ಕಲ್ಯಾಣಮಂಟಪ ನಿರ್ಮಾಣಕ್ಕೆ ಭೂಮಿಪೂಜೆ

blank

ಬಾಗೂರು: ನಾಗರನವಿಲೆ ಗ್ರಾಮದ ನಾಗೇಶ್ವರ ಸ್ವಾಮಿ ದೇವಾಲಯದ ಕ್ಷೇತ್ರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.
ಮಂಟಪ ನಿರ್ಮಾಣ ಗುಣಮಟ್ಟದಿಂದ ಕೂಡಿರಬೇಕು. ಮದುವೆ, ಮಾಂಗಲ್ಯ ಧಾರೆ ಮಂಟಪ, ಊಟದ ಹಾಲ್ ಹಾಗೂ ರೂಂಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು ಎಂದು ಇಂಜಿನಿಯರ್‌ಗೆ ಸೂಚನೆ ನೀಡಿದರು. 80 ಲಕ್ಷ ರೂ. ವೆಚ್ಚದಲ್ಲಿ ತೇರು ನಿರ್ಮಾಣವಾಗುತ್ತಿದೆ. ಭಕ್ತರು ಹೆಚ್ಚಿನ ಸಹಕಾರ ನೀಡಬೇಕು. ನಾಗದೋಷ ನಿವಾರಣೆಗೆ ವಿಶೇಷ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಆಗಮಿಸುತ್ತಾರೆ. ಇದಕ್ಕಾಗಿ ತಿಪಟೂರು ಚನ್ನರಾಯಪಟ್ಟಣದಿಂದ ಬರುವ ಭಕ್ತರಿಗೆ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಭೋವಿ ಕಾಲನಿಯಿಂದ ಕಾಂಕ್ರೀಟ್ ರಸ್ತೆ ಅರ್ಚಕರುಗಳಿಗೆ ವಿಶ್ರಾಂತಿ ಗೃಹ, ದೇಗುಲ ಪ್ರದಕ್ಷಿಣೆಗೆ ಮ್ಯಾಟ್ ಹಾಕಿಸುವ ಭರವಸೆ ನೀಡಿದರು.
ಮುಜರಾಯಿ ತಹಸೀಲ್ದಾರ್ ಲತಾ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೇ ಎನ್.ಪರಮೇಶ್, ಇಂಜಿನಿಯರ್ ಸಿದ್ದೇಗೌಡ, ಉದ್ಯಮಿ ಭುವನಹಳ್ಳಿ ಯೋಗೇಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಸಂಪತ್ ಕುಮಾರ್, ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎನ್.ಬಿ.ನಾಗರಾಜ್, ಮುಖಂಡರಾದ ಭಕ್ತರಹಳ್ಳಿ ಪುಟ್ಟರಾಜು, ಎನ್.ಕೆ.ನಾಗಪ್ಪ, ಕೊಟ್ಟಿಗೆ ಮನೆ ನಾಗೇಶ್, ದೇವರಾಜ್, ನಂಜುಂಡೇಗೌಡ, ರಾಜು, ಎನ್.ಸಿ.ರವಿ, ಎನ್.ದಿನೇಶ್, ಮಲ್ಲೇಶ್, ನಿವೃತ್ತ ಇಂಜಿನಿಯರ್ ಸದಾಶಿವಯ್ಯ, ಎನ್.ಎಲ್.ನಾಗರಾಜ್, ನವೀನ್ ಕುಮಾರ್, ಲೋಹಿತ್, ಅರ್ಚಕರಾದ ಶಂಕರ್ ಪ್ರಸಾದ್ ಅಭಿ ಶಾಸ್ತ್ರಿ, ಸಿದ್ದೇಶ್, ಸಂತೋಷ್, ಗ್ರಾಮಸ್ಥರು ಇತರರು ಹಾಜರಿದ್ದರು.

Share This Article

ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ತುಪ್ಪವನ್ನು ತಿನ್ನಲೇ ಬಾರದು ಗೊತ್ತಾ? ghee benefits and risks

ಬೆಂಗಳೂರು: ( ghee benefits and risks) ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು.  ತುಪ್ಪ ಹಲವು…

ಬಿಸಿಲಿನ ವಾತಾವರಣದಲ್ಲಿ ನಿಮ್ಮ ಕಾರಿನೊಳಗೆ ತಂಪಾಗಿರಲು ಬಯಸುವಿರಾ? ಈ ಟ್ರಿಕ್ ಟ್ರೈ ಮಾಡಿ.. Summer Car Tips

ಬೆಂಗಳೂರು: (Summer Car Tips ) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿಇಂದ ರಕ್ಷಣೆ ಪಡೆಯಲು…

ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್​ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol

Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್​ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…