ಬೀದರ್: ಜಿಲ್ಲೆಯ ಕಲಾವಿದೆ ರೇಖಾ ಅಪ್ಪಾರಾವ್ ಸೌದಿ ಮತ್ತು ತಂಡ ಮತ್ತೊಮ್ಮೆ ವಿಶ್ವ ವಿಖ್ಯಾತ ಮೈಸೂರು ಯುವ ದಸರಾ ವೇದಿಕೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನೀಡಲು ಮತ್ತೆ ಮೈಸೂರು ಯುವ ದಸರಾ ಸಮಿತಿಯಿಂದ ಆಹ್ವಾನ ಪಡೆದಿದೆ.
ಕೆಲ ವರ್ಷಗಳಿಂದ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧೆಡೆ ಸಂಗೀತ ಕಾರ್ಯಕ್ರಮ ನೀಡಿ ಗಮನ ಸೆಳೆದಿರುವ ರೇಖಾ ಸೌದಿ ಹಾಗೂ ಅಮಿತ್ ಜನವಾಡಕರ್ ತಂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ನೇತೃತ್ವದ ಬೆಂಗಳೂರಿನ ಬೆನಕ ಸಂಸ್ಥೆ ಆಯೋಜಿಸಿದ್ದ ರಾಜ್ಯ ಮತ್ತದ ರಾಷ್ಟ್ರೀಯ ರಂಗಗೀತೆಗಳ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿತ್ತು.
ಅಲ್ಲದೆ ಇವರು ಮೈಸೂರು ದಸರಾದ ಯುವ ದಸರಾ -2017, ಹಂಪಿ ಉತ್ಸವ- 2017, ಬೀದರ್ನಲ್ಲಿ ನಡೆದ ರಾಜ್ಯ ಮಟ್ಟದ ಜನಪರ ಉತ್ಸವ- 2017, ಕಲಬುರಗಿ ಜಿಲ್ಲೆಯಲ್ಲಿ ನಡೆದ ರಾಷ್ಟ್ರಕೂಟ ಉತ್ಸವ 2017, ಶಿವಮೊಗ್ಗದ ಸಾಗರದಲ್ಲಿ ನಡೆದ ರಾಜ್ಯ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜನಪದ ಗೀತ ಗಾಯನ ಹಾಗೂ ದೂರದರ್ಶನ ವಾಹಿನಿ ಚಂದನದಲ್ಲಿ ಪ್ರಸಾರಗೊಳ್ಳುವ ಮಧುರ ಮಧುರವೀ ಮಂಜುಳ ಗಾನ, ಕಲಬುರಗಿ ಜಿಲ್ಲೆಯ ರೇವಗ್ಗಿ ರಟಕಲ್ ಉತ್ಸವ ಸೇರಿ ವಿವಿಧೆಡೆ ಸಂಗೀತ ಸಂಜೆ ಕಾರ್ಯಕ್ರಮ ನೀಡುವ ಮೂಲಕ ಸಂಗೀತ ಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದೀಗ ರೇಖಾ ಸೌದಿ ಅವರ ತಂಡ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ 13ರಂದು ಸಂಜೆ ಸಿನಿಮಾ ಸಂಗೀತ ಹಾಗೂ ರಂಗ ಗೀತೆಗಳ ಸಂಗೀತ ಕಾರ್ಯಕ್ರಮ ನೀಡಲಿದೆ