ಧ್ಯಾನ-ಯೋಗ ಮಂದಿರ ಲೋಕಾರ್ಪಣೆ ನಾಳೆ

ಬೀದರ್: ಭಾಲ್ಕಿ ತಾಲೂಕಿನ ಭಾತಂಬ್ರಾದಲ್ಲಿ ನಿಮರ್ಾಣವಾಗಿರುವ ಸುಸಜ್ಜಿತ ಶ್ರೀ ಹಾನಗಲ್ ಗುರುಕುಮಾರ ಶಿವಯೋಗಿಗಳ ಧ್ಯಾನ-ಯೋಗ ಮಂದಿರ ಹಾಗೂ ಜಗದ್ಗುರು ನಿರಂಜನ ಸಂಸ್ಥಾನ ಮಠದ ಉದ್ಘಾಟನೆ ಮಂಗಳವಾರ ನಡೆಯಲಿದ್ದು, ಅದ್ದೂರಿ ಸಮಾರಂಭಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಭಾತಂಬ್ರಾದ ಜಗದ್ಗುರು ನಿರಂಜನ ಸಂಸ್ಥಾನ ಮಠದ ಪೂಜ್ಯರಾದ ಶ್ರೀ ಜಗದ್ಗುರು ಶಿವಯೋಗೀಶ್ವರ ಸ್ವಾಮೀಜಿ ಸತ್ಸಂಕಲ್ಪದಂತೆ 1.50 ಕೋಟಿ ವೆಚ್ಚದಲ್ಲಿ ಧ್ಯಾನ-ಯೋಗ ಮಂದಿರ ನಿಮರ್ಾಣವಾಗಿದೆ. ಗ್ರಾಮ ಹೊರವಲಯದ 32 ಎಕರೆ ಪ್ರಶಾಂತ ಸ್ಥಳದಲ್ಲಿ ಭವ್ಯ ಮಂದಿರ ಕಟ್ಟಲಾಗಿದೆ. ಮಂದಿರದ ಗೋಪುರವನ್ನು ವಿಭೂತಿ ಲೇಪಿತ ಬೃಹತ್ ಲಿಂಗದ ಮಾದರಿ ಮಾಡಿದ್ದು, ಆಕರ್ಷಣೆ ಮತ್ತಷ್ಟು ಹೆಚ್ಚಿಸಿದೆ.

ಮಂಗಳವಾರ ಬೆಳಗ್ಗೆ 10.30ಕ್ಕೆ ಮಂದಿರವನ್ನು ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ನೆರವೇರಿಸಲಿದ್ದಾರೆ. ಜಗದ್ಗುರು ನಿರಂಜನ ಸಂಸ್ಥಾನ ಮಠವನ್ನು ಜಗದ್ಗುರು ಕೊಟ್ಟೂರೇಶ್ವರ ಸಂಸ್ಥಾನ ಮಠ ಹೊಸಪೇಟೆ-ಬಳ್ಳಾರಿಯ ಶ್ರೀ ಜಗದ್ಗುರು ಸಂಗನಬಸವ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ. ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ರಾಜೇಶ್ವರ ಶಿವಾಚಾರ್ಯ, ಮಾತೆ ಬಸವಾಂಜಲಿ, ಶ್ರೀ ಡಾ.ಶಂಭುಲಿಂಗ ಶಿವಾಚಾರ್ಯ ಪಾಲ್ಗೊಳ್ಳುವರು. ಮಾಜಿ ಸಚಿವ ಭೀಮಣ್ಣ ಖಂಡ್ರೆ ಅಧ್ಯಕ್ಷತೆ ವಹಿಸುವರು. ಕೆಪಿಸಿಸಿ ಕಾಯರ್ಾಧ್ಯಕ್ಷ ಈಶ್ವರ ಖಂಡ್ರೆ ಉದ್ಘಾಟಿಸುವರು.

ಸಂಜೆ 4ಕ್ಕೆ ಕಟ್ಟಡದ ದಾಸೋಹಿಗಳ ಸನ್ಮಾನ ನಡೆಯಲಿದೆ. ಕಾರ್ಯಕ್ರಮ ಅದ್ದೂರಿ, ಅರ್ಥಪೂರ್ಣ ಹಾಗೂ ಭಕ್ತಿಯಿಂದ ನಡೆಯುವ ನಿಟ್ಟಿನಲ್ಲಿ ಉತ್ಸವ ಸಮಿತಿ ಪ್ರಮುಖರು ಸಿದ್ಧತೆ ನಡೆಸಿದ್ದಾರೆ. ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಎಲ್ಲ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರುವಂತೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕಾರ್ಯಕ್ರಮ ಭಾತಂಬ್ರಾದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.