ಸಂಶೋಧನೆ ಕ್ಷೇತ್ರಕ್ಕೆ ಭೂಸನೂರಮಠರ ಕೊಡುಗೆ ಅನನ್ಯ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಹಿತ್ಯ, ವಿಮರ್ಶೆ, ಸಂಶೋಧನೆ ಕ್ಷೇತ್ರಕ್ಕೆ ಭೂಸನೂರಮಠರ ಕೊಡುಗೆ ಅನನ್ಯ. ಅವರ ಭವ್ಯಮಾನವ ಮತ್ತು ಶೂನ್ಯ ಸಂಪಾನೆಯ ಪರಾಮರ್ಶೆ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳಾಗಿವೆ ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ. ಬಿ.ವಿ. ಶಿರೂರ ಹೇಳಿದರು.
ನಗರದ ರಂಗಾಯಣ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2024ನೇ ಸಾಲಿನ ಸಂ.ಶಿ. ಭೂಸನೂರಮಠ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಡಾ. ಸುಜಾತಾ ದೇವರಮನಿ ಶೂನ್ಯ ಸಂಪಾನೆಯ ಪರಾಮರ್ಶೆ ಕೃತಿಯ ಕುರಿತು ಮಾತನಾಡಿ, ಭೂಸನೂರಮಠ ಅವರ ಸಾಹಿತ್ಯ ಆಳ ಮತ್ತು ವಿಸ್ತಾರವಾದ ಅಧ್ಯಯನದ ವಿಷಯ ವಸ್ತು ಒಳಗೊಂಡಿದೆ. ಧರ್ಮ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಬದುಕಿನ ಸಾರವನ್ನು ತಿಳಿಸುವ ಸಂಗತಿಗಳು ಹಿರಿಯರಿಗೆ ಸುಲಭವಾಗಿ ಅರ್ಥವಾಗುತ್ತವೆ. ಇಂದಿನ ಯುವಕರಿಗೆ ಅರ್ಥೈಸುವುದು ಕಷ್ಟದ ಕಾರ್ಯವಾಗಿದೆ ಎಂದರು.
ಡಾ. ಬಿ. ವಿ. ಶಿರೂರ ಅವರ ಜೀವನ ಸಾಧನೆಗಳ ಕುರಿತು ಡಾ. ಧನವಂತ ಹಾಜವಗೋಳ ಮಾತನಾಡಿದರು.
ಇದೇವೇಳೆ ಸಾಹಿತಿ ಡಾ. ಜಿ.ಎಂ. ಹೆಗಡೆ ಅವರಿಗೆ ಹಿರಿಯ ನಾಗರಿಕ ಗೌರವ ಸನ್ಮಾನ ಮಾಡಲಾಯಿತು.
ಹಿರೇಮಲ್ಲೂರ ಈಶ್ವರನ್ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಶಿಧರ ತೋಡಕರ ಮಾತನಾಡಿ, ಭೂಸನೂರಮಠ ಪ್ರಶಸ್ತಿಗೆ ಭಾಜನರಾದ ಡಾ. ಶಿರೂರ ಅವರು ನಮ್ಮ ತಲೆಮಾರಿನ ಶ್ರೇಷ್ಠ ಪ್ರಾಧ್ಯಾಪಕರು ಎಂದರು.
ಡಾ. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಸುಭಾಸ ಭೂಸನೂರಮಠ, ಡಾ. ಸಿ.ಆರ್. ಯರವಿನತೆಲಿಮಠ ಹಾಗೂ ಭೂಸನೂರಮಠ ಕುಂಟುAಬದವರು, ಶಿಷ್ಯರು ಉಪಸ್ಥಿತರಿದ್ದರು.
ಗಾಯತ್ರಿ ಸರದೇಶಪಾಂಡೆ ಪ್ರಾರ್ಥಿಸಿದರು. ಡಾ. ರುದ್ರೇಶ ಮೇಟಿ ಸ್ವಾಗತಿಸಿದರು. ಡಾ. ಕುಮಾರ ಹಿರೇಮಠ ವಂದಿಸಿದರು.

Share This Article

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…

ಬಹಳ ಇಷ್ಟಪಟ್ಟು ಪನೀರ್​ ಸೇವಿಸುತ್ತಿದ್ದೀರಾ; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ವಿಷಯ ಇದು.. | Health Tips

ನಾನ್​ವೆಜ್​​​​​​ ಇಷ್ಟಪಡದವರು ಪ್ರೋಟೀನ್​ಗಾಗಿ ಪನೀರ್​​​​ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಇದು ನಿಜವಾಗಿಯೂ ಪ್ರೋಟೀನ್‌ಗೆ ಉತ್ತಮವಾದ…