PHOTOS: ಫೊನಿ ಚಂಡಮಾರುತದಿಂದ ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ಆಗಿರುವ ಅನಾಹುತಗಳ ದೃಶ್ಯಾವಳಿ

ಭುವನೇಶ್ವರ: ಒಡಿಶಾದ ಪುರಿ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಅಪ್ಪಳಿಸಿರುವ ಫೊನಿ ಚಂಡಮಾರುತದಿಂದಾಗಿ ಭುವನೇಶ್ವರದಲ್ಲೂ ಸಾಕಷ್ಟು ಹಾನಿ ಉಂಟಾಗಿದೆ. ಫೊನಿ ಚಂಡಮಾರುತ ಅಪ್ಪಳಿಸುವ ಮುನ್ನ ರಭಸವಾಗಿ ಬೀಸಿದ ಗಾಳಿಯಿಂದಾಗಿ ಹಲವು ಮರಗಳು ಬುಡಮೇಲಾಗಿ ಬಿದ್ದವು.

ಜಾಹೀರಾತು ಫಲಕಗಳು, ಮೊಬೈಲ್​ ಟವರ್​ಗಳು, ವಿದ್ಯುತ್​ ಕಂಬಗಳು ಕೂಡ ಗಾಳಿ ರಭಸದೆದುರು ತರಗೆಲೆಗಳಂತಾಗಿ ಉರುಳಿ ಬಿದ್ದವು.

ಫೊನಿ ಚಂಡಮಾರುತದ ಭೀತಿಯಿಂದಾಗಿ ಭಾರತೀಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಅನ್ಯ ಸ್ಥಳಗಳಿಗೆ ರೈಲಿನಲ್ಲಿ ಪ್ರಯಾಣಿಸಲು ಇಚ್ಛಿಸಿದ್ದವರು ರೈಲುಗಳ ಸಿಗದೆ ನಿಲ್ದಾಣಗಳಲ್ಲೇ ಆಶ್ರಯ ಪಡೆದುಕೊಂಡರು. (ಏಜೆನ್ಸೀಸ್​)

 



Leave a Reply

Your email address will not be published. Required fields are marked *