ದಾಂಪತ್ಯ ಜೀವನಕ್ಕೆ ಕಾಲಿಟ್ಟ 28 ಜೋಡಿ

ಬೀದರ್: ತಾಲೂಕಿನ ಆಣದೂರ ಗ್ರಾಮದ ಧಮ್ಮ ದರ್ಶನ ಭೂಮಿ ವೈಶಾಲಿ ನಗರದಲ್ಲಿ ಸೋಮವಾರ 28 ಜೊಡಿಗಳ ಸರಳ, ಸಾಮೂಹಿಕ ವಿವಾಹ ಸಮಾರಂಭ ನಡೆಯಿತು. ಜ್ಞಾನ ಮಾರ್ಗ ಸೊಸೈಟಿ, ಬುದ್ಧ ಬಸವ ಯುವಕ ಸಂಘ ಹಾಗೂ ಭಂತೆ ಧಮ್ಮಾನಂದ ಥೆರೋ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರಳ ಸಾಮೂಹಿಕ ವಿವಾಹ ನಡೆಯಿತು. ದುಂದು ವೆಚ್ಚ ರಹಿತ ಸರಳ ವಿವಾಹಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 28 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಧು ಮತ್ತು ವರರ ಕಡೆಯಿಂದ ತಲಾ 10 ರಿಂದ 15 ಜನ ಮಾತ್ರ ಪಾಲ್ಗೊಂಡಿದ್ದರು. ಬಂದವರಿಗೆಲ್ಲ ಅನ್ನ, ಸಾಂಬಾರು, ಡಬ್ಬಲ್ ಕಾ ಮಿಠಾ ಹಾಗೂ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ರಾಜರತನ್ ಅಂಬೇಡ್ಕರ್ ಮಾತನಾಡಿ, ಡಾ.ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆ ವಿರುದ್ದ ಹೋರಾಟ ಮಾಡಿ ಸಂವಿಧಾನದ ಮೂಲಕ ಎಲ್ಲರಿಗೆ ಸಮಾನತೆ ಕೊಟ್ಟಿದ್ದಾರೆ ಎಂದರು.
ಶ್ರೀ ಸಿದ್ಧರಾಮ ಶರಣರು ಬೆಲ್ದಾಳ ಮಾತನಾಡಿ, ಪುರುಷನಷ್ಟೇ ಮಹಿಳೆಯರಿಗೆ ಸ್ವಾತಂತ್ರೃ, ಸಮಾನತೆ ಇದೆ. ಪತಿ, ಪತ್ನಿ ಸಂಬಂಧ ಅತ್ಯಂತ ಆತ್ಮೀಯ ಸ್ನೇಹಿತರ ಸಂಬಂಧವಾಗಬೇಕು ಎಂದರು. ಶಿಶು ಅಭಿವೃದ್ಧಿ ಅಧಿಕಾರಿ ಮಚೇಂದ್ರ ವಾಘಮೋರೆ ಮಾತನಾಡಿದರು. ಜ್ಞಾನ ಸಾಗರ ಭಂತೆ, ಧಮ್ಮಾನಂದ ಭಂತೆ ಸಾನ್ನಿಧ್ಯ, ವಿದ್ಯಾಸಾಗರ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ಜನವಾಡ ಪಿಎಸ್ಐ ಸವಿತಾ ಪ್ರಿಯಾಂಕ್, ವಿದ್ಯಾ ಮನ್ನಳ್ಳಿ, ಸುದೇಶಕುಮಾರ, ಶಂಭುಲಿಂಗ ಕುದರೆ, ಸಾಧನಾ ಗಾಯಕವಾಡ ಸೋಲ್ಲಾಪುರ, ರಮೇಶ ಬಾಬು, ಆಯೋಜನೆ ಸಮಿತಿ ಗೌರವಾಧ್ಯಕ್ಷ ರಾಜರತನ್ ಸಿಂಧೆ, ಅಧ್ಯಕ್ಷ ಮಹೇಶ ಗೋರನಾಳಕರ್, ಉಪಾಧ್ಯಕ್ಷ ಮಹೇಶ ಮೂತರ್ಿ, ಕಾರ್ಯದಶರ್ಿ ಅಮರ ಅಲ್ಲಾಪುರ, ಪ್ರಧಾನ ಕಾರ್ಯದರ್ಶಿ ಪವನ ಗುನ್ನಳಿಕರ್, ಗೌತಮ ಮುತ್ತಂಗಿಕರ್, ಸಿದ್ಧಾಂತ ಸಿಂಧೆ, ಸಂಜುಕುಮಾರ ಬಲ್ಲೂರ್, ಸತೀಶ ಆಣದೂರ ಇತರರಿದ್ದರು. ಸುಬ್ಬಣ್ಣ ಕರಕನಳ್ಳಿ ಸ್ವಾಗತಿಸಿದರು. ಅರುಣ ಪಟೇಲ್ ನಿರೂಪಣೆ ಮಾಡಿದರು.