10ಸಾವಿರ ರೂ. ದಂಡ ವಸೂಲಿ

ಚಿಟಗುಪ್ಪ: ಪುರಸಭೆ ಮುಖ್ಯಾಧಿಕಾರಿ ಹುಸಾಮುದ್ದಿನ್ ಬಾಬಾ ನೇತೃತ್ವದ ತಂಡ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ 40 ಮೈಕ್ರಾನ್ಕ್ಕಿಂತ ಕಡಿಮೇ ಇರುವ ಕ್ಯಾರಿಬ್ಯಾಗ್ಗಳನ್ನು ವಶಕ್ಕೆ ಪಡೆದುಕೊಂಡು ಮಾಲಿಕರಿಂದ 10600 ರೂ.ಗಳ ದಂಡ ವಸೂಲಿ ಮಾಡಲಾಗಿದೆ.

ಪಟ್ಟಣದಲ್ಲಿ ಹಲವಾರು ಬಾರಿ ಧನಿವರ್ಧಕ ಮೂಲಕ ಹಾಗೂ ದಿನಪತ್ರಿಕೆಯ ಮುಖಾಂತರ ಪ್ಲಾಸ್ಟಿಕ ನಿಷೇಧ ಮಾಡಲು ಜಾಗೃತಿ ಮೂಡಿಸಿದರೂ ಸಹ ಕೆಲ ಅಂಗಡಿ ಮಾಲಿಕರು ಪಾ್ಲೃಸ್ಟಿಕ್ಗಳನ್ನು ಉಪಯೋಗಿಸುತ್ತಿರುವದು ಕಂಡು ಬಂದ ಹಿನ್ನೆಲೆ ಶನಿವಾರ ದಾಳಿ ಮಾಡಿ ಜಪ್ತಿ ಮಾಡಲಾಗಿದೆ.

ಆರೋಗ್ಯ ನಿರೀಕ್ಷಕ ಉಮೇಶ ಗುಡ್ಡದ, ಕಚೇರಿ ವ್ಯವಸ್ಥಾಪಕ ನರಸಿಂಹಲು, ಚಿದಾನಂದ ಪತ್ರಿ, ಸಂತೋಷ, ನರೇಶ ಘನತೆ, ರವಿ ಹಾಗೂ ಸಿಬ್ಬಂದ್ದಿ, ಪೊಲೀಸ್ ಸಿಬ್ಬಂಧಿ ಇದ್ದರು.

Leave a Reply

Your email address will not be published. Required fields are marked *