ ಗೌರವ ಕಾರ್ಯದಶರ್ಿ ಸಂಜೀವಕುಮಾರ ಅತಿವಾಳೆ ಬೇಸರ ವ್ಯಕ್ತಪಡಿಸಿದರು.

ಮಹರ್ಷಿ ವಾಲ್ಮೀಕಿ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಜಾನಪದ ಸಂಭ್ರಮ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ವರಿಗೂ ಹಿತವನ್ನುಂಟು ಮಾಡುವ ಸಾಹಿತ್ಯ ರಚನೆ ಮಾಡಿ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡುವುದೇ ನಿಜವಾದ ಸಾಹಿತಿಯ ಲಕ್ಷಣವಾಗಿದೆ ಎಂದರು.

ಜಿಲ್ಲೆಯಲ್ಲಿ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಭಾಗದಲ್ಲಿ ಉಳಿದಿರುವ ಜಾನಪದ ಕಲೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಜಾನಪದ ಕಲಾವಿದ ಹಾಗೂ ನಾಗರಿಕರ ಮೇಲಿದೆ ಎಂದು ಹೇಳಿದರು.

ಉತ್ತಮ ಸಮಾಜ ನಿಮರ್ಾಣದಲ್ಲಿ ಸಾಹಿತಿ, ಕಲಾವಿದರ ಪಾತ್ರ ಬಹಳ ಮಹತ್ತರವಾಗಿದೆ. ಗಟ್ಟಿ ಸಾಹಿತ್ಯ ರಚನೆ ಮಾಡುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುವುದು ಪ್ರಬುದ್ಧ ಸಾಹಿತಿಗಳ ಕಾರ್ಯವಾಗಿದೆ ಎಂದರು.

ಹಾಲಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡಾ.ರಾಮಚಂದ್ರ ಗಣಾಪುರ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಹಿರಿಯ ಕಲಾವಿ ಶಂಭುಲಿಂಗ ವಾಲ್ದೊಡ್ಡಿ, ಪ್ರಭುಶೆಟ್ಟಿ ಸೈನಿಕಾರ, ನಾಗಶೆಟ್ಟಿ ಧರಂಪುರ, ಜನಸೇವಾ ಗ್ರಾಮಿಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಎಂ.ಪಿ. ಮುದಾಳೆ, ಮಹಷರ್ಿ ವಾಲ್ಮೀಕಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ರಾಜಶೇಖರ ವಟಗೆ ಇದ್ದರು.