ಹರಿಣಗಳಿಗೆ ಆರಂಭಿಕ ಆಘಾತ ನೀಡಿದ ಭುವಿ, ಟೆಸ್ಟ್​ ಪದಾರ್ಪಣೆ ಮಾಡಿದ ಬುಮ್ರಾ

ಕೇಪ್​ ಟೌನ್​: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಹರಿಣಗಳಿಗೆ ಭುವನೇಶ್ವರ ಕುಮಾರ್​ ಆರಂಭಿಕ ಆಘಾತ ನೀಡಿದರು.

ಇಲ್ಲಿನ ನ್ಯೂಲ್ಯಾಂಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್​ಮನ್​ಗಳು ರನ್​ ಗಳಿಸಲು ಪರದಾಡಿದರು. ಭುವನೇಶ್ವರ ಕುಮಾರ ಅವರ ದಾಳಿಗೆ ಕೇವಲ 12 ರನ್​ ಗಳಿಸುವುದರೊಳಗಾಗಿ ಆರಂಭಿಕ ಬ್ಯಾಟ್ಸ್​ಮನ್​ಗಳಾದ ಡೀನ್​ ಎಲ್ಗಾರ್​(0) ಮತ್ತು ಮಾರರ್ಕಮ್ (5) ಹಾಗೂ ಹಶೀಮ್​ ಆಮ್ಲಾ (3) ಪೆವಿಲಿಯನ್​ ಸೇರಿದ್ದರು.

ಬುಮ್ರಾ ಟೆಸ್ಟ್​ ಪಾದಾರ್ಪಣೆ
ಯಾರ್ಕರ್​ ಸ್ಪೆಶಲಿಸ್ಟ್​ ಜಪ್ರೀತ್​ ಬುಮ್ರಾ ಈ ಪಂದ್ಯದ ಮೂಲಕ ಟೆಸ್ಟ್​ಗೆ ಪಾದಾರ್ಪಣೆ ಮಾಡಿದ್ದಾರೆ. ನಾಯಕ ವಿರಾಟ್​ ಕೊಹ್ಲಿಯಿಂದ ತಮ್ಮ ಕ್ಯಾಪ್​ ಪಡೆದುಕೊಂಡ ಅವರು ಈ ಪಂದ್ಯ ಆಡುತ್ತಿರುವ ವೇಗಿಗಳಲ್ಲಿ ಒಬ್ಬರಾಗಿದ್ದಾರೆ.

ಇತ್ತೀಚಿನ ವರದಿ ಬಂದಾಗ ದಕ್ಷಿಣ ಆಫ್ರಿಕಾ 3 ವಿಕೆಟ್​ ಕಳೆದುಕೊಂಡು 70 ರನ್​ ಗಳಿಸಿದೆ.

Leave a Reply

Your email address will not be published. Required fields are marked *