ಸಾಹಿತ್ಯಕ್ಕಿದೆ ಸಮಾಜ ಪರಿವರ್ತನೆ ಶಕ್ತಿ

ಬಸವಕಲ್ಯಾಣ: ಮನಸ್ಸು ಶುದ್ಧ, ಸಮಾಜದಲ್ಲಿ ಪರಿವರ್ತನೆ ತರುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಉಪಾಧ್ಯಕ್ಷ ಶಿವರಾಜ ನರಶೆಟ್ಟಿ ಹೇಳಿದರು.

ಅನುಭವ ಮಂಟಪ ಮತ್ತು ನಿವೇದಿತಾ ಹೂಗಾರ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನ ಟ್ರಸ್ಟ್ ಸಹಯೋಗದಡಿ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಎರಡು ದಿನದ ಸಾಹಿತ್ಯ ಸುಗ್ಗಿಯನ್ನು ಶನಿವಾರ ಉದ್ಘಾಟಿಸಿದ ಅವರು, ವಿಶ್ವಕ್ಕೆ ಸಮಾನತೆ ಸಂದೇಶ ಸಾರಿದ ಬಸವಣ್ಣನವರ ಕಾರ್ಯಕ್ಷೇತ್ರದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತ್ಯ ಸುಗ್ಗಿ ಸವರ್ಾಧ್ಯಕ್ಷ ಸೋಮುರಡ್ಡಿ ಮಾತನಾಡಿ, ಆಧುನಿಕತೆಯ ಗಾಢ ಪರಿಣಾಮದಿಂದಾಗಿ ಸಾಹಿತ್ಯದ ಮೌಲ್ಯಗಳು ಕುಸಿಯುತ್ತಿವೆ. ಯುವ ಸಮೂಹದಲ್ಲಿ ಸಾಹಿತ್ಯ ಓದಿನ ಅಭಿರುಚಿ ಕಡಿಮೆಯಾಗುವುದಕ್ಕೆ ಸಾಹಿತ್ಯದಿಂದ ಆಥರ್ಿಕವಾಗಿ ಏನನ್ನೂ ಪಡೆಯಲಾಗದು ಎಂಬ ಮನೋಭಾವವೇ ಕಾರಣ. ಈ ಮನೋಭಾವ ಅಳಿಸುವ ನಿಟ್ಟಿನಲ್ಲಿ ಗಟ್ಟಿ ಪ್ರಯತ್ನ ನಡೆಯಬೇಕಿದೆ ಎಂದರು.

ಬೆಳಗಾವಿಯ ಸಾಹಿತಿ ಸುರೇಶ ಕೊರಕಪ್ಪ ಮಾತನಾಡಿ, ಎರಡು ದಿನದ ಈ ವಿಶಿಷ್ಟ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ವಚನ ಗೋಷ್ಠಿ, ಚಿಂತನ-ಮಂಥನ, ಸಾಂಸ್ಕೃತಿಕ ಸಂಜೆ, ಯೋಗಾನುಭವ, ಕವಿಗೋಷ್ಠಿ, ಗಜಲ್ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಸಾಹಿತ್ಯದ ಎಲ್ಲ ಮಗ್ಗುಲಗಳನ್ನು ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮವೇ ಸಾಹಿತ್ಯ ಸುಗ್ಗಿ ಆಗಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ದೇವರು ಆಶೀರ್ವಚನ ನೀಡಿದರು. ಗದಗದ ವಚನಕಾತರ್ಿ ಅಕ್ಕಮಹಾದೇವಿ ವಿಶೇಷ ಉಪನ್ಯಾಸ ನೀಡಿದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಉಪನ್ಯಾಸಕ ಹಣಮಂತರಾವ ಭರಶೆಟ್ಟಿ, ಶಿಕ್ಷಕ ಭೀಮಶಾ ವಿಭೂತಿ ಮಾತನಾಡಿದರು. ಮಾತೆ ಸುಜ್ಞಾನಿದೇವಿ ಸಮ್ಮುಖ ವಹಿಸಿದ್ದರು. ಪ್ರಮುಖರಾದ ವೀರಣ್ಣ ಪಾಟೀಲ್ ದಳಪತಿ, ಲಕ್ಷ್ಮೀಬಾಯಿ ಪಾಟೀಲ್ ಉಪಸ್ಥಿತರಿದ್ದರು. ನಿವೇದಿತಾ ಹೂಗಾರ ಪ್ರತಿಷ್ಠಾನದ ಸಂಸ್ಥಾಪಕ ಅಧ್ತಕ್ಷೆ ಶ್ರೀದೇವಿ ಹೂಗಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ನಾಗೇಶ ಸ್ವಾಮಿ ವಂದಿಸಿದರು. ಸಾರಿಕಾ ಗಂಗಾ ನಿರೂಪಣೆ ಮಾಡಿದರು.

ಪ್ರಶಸ್ತಿ ಪ್ರದಾನ: ಧಾರವಾಡದ ಮಕ್ಕಳ ಹೋರಾಟಗಾತರ್ಿ ಮಂಜುಳಾ ಮನವಳ್ಳಿ ಅವರಿಗೆ ನಿವೇದಿತಾ ಟ್ರಸ್ಟ್ನಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಮಂಜುಳಾ ಮಾತನಾಡಿ, ಈ ಪ್ರಶಸ್ತಿ ನನ್ನ ಜವಾಬ್ದಾರಿ ಹೆಚ್ಚಿಸಿದೆ. ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಸಮಾಜ ಮತ್ತು ರಾಷ್ಟ್ರದ ಆಸ್ತಿಯಾಗಿ ರೂಪಿಸಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.