83.86 ಲಕ್ಷ ರೂ. ಸ್ವತ್ತು ವಾರಸುದಾರರಿಗೆ ವಾಪಸ್ ಸಿಕ್ತು

ವಿಜಯವಾಣಿ ಸುದ್ದಿಜಾಲ ಬೀದರ್
ಜಿಲ್ಲೆಯ ವಿವಿಧೆಡೆ ನಡೆದ ಕಳ್ಳತನ, ಸುಲಿಗೆ, ದರೋಡೆ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು, ಈ ಸಂಬಂಧ ಅವರಿಂದ ವಶಪಡಿಸಿಕೊಂಡ ನಗದು, ಬಂಗಾರ ಸೇರಿದಂತೆ 83.86 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಾರಸುದಾರರಿಗೆ ಮರಳಿಸಲಾಗಿದೆ.

ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ಪ್ರಾಪಟರ್ಿ ರಿಟನರ್್ ಪರೇಡ್ನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಅವರು, ವಿವಿಧ ಪ್ರಕರಣಗಳಲ್ಲಿ ಸ್ವತ್ತನ್ನು ಕಳೆದುಕೊಂಡ ವಾರಸುದಾರರಿಗೆ ಅವುಗಳನ್ನು ವಾಪಸ್ ಮಾಡಿದರು. ಕಳೆದು ಹೋದ ಮಾಲು ಪತ್ತೆ ಹಚ್ಚಿ, ಮರಳಿಸಿದ್ದರಿಂದ ಖುಷಿಯಾದ ಸ್ವತ್ತಿನ ಮಾಲೀಕರು ಪೊಲೀಸರಿಗೆ ಹ್ಯಾಟ್ಸಾ್ ಹೇಳಿದರು.

ಪೊಲೀಸ್ ಇಲಾಖೆಯಿಂದ 2018ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕಳುವಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ವಾರಸುದಾರರಿಗೆ ಹಿಂದಿರುಗಿಸಿದರು. ಜಿಲ್ಲೆಯಲ್ಲಿ ಡಕಾಯಿತಿ, ಸುಲಿಗೆ, ಕಳವು, ಸಾಮಾನ್ಯ ಕಳವು, ಜಾನುವಾರು ಕಳುವು ಹಾಗೂ ಇತರೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 5,59,54,990 ರೂ. ಮೌಲ್ಯದ ಸ್ವತ್ತು ಕಳುವಾಗಿತ್ತು. ಅದರಲ್ಲಿ 1,21,52,094 ಮೌಲ್ಯದ ಸ್ವತ್ತನ್ನು ಇಲಾಖೆಯಿಂದ ಪತ್ತೆ ಹಚ್ಚಲಾದ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ವಾರಸುದಾರರಿಗೆ ಹಿಂತಿರುಗಿಸಲು ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡ 83,86,755 ರೂ. ಮೌಲ್ಯದ ಸ್ವತ್ತನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ಇದರಲ್ಲಿ ಚಿನ್ನ, ಬೆಳ್ಳಿ, ಮೋಟಾರ್ ಸೈಕಲ್, ಲಾರಿ, ನಗದು ಹಣ, ಮೊಬೈಲ್ ಹಾಗೂ ಇತರೆ ವಸ್ತುಗಳು ಸೇರಿವೆ ಎಂದು ಹೆಚ್ಚುವರಿ ಎಸ್ಪಿ ಶ್ರೀಹರಿಬಾಬು ಹೇಳಿದರು.

1,53,675 ನಗದು, 17.23 ಲಕ್ಷ ಮೌಲ್ಯದ 58 ತೊಲಾ ಬಂಗಾರದ ಆಭರಣ, ಎರಡು ಲಾರಿ (29 ಲಕ್ಷ), 55 ಬೈಕ್ (24.11 ಲಕ್ಷ), 11.98 ಲಕ್ಷ ಮೌಲ್ಯದ ಮೊಬೈಲ್ ಹಾಗೂ ಇತರೆ ವಸ್ತು ಸೇರಿದಂತೆ ಒಟ್ಟು 83.86 ಲಕ್ಷ ರೂ. ಸ್ವತ್ತನ್ನು ಹಿಂತಿರುಗಿಸಲಾಗಿದೆ ಎಂದು ಹೇಳಿದರು.

ಡಿವೈಎಸ್ಪಿಗಳಾದ ಹುಣಸಿಕಟ್ಟಿ ಬೀದರ್, ವೆಂಕನಗೌಡ ಪಾಟೀಲ್ ಭಾಲ್ಕಿ, ಎಸ್.ಬಿ. ಮಹೇಶ್ವರಪ್ಪ ಹುಮನಾಬಾದ್ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.