ಸಿದ್ದಾಪುರ: ತಾಲೂಕಿನ ಭುವನಗಿರಿಯ ಭುವನೇಶ್ವರಿ ದೇವಿ ಸನ್ನಿಧಿಯಲ್ಲಿ ಮಾತೃವಂದನಾ ಸಮಿತಿ, ತಾಲೂಕು ಪತ್ರಕರ್ತರ ಸಂಘ ಹಾಗೂ ಭುವನಗಿರಿ ದೇವಾಲಯದ ಸಹಕಾರದೊಂದಿಗೆ ನ. 1ರಂದು ಬೆಳಗ್ಗೆ 10 ಗಂಟೆಗೆ ಮಾತೃವಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಭುವನೇಶ್ವರಿ ಮಾತೆಗೆ ಪೂಜೆ, ಕನ್ನಡ ಧ್ವಜಾರೋಹಣ, ನಂತರ ನಡೆಯುವ ಸಭಾ ಕಾರ್ಯಕ್ರಮವನ್ನು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಉದ್ಘಾಟಿಸುವರು.
ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಬಿಇಒ ಎಂ.ಎಚ್. ನಾಯ್ಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಎಸ್. ಹೆಗಡೆ ಶಿರಸಿ, ಬೇಡ್ಕಣಿ ಗ್ರಾ.ಪಂ. ಸದಸ್ಯ ಗೋವಿಂದ ನಾಯ್ಕ, ಸಮಿತಿಯ ಗೌರವ ಸಲಹೆಗಾರ ಎ.ಪಿ. ಭಟ್ಟ ಮುತ್ತಿಗೆ ಉಪಸ್ಥಿತರಿರುವರು. ಭುವನಗಿರಿ ದೇವಾಲಯದ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಕಮಲಾಕರ ಹೆಗಡೆ ಹುಕ್ಲಮಕ್ಕಿ, ಖ್ಯಾತ ಸ್ತ್ರೀರೋಗ ತಜ್ಞ ಡಾ.ಕೆ.ಶ್ರೀಧರ ವೈದ್ಯ, ಅರಿವಳಿಕೆ ತಜ್ಞ ಡಾ.ಸುಮಂಗಲಾ ವೈದ್ಯ ಅವರಿಗೆ ಶ್ರೀ ಮಾತಾ ಅನುಗ್ರಹ ಗೌರವ ಸಮ್ಮಾನ ಪ್ರದಾನ ಮಾಡಲಾಗುವುದು.
ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವರ್ಷಾ ಮಡ್ಲೂರು, ನಾಗಶ್ರೀ ಗೌಡ, ಸಿಂಚನಾ ಹೆಗಡೆ, ದಿಶಾ ಶಾನಭಾಗ, ಎನ್.ಎಸ್. ಸಾಧನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.