ಭುವನೇಶ್ವರಿ ತೇರಿನ ಅದ್ದೂರಿ ಸ್ವಾಗತಕ್ಕೆ ನಿರ್ಧಾರ

blank

ವಿಜಯವಾಣಿ ಸುದ್ದಿಜಾಲ ನರೇಗಲ್ಲ
ಗಜೇಂದ್ರಗಡದಲ್ಲಿ ಜ.20 ಮತ್ತು 21ರಂದು ಹಮ್ಮಿಕೊಂಡಿರುವ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಪ್ರತಿ ಊರಿನಲ್ಲೂ ಭುವನೇಶ್ವರಿ ಜ್ಯೋತಿ ರಥಯಾತ್ರೆ ಹಮ್ಮಿಕೊಂಡಿದ್ದು, ಜ.19ರಂದು ಪಟ್ಟಣಕ್ಕೆ ಆಗಮಿಸುವ ಯಾತ್ರೆಗೆ ಪಪಂ ಹಾಗೂ ಕನ್ನಡ ಪರ ಸಂಘಟನೆಗಳಿಂದ ಅದ್ದೂರಿ ಸ್ವಾಗತ ನೀಡಲು ಗುರುವಾರ ಏರ್ಪಾಟಾಗಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಕನ್ನಡದ ತೇರೆಳೆಯಲು ನರೇಗಲ್ಲ ಸಜ್ಜಾಗಿದೆ. ಭಾನುವಾರ ಬೆಳಗ್ಗೆ ಆಗಮಿಸುವ ಭುವನೇಶ್ವರಿ ಭಾವಚಿತ್ರದ ರಥಯಾತ್ರೆಗೆ ಪಪಂ ವತಿಯಿಂದ ಧ್ವಜ ವಿತರಿಸಲಾಗುವುದು. ಮೆರವಣಿಗೆಯು ಜಕ್ಕಲಿ ರಸ್ತೆಯ ಕೆಇಬಿಯಿಂದ ಬಸ್ ನಿಲ್ದಾಣ, ಪಟ್ಟಣ ಪಂಚಾಯಿತಿ, ಗ್ರಾಮದೇವತೆ ದೇವಸ್ಥಾನ, ಗಜಾನನ ದೇವಸ್ಥಾನ, ಮಾರೆಮ್ಮನ ಗುಡಿ, ಹಳೇ ಬಸ್ ನಿಲ್ದಾಣದ ಮೂಲಕ ಗಜೇಂದ್ರಗಡ ತಲುಪಲಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕನ್ನಡಪರ ಸಂಘಟನೆಗಳ ಸದಸ್ಯರಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಾಹಿತಿ ಎಂ.ಎಸ್. ಧಡೇಸೂರಮಠ ಮಾತನಾಡಿ, 3 ಕಲಾ ತಂಡಗಳು ಆಗಮಿಸಲಿವೆ. ತಾಲೂಕಿನಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಅತ್ಯಂತ ವೈಭವದಿಂದ ಆಚರಿಸೋಣ ಎಂದರು.
ಕರವೇ ಜಿಲ್ಲಾಧ್ಯಕ್ಷ ಎಚ್.ಎಚ್ ಅಬ್ಬಿಗೇರಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ಕೆ.ಎಸ್. ಕಳಕಣ್ಣವರ, ಎಂ.ಕೆ. ಬೆವಿನಕಟ್ಟಿ ಮಾತನಾಡಿದರು. ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಉಪತಹಶೀಲ್ದಾರ್ ಎಸ್.ಜಿ ದೊಡ್ಡಮನಿ, ಸಿಆರ್‌ಪಿ ಜ್ಯೋತಿ ಬೇಲೇರಿ, ಪಪಂ ಸದಸ್ಯರಾದ ಮಲ್ಲಿಕಾರ್ಜುನಗೌಡ ಭೂಮನಗೌಡ, ಶ್ರೀಶೈಲಪ್ಪ ಬಂಡಿಹಾಳ, ದಾವೂದಲಿ ಕುದರಿ, ಮಲ್ಲಿಕಸಾಬ್ ರೋಣದ, ಈರಪ್ಪ ಜೋಗಿ, ಸಕ್ರಪ್ಪ ಹಡಪದ, ಶೇಖಪ್ಪ ಕೆಂಗಾರ, ಕೆ.ಎಸ್. ಪೊಲೀಸ್‌ಪಾಟೀಲ, ನಿಂಗನಗೌಡ ಲಕ್ಕನಗೌಡ್ರ, ಎಸ್.ಎಸ್. ಹಂಜಿ, ಎಎಸ್‌ಐ ಶೇಖರ ಹೊಸಳ್ಳಿ, ಇತರರಿದ್ದರು.

Share This Article

ರಾತ್ರಿ 11 ಗಂಟೆ ಮೇಲೆ ನಿದ್ದೆ ಮಾಡುತ್ತಿದ್ದೀರಾ.. ಕಾದಿದೆ ನಿಮಗೆ ಅಪಾಯ; ತಜ್ಞರ ಕೊಟ್ಟ ಏಚ್ಚರಿಕೆ ಏನು ಗೊತ್ತೆ! | Sleep

Sleep:ಇಂದಿನ ಕಾಲದ ಜನರ ಜೀವನ ಶೈಲಿಯಲ್ಲಿ ಹಲವು ಬದಲಾವಣೆಯಾಗಿವೆ. ಈ ಬದಲಾವಣೆಯಲ್ಲಿ ಒಂದು ರಾತ್ರಿ ಬೇಗ…

ಮೂತ್ರ ವಿಸರ್ಜಿಸಲು ತೊಂದರೆ ಅನುಭವಿಸುತ್ತಿದ್ದಿರಾ; ಇಲ್ಲಿದೆ ಅದರ ಹಿಂದಿನ ಕಾರಣದ ಮಾಹಿತಿ| Health Tips

ಪುರುಷರಾಗಿರಲಿ ಅಥವಾ ಮಹಿಳೆಯಾಗಿರಲಿ ಯಾರಿಗಾದರೂ ಮೂತ್ರ ವಿಸರ್ಜನೆಯಲ್ಲಿ ತೊಂದರೆ ಇದ್ದರೆ ಅದರ ಹಿಂದೆ ಹಲವು ಕಾರಣಗಳಿರಬಹುದು.…

Brown or White Bread.. ಯಾವುದು ಆರೋಗ್ಯಕ್ಕೆ ಉತ್ತಮ; ತಜ್ಞರು ಹೇಳೊದೇನು? | Health Tips

ಆರೋಗ್ಯದ ಕಾರಣಗಳಿಗಾಗಿ ನೀವು ವೈಟ್​ ಬ್ರೆಡ್ ಬದಲಿಗೆ ಬ್ರೌನ್​ ಬ್ರೆಡ್ ತಿನ್ನುತ್ತೀರಾ? ಸರಿ. ನೀವು ಮಾತ್ರವಲ್ಲ…