ಬಸವಕಲ್ಯಾಣ: ಇದು ಆ್ಯಕ್ಸಿಡೆಂಟ್ ಝೋನ್. ನಿಧಾನವಾಗಿ ವಾಹನ ಓಡಿಸಿ. ಸ್ವಲ್ಪ ಎಚ್ಚರ ತಪ್ಪಿದರೂ ಎಡವಟ್ಟು ನಿಶ್ವಿತ. ಹೌದು, ನಗರದ ಪ್ರಮುಖ ರಸ್ತೆಯೊಂದು ಸಂಬಂಧಿತರ ನಿರ್ಲಕ್ಷೃದಿಂದಾಗಿ ಅಪಘಾತ ವಲಯವಾಗಿ ಮಾರ್ಪಟ್ಟಿದೆ.
ಅಂಬೇಡ್ಕರ್ ವೃತ್ತದಿಂದ ಮೂಲಕ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಯುದ್ದಕ್ಕೂ ಬಿದ್ದಿರುವ ತಗ್ಗು-ಗುಂಡಿಗಳು ಸುರಕ್ಷಿತ ಸಂಚಾರಕ್ಕೆ ಸವಾಲು ಒಡ್ಡಿವೆ. ಬೈಕ್ ಸವಾರರಷ್ಟೇ ಅಲ್ಲ, ಬಸ್ನಲ್ಲಿದ್ದ ಪ್ರಯಾಣಿಕರಿಗೂ ಈ ಹದಗೆಟ್ಟ ರಸ್ತೆ ಬಿಸಿ ಸಾಕಷ್ಟು ಸಲ ತಟ್ಟಿದೆ. ಹೀಗಾಗಿ ಬೈಕ್ ಇರಲಿ, ಬಸ್ ಇರಲಿ, ಚಾಲಕರು ಸ್ವಯಂ ವೇಗ ನಿಯಂತ್ರಣ ನಿಯಮ ಅನುಸರಿಸಲೇಬೇಕಿದೆ.
ನಾರಾಯಣಪುರ ಕ್ರಾಸ್ನಿಂದ ಬಸ್ ನಿಲ್ದಾಣವರೆಗೆ ಸುಮಾರು 200 ಮೀಟರ್ ರಸ್ತೆ ಹಲವೆಡೆ ತೀವ್ರ ಹದಗೆಟ್ಟಿದೆ. ದೊಡ್ಡ-ದೊಡ್ಡ ತಗ್ಗು, ಗುಂಡಿಗಳು ಬಿದ್ದಿವೆ. ತಗ್ಗಿನಲ್ಲಿ ಮಳೆ ನೀರು, ರಾಡಿ ತುಂಬಿಕೊಂಡಿದೆ. ಕೆಲವೆಡೆಯಂತೂ ರಸ್ತೆಯೇ ಕಾಣದಂತಿದೆ.
ಕೆಸರಿನಲ್ಲಿ ಬೈಕ್ ಚಕ್ರ ಸಿಲುಕಿ ಹಲವರು ಬಿದ್ದಿದ್ದಾರೆ. ಬೈಕ್ನಲ್ಲಿ ಹಿಂಬದಿ ಕುಳಿತವರು ಸಹ ಕೆಳ ಬಿದ್ದ ಪ್ರಸಂಗ ನಡೆದಿದೆ. ಹಲವು ಬಾರಿ ಆಟೋ ಚಕ್ರ ತಗ್ಗಿನಲ್ಲಿ ಸಿಲುಕಿ ಚಾಲಕರು ಹೈರಾಣ ಆಗಿದ್ದಾರೆ. ಬಸ್ನಲ್ಲಿ ಕುಳಿತವರು ಜಂಪ್ಗೆ ಗಾಯ ಮಾಡಿಕೊಂಡಿದ್ದಿದೆ. ಹಗಲಲ್ಲೇ ಸಂಚಾರಕ್ಕೆ ಹಲವು ವಿಘ್ನಗಳಿರುವಾಗ ರಾತ್ರಿ ಇಲ್ಲವೆ ಮಳೆಯಾದ ಸಂದರ್ಭದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಎಂದರೆ, ಅಪಘಾತ ಮೈಮೇಲೆ ಎಳೆದುಕೊಂಡಂತೆಯೇ ಸರಿ.
ಧನ್ನೂರ, ಮುಚಳಂಬ, ಗೋಟರ್ಾ ಹಾಗೂ ಬಾಲಕುಂದಾ, ಬೇಲೂರ, ಹುಲಸೂರ ಇತರ ಗ್ರಾಮಗಳಿಗೆ ಹೋಗುವವರು ಈ ಮಾರ್ಗದಿಂದಲೇ ಸಂಚರಿಸಬೇಕು. ಹೀಗಾಗಿ ದಿನವಿಡೀ ಬಸ್, ವಾಹನ, ಬೈಕ್ ಹಾಗೂ ಜನಸಂಚಾರದ ಪ್ರಮುಖ ರಸ್ತೆ ಇದಾಗಿದೆ.
ಗೊಂದಲ: ತ್ರಿಪುರಾಂತನಿಂದ ಬಸ್ ನಿಲ್ದಾಣಕ್ಕೆ ಹೋಗುವ ರಾಜ್ಯ ಹೆದ್ದಾರಿ (ನಗರ ವ್ಯಾಪ್ತಿ) ಯಾರ ವ್ಯಾಪ್ತಿಗೆ ಬರುತ್ತದೆ ಎಂಬುದು ಸ್ಥಳೀಯ ಮಟ್ಟದಲ್ಲೇ ಗೊಂದಲವಿದೆ. ನಗರಸಭೆಯವರು ಲೋಕೋಪಯೋಗಿ ಇಲಾಖೆಗೆ ಬರುತ್ತದೆ ಎಂದರೆ, ಲೋಕೋಪಯೋಗಿ ಇಲಾಖೆಯವರು ಇದು ನಗರಸಭೆ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಿರುವುದಕ್ಕೆ ಈ ಗೊಂದಲಕ್ಕೆ ಕಾರಣವಾಗಿದೆ.
ಹದಗೆಟ್ಟ ರಸ್ತೆ ದುರಸ್ತಿ ಮಾಡುವಂತೆ ಶಾಸಕ ಬಿ.ನಾರಾಯಣರಾವ ಅಧಿಕಾರಿಗಳಿಗೆ ಸೂಚಿಸಿದ್ದರು. ನಗರಸಭೆಯಿಂದ ರಸ್ತೆಯ ಕೆಲ ತಗ್ಗುಗಳಿಗೆ ಮೆಟಲ್ ಹಾಕಿ ಭತರ್ಿ ಮಾಡಲಾಗಿತ್ತು. ಆದರೆ ಮಳೆಯಿಂದಾಗಿ ಮತ್ತದೇ ಸ್ಥಿತಿ ಸೃಷ್ಟಿಯಾಗಿದೆ. ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಮಂಜೂರಾಗಿದ್ದರೂ ರಸ್ತೆ ನಿಮರ್ಾಣ ಯಾವಾಗ ಎಂಬ ಪ್ರಶ್ನೆಗೆ ಸಂಬಂಧಿತರೇ ಉತ್ತರಿಸಬೇಕಿದೆ.